More

    ಪ್ಯಾರಿಸ್​ ಗೇಮ್ಸ್​ಗೆ ಮುನ್ನ 90 ಮೀಟರ್​ ಗಡಿ ದಾಟುವ ವಿಶ್ವಾಸದಲ್ಲಿ ನೀರಜ್​ ಚೋಪ್ರಾ

    ನವದೆಹಲಿ: ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಮುನ್ನವೇ 90 ಮೀಟರ್​ ಗಡಿಯನ್ನು ದಾಟುವ ವಿಶ್ವಾಸವನ್ನು ಭಾರತದ ಜಾವೆಲಿನ್​ ಎಸೆತದ ತಾರೆ ನೀರಜ್​ ಚೋಪ್ರಾ ವ್ಯಕ್ತಪಡಿಸಿದ್ದಾರೆ. ಹಾಲಿ ವಿಶ್ವ ಮತ್ತು ಒಲಿಂಪಿಕ್ಸ್​ ಚಾಂಪಿಯನ್​ ನೀರಜ್​, 90 ಮೀಟರ್​ ಗಡಿ ದಾಟುವ ನಿಟ್ಟಿನಲ್ಲಿ ಭರದ ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆ. 2022ರ ಸ್ಟಾಕ್​ಹೋಮ್​ ಡೈಮಂಡ್​ ಲೀಗ್​ನಲ್ಲಿ 89.94 ಮೀ. ದೂರ ಎಸೆದಿರುವುದು ನೀರಜ್​ರ ಇದುವರೆಗಿನ ಶ್ರೇಷ್ಠ ನಿರ್ವಹಣೆಯಾಗಿದೆ.

    ಅಭ್ಯಾಸದ ವೇಳೆ ಈಗಾಗಲೆ ಹಲವು ಬಾರಿ 90 ಮೀ. ಗಡಿ ದಾಟಿರುವ ಅವರು, ಸ್ಪರ್ಧೆಗಳಲ್ಲಿ ಇನ್ನಷ್ಟೇ ಇದನ್ನು ಸಾಧಿಸಬೇಕಾಗಿದೆ. “ಪ್ಯಾರಿಸ್​ಗೆ ಹೋಗುವ ಮುನ್ನವೇ 90ರ ಗಡಿ ದಾಟುವ ಪ್ರಯತ್ನದಲ್ಲಿರುವೆ. ಇದನ್ನು ಸಾಧಿಸಲು ಒಲಿಂಪಿಕ್ಸ್​ವರೆಗೆ ಕಾಯಬಾರದು ಎಂದು ಅಂದುಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಉತ್ತಮ ಸಿದ್ಧತೆ ನಡೆಸುತ್ತಿರುವೆ’ ಎಂದು 26 ವರ್ಷದ ನೀರಜ್​ ಹೇಳಿದ್ದಾರೆ.

    ಕಳೆದ ವರ್ಷದ ಏಷ್ಯಾನ್​ ಗೇಮ್ಸ್​ ಬಳಿಕ ಸ್ಪರ್ಧಾಕಣದಿಂದ ಸಂಪೂರ್ಣ ಹೊರಗುಳಿದಿರುವ ನೀರಜ್​, ಮೇ 10ರಂದು ದೋಹಾ ಡೈಮಂಡ್​ ಲೀಗ್​ನಲ್ಲಿ ಮರಳಿ ಕಣಕ್ಕಿಳಿಯಲಿದ್ದಾರೆ. ಬಳಿಕ ಜೂನ್​ 18ರಂದು ಫಿನ್​ಲ್ಯಾಂಡ್​ನ ಪಾವೊ ನುರ್ಮಿ ಗೇಮ್ಸ್​ನಲ್ಲೂ ಸ್ಪರ್ಧಿಸಲಿದ್ದಾರೆ. ಅಲ್ಲಿ ಅವರಿಗೆ ಮೊದಲ ಬಾರಿ, 19ನೇ ವಯಸ್ಸಿನಲ್ಲೇ 90 ಮೀಟರ್​ ಗಡಿ ದಾಟಿರುವ ಜರ್ಮನಿಯ ಹೊಸ ಜಾವೆಲಿನ್​ ಥ್ರೋ ಸೆನ್ಸೇಶನ್​ ಮ್ಯಾಕ್ಸ್​ ಡೆಹ್ನಿಂಗ್​ ಸವಾಲು ಎದುರಾಗಲಿದೆ.

    ಆರ್​ಸಿಬಿ ಬೌಲರ್​ಗಳ ಬೆಂಡೆತ್ತಿದ್ದ ಇಶಾನ್​-ಸೂರ್ಯಕುಮಾರ್​; ಮುಂಬೈಗೆ 7 ವಿಕೆಟ್​ಗಳ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts