ದೇವನಹಳ್ಳಿ: ಇಂದು ದೇವನಹಳ್ಳಿಗೆ ಅಮಿತ್ ಷಾ ಬೇಟಿ ಹಿನ್ನೆಲೆಯಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಈ ಸಂದರ್ಭ ಬಿಜೆಪಿಯ ಚಾಣಕ್ಯ ಎಂದೇ ಕರೆಸಿಕೊಳ್ಳುವ ಅಮಿತ್ ಷಾ 800 ವರ್ಷ ಹಳೆಯ ಪುರಾತನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕಮಲ ಅರಳಿಸಲು ಬೆಂಗಳೂರಲ್ಲೇ ಮನೆ ಮಾಡಲಿರುವ ಅಮಿತ್ ಷಾ!
ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದ ಚೆನ್ನಕೇಶವ ಸ್ವಾಮಿ ದೇವಾಲಯಕ್ಕೆ ಅಮಿತ್ ಷಾ ಭೇಟಿ ನೀಡಲಿದ್ದಾರೆ. ರಣಬೈರೆಗೌಡರ ಕಾಲದ ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದೆ. ಇಂತಹ ವಿಶೇಷ ಹಾಗೂ ಪುರಾತನ ದೇವಾಲಯದಲ್ಲಿ ಅಮಿತ್ ಷಾ ಪೂಜೆ ಮಾಡಲಿರುವ ಹಿನ್ನೆಲೆಯಲ್ಲಿ ದೇವಾಲಯ ಹೊರ ಮತ್ತು ಒಳ ಭಾಗದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ.
ಇದನ್ನೇ ಓದಿ: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ತುಕುಡೆ..ತುಕಡೆ ಪಕ್ಷ; ಅಮಿತ್ ಷಾ
ಪುರಾತನ ದೇವಸ್ಥಾನಕ್ಕೆ ವಿವಿಧ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿದ್ದು ಷಾ ಸ್ವಾಗತಕ್ಕೆ ಸಿದ್ಧತೆ ನಡೆಸಲಾಗಿದೆ. ಅಮಿತ್ ಷಾ ಆಗಮನದ ಹಿನ್ನೆಲೆಯಲ್ಲಿ ದೇವಾಲಯದ ಬಳಿ ಬಿಗಿ ಪೊಲೀಸ್ ಭದ್ರತೆಯನ್ನೂ ಮಾಡಲಾಗಿದೆ.