More

    ಚುನಾವಣೆಯಲ್ಲಿ ಈ ಅಭ್ಯರ್ಥಿ ಗೆಲ್ಲುವುದು ಪಕ್ಕಾ! ವೈರಲ್ ಆಯ್ತು ಗಿಳಿ ಭವಿಷ್ಯ; ಜ್ಯೋತಿಷಿ ಅಂದರ್

    ತಮಿಳುನಾಡು: ಲೋಕಸಭಾ ಚುನಾವಣೆ 2024ಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದ್ದು, ಆಯಾ ರಾಜ್ಯಗಳಲ್ಲಿ ಕ್ಷೇತ್ರದ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದು, ಗೆಲುವಿಗೆ ಬೇಕಾದ ತಂತ್ರೋಪಾಯಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಎಂದಿನಂತೆ ಈ ಬಾರಿ ಯಾವ ಪಕ್ಷದ ಅಭ್ಯರ್ಥಿ ನಮ್ಮ ಕ್ಷೇತ್ರದಲ್ಲಿ ಗೆಲುವು ಬಾರಿಸಬಹುದು? ಎಂಬ ಊಹೆ, ಲೆಕ್ಕಾಚಾರಗಳು ಮತದಾರರ ಮನದಲ್ಲಿ ಓಡಾಡುತ್ತಿದೆ. ಆದರೆ, ಈ ಮಧ್ಯೆ ಗಿಳಿಯೊಂದು ಹೇಳಿದ ಭವಿಷ್ಯ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಗಿಳಿ ಶಾಸ್ತ್ರ ನಡೆಸುತ್ತಿದ್ದ ವ್ಯಕ್ತಿಯನ್ನು ತಕ್ಷಣವೇ ಅರೆಸ್ಟ್​ ಮಾಡಿದ್ದಾರೆ.

    ಇದನ್ನೂ ಓದಿ: ಮೊಬೈಲ್​​ ರಿಪೇರಿ ಮಾಡಿಸಿಕೊಡಲಿಲ್ಲ ಅಂತ ಬದುಕನ್ನೇ ಕೊನೆಗೊಳಿಸಿದ ಯುವತಿ!

    ಏಪ್ರಿಲ್ 19ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ-ಮಿತ್ರಪಕ್ಷ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಅಭ್ಯರ್ಥಿಯ ಗೆಲುವನ್ನು ತಮ್ಮ ಗಿಳಿಯ ಸಹಾಯದಿಂದ ಭವಿಷ್ಯ ನುಡಿಸಿದ ಇಬ್ಬರು ರಸ್ತೆ ಬದಿಯ ಜ್ಯೋತಿಷಿಗಳ ಪೈಕಿ ಓರ್ವನನ್ನು ಬಂಧಿಸಲಾಯಿತು. ಗಿಳಿಗಳನ್ನು ಪಂಜರದಲ್ಲಿಟ್ಟು, ಅವುಗಳಿಂದ ಭವಿಷ್ಯ ನುಡಿಸಿದ ಆರೋಪದ ಮೇಲೆ ಆತನನ್ನು ಅರೆಸ್ಟ್​ ಮಾಡಲಾಯಿತು. ವಿಚಾರಣೆ ನಡೆಸಿದ ಪೊಲೀಸರು ಕೆಲವು ಸಮಯದ ನಂತರ ವ್ಯಕ್ತಿಯನ್ನು ಬಿಡುಗಡೆಗೊಳಿಸಿದ್ದಾರೆ.

    ಪಂಜರದಲ್ಲಿದ್ದ ಗಿಳಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಕ್ಕಿಗಳನ್ನು ಹಾರಲು ಬಿಟ್ಟು, ಅವುಗಳಿಗೆ ಪಂಜರದಿಂದ ಮುಕ್ತಿ ನೀಡಿದ್ದಾರೆ. ಕಡಲೂರು ಕ್ಷೇತ್ರದ ಪಿಎಂಕೆ ಅಭ್ಯರ್ಥಿ ಚಲನಚಿತ್ರ ನಿರ್ದೇಶಕ-ರಾಜಕಾರಣಿ ಥಂಕರ್ ಬಚನ್, ತಮ್ಮ ಚುನಾಚಣೆ ಪ್ರಚಾರದ ವೇಳೆ ಗಿಳಿ ಶಾಸ್ತ್ರ ಜ್ಯೋತಿಷಿಗಳ ಬಳಿ ಬಂದು, ಮುಂಬರುವ ಚುನಾವಣೆಯಲ್ಲಿ ನನ್ನ ಗೆಲುವು ಹೇಗಿದೆ ಎಂದು ತಿಳಿಯಲು ಕುತೂಹಲ ವ್ಯಕ್ತಪಡಿಸಿದರು. ಆಗ ಒಂದು ಕಾರ್ಡ್ ಆರಿಸಿ, ಬಚ್ಚನ್ ಚುನಾವಣೆಯಲ್ಲಿ ಗೆಲ್ಲುತ್ತಾರಾ? ಏನು? ಎಂಬ ಭವಿಷ್ಯ ಹೇಳುವಂತೆ ಆತ ಗಿಳಿಗೆ ಹೇಳಿದ್ದಾನೆ.

    ಇದನ್ನೂ ಓದಿ: ಪ್ಯಾರಿಸ್​ ಗೇಮ್ಸ್​ಗೆ ಮುನ್ನ 90 ಮೀಟರ್​ ಗಡಿ ದಾಟುವ ವಿಶ್ವಾಸದಲ್ಲಿ ನೀರಜ್​ ಚೋಪ್ರಾ

    ಗಿಳಿ ಶಾಸ್ತ್ರದವನನ್ನು ಭೇಟಿ ಮಾಡಿದ ಬಚನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ದೃಶ್ಯದಲ್ಲಿ ಅಭ್ಯರ್ಥಿಯು ಶಾಸ್ತ್ರ ಹೇಳಿದ ಹಕ್ಕಿಗೆ ಆಹಾರ ನೀಡುವಂತೆ ಜ್ಯೋತಿಷಿಗೆ ವಿನಂತಿಸುತ್ತಾರೆ. ತದನಂತರ ಅದಕ್ಕೆ ಬಾಳೆಹಣ್ಣು ಕೊಡುವುದು ವಿಡಿಯೋ ತುಣುಕಿನಲ್ಲಿ ಕಂಡುಬಂದಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ ಕಾರಣ ಎರಡು ಪಂಜರಗಳಲ್ಲಿ ಇರಿಸಲಾಗಿದ್ದ ನಾಲ್ಕು ಗಿಳಿಗಳನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಇಬ್ಬರು ಜ್ಯೋತಿಷಿ ಸಹೋದರರಿಗೆ ಇಂಥ ತಪ್ಪು ಮುಂದೆ ಮಾಡದಿರಿ ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ,(ಏಜೆನ್ಸೀಸ್).

    ಕೋವಿಡ್​ನಲ್ಲಿ ತಂದೆ ಕಳೆದುಕೊಂಡ ವೇದಾಂತ್​, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ!

    ಆರ್​ಸಿಬಿ ಮ್ಯಾನೆಜ್​ಮೆಂಟ್​ಗೆ ಬುದ್ದಿ ಕಲಿಸಲು ಮುಂದಾದ್ರು ಫ್ಯಾನ್ಸ್​! ಹೀಗೆ ಮಾಡೋದೇ ಸರಿ ಅಂತಿದ್ದಾರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts