More

    ಲಾಕ್​ಡೌನ್​ ಉಲ್ಲಂಘಿಸಿದವರ ವಿರುದ್ಧ ಕೇಸ್​ ದಾಖಲಿಸಿದ್ದಕ್ಕೆ ಸಿಟ್ಟಾದ ನಿವೃತ್ತ ಪೊಲೀಸ್​ ಮಹಾ ನಿರ್ದೇಶಕ ಮಾಡಿದ್ದೇನು?

    ನವದೆಹಲಿ: ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಇದು ಲಾಕ್​ಡೌನ್​ ಸಮಯದ ಮಂತ್ರ. ಎಷ್ಟೇ ಹೇಳಿದರೂ ಜನರು ಇದನ್ನು ಪಾಲಿಸುತ್ತಿಲ್ಲ. ಅಗತ್ಯವೋ ಅನಗತ್ಯವೋ ಎಂಬುದನ್ನು ತಿಳಿಯದೇ ಮನೆಯಿಂದ ಹೊರಗೆ ಬರುತ್ತಲೇ ಇದ್ದಾರೆ. ಇಂಥವರನ್ನು ತಡೆಯುವುದು ಪೊಲೀಸರಿಗೆ ಸವಾಲಾಗಿದೆ. ಹೀಗಾಗಿ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

    ಅಗತ್ಯ ಪಾಸ್​ ಇಲ್ಲದೆ ಮನೆಯಿಂದ ಹೊರಬಂದು ವಾಹನಗಳಲ್ಲಿ ಸಂಚರಿಸುತ್ತಿರುವವರನ್ನು ತಡೆದು ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ. ಇದಕ್ಕಿಂತಲೂ ಒಂದು ಹೆಜ್ಜೆ ಮುಂದಾಗಿ ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಇದೇ ಕ್ರಮ ಅನುಸರಿಸಲಾಗುತ್ತಿದೆ.

    ಆದರೆ, ಇದು ಕಾನೂನುಬಾಹಿರ ಎಂಬ ಆಕ್ಷೇಪ ಕೇಳಿ ಬಂದಿದೆ. ಅದರಲ್ಲೂ ಉತ್ತರಪ್ರದೇಶದ ನಿವೃತ್ತ ಪೊಲೀಸ್​ ಮಹಾ ನಿರ್ದೇಶಕ ಡಾ.ವಿಕ್ರಮ್​ ಸಿಂಗ್​ ಪೊಲೀಸರ ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲು ಹತ್ತಿದ್ದಾರೆ.

    ಅಷ್ಟಕ್ಕೂ ನಿವೃತ್ತ ಡಿಜಿಪಿ ವಾದವೇನು ಗೊತ್ತಾ?: ಅಪರಾಧಿಕ ದಂಡ ಸಂಹಿತೆಯ (ಸಿಆರ್​ಪಿಸಿ) ಎಸ್​.195 ವಿಧಿಯನ್ವಯ ಹಾಗೂ ಹಲವು ನ್ಯಾಯಾಂಗ ವಿಧಿವಿಧಾನಗಳಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 188ರ ಅನ್ವಯ ಯಾವುದೇ ಎಫ್​ಐಆರ್​ ದಾಖಲಿಸುವಂತಿಲ್ಲ. ನ್ಯಾಯಿಕ ದಂಡಾಧಿಕಾರಿಗಳು (ಮ್ಯಾಜಿಸ್ಟ್ರೇಟ್​) ಮಾತ್ರ ಸಂಬಂಧಿಸಿದ ಅಧಿಕಾರಿಗಳು ಲಿಖಿತವಾಗಿ ಸಲ್ಲಿಸಿದ ದೂರನ್ನು ಆಧರಿಸಿ ಅಪರಾಧ ಸಂಜ್ಞಯನ್ನು ನಿರ್ಧರಿಸುತ್ತಾರೆ.

    ಆದರೆ, ಲಾಕ್​ಡೌನ್​ ನಿಯಮಗಳ ಉಲ್ಲಂಘನೆ ಆರೋಪದಲ್ಲಿ ಪೊಲೀಸರು ಐಪಿಸಿ ಸೆಕ್ಷನ್​ 188ರ ಅನ್ವಯ ದಂಡಾಧಿಕಾರಿಗಳಿಗೆ ದೂರು ಸಲ್ಲಿಸುವ ಬದಲು ತಾವೇ ಎಫ್​ಐಆರ್​ಗಳನ್ನು ದಾಖಲಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.

    ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸುವುದು ಐಪಿಸಿ ಸೆಕ್ಷನ್​ 188ರ ಅನ್ವಯ ಅಪರಾಧವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಜತೆಗೆ, 188 ಸೆಕ್ಷನ್​ ಸರ್ಕಾರಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ಇದರ ಪ್ರಕಾರ ಆರು ತಿಂಗಳ ಶಿಕ್ಷೆ, ಒಂದು ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಈ ಕಲಂ ಹೇಳುತ್ತದೆ. ಹೀಗಾಗಿ ಪೊಲೀಸರು ಈ ಸೆಕ್ಷನ್​ ಅನ್ವಯ ಎಫ್​ಐಆರ್​ ದಾಖಲಿಸುವುದು ಕಾನೂನುಬಾಹಿರವಾಗಿದೆ. ಉತ್ತರಪ್ರದೇಶದಲ್ಲಿ ಈವರೆಗೆ 45 ಸಾವಿರಕ್ಕೂ ಅಧಿಕ ಜನರ ವಿರುದ್ಧ 15,378 ಕೇಸ್​ಗಳನ್ನು ದಾಖಲಿಸಲಾಗಿದೆ. ಇವುಗಳನ್ನು ವಜಾಗೊಳಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ಜತೆಗೆ, ಇತರ ರಾಜ್ಯಗಳಿಗೂ ಈ ಬಗ್ಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

    ಏಪ್ರಿಲ್​ 22ಕ್ಕೆ ಪಿಯುಸಿ ಪರೀಕ್ಷೆ ಘೋಷಣೆ, ಎಲ್ಲಿ ನಡೆಯೋದು ಗೊತ್ತಾ?

    ದೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts