More

    ಏಪ್ರಿಲ್​ 22ಕ್ಕೆ ಪಿಯುಸಿ ಪರೀಕ್ಷೆ ಘೋಷಣೆ, ಎಲ್ಲಿ ನಡೆಯೋದು ಗೊತ್ತಾ?

    ಐಜ್ವಾಲ್​: ಮೇ 3ರವರೆಗೆ ಬಹುತೇಕ ಎಲ್ಲ ರಾಜ್ಯಗಳಲ್ಲೂ ಲಾಕ್​ಡೌನ್​ ಘೋಷಣೆಯಾಗಿದೆ. ಏಪ್ರಿಲ್​ 20ರ ನಂತರ ಕೊಂಚ ಮಟ್ಟಿಗಿನ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಹೊಂದಲಾಗಿದೆ ಅದೂ ಕೂಡ ಕರೊನಾ ಹಾಟ್​ಸ್ಪಾಟ್​ಗಳನ್ನು ಹೊರತುಪಡಿಸಿ.
    ಪರಿಸ್ಥಿತಿ ಹೀಗಿರುವಾಗ ಪಿಯುಸಿ ಪರೀಕ್ಷೆ ನಡೆಸಲು ಸಾಧ್ಯವೇ? ಎಂಬ ಗೊಂದಲ ನಿಮ್ಮನ್ನು ಕಾಡುತ್ತಿರಬಹುದು.

    ಆದರೆ, ಇದು ನಿಜ. ಇಂಥದ್ದೊಂದು ಘೋಷಣೆ ಮಾಡಿರೋದು ಮಿಜೋರಾಂ. ಅಲ್ಲಿನ ಶಿಕ್ಷಣ ಸಚಿವರು ಏಪ್ರಿಲ್​ 22 ರಿಂದ ಪಿಯುಸಿ ಅಂದರೆ 12ನೇ ತರಗತಿ ಪರೀಕ್ಷೆಗಳನ್ನು ನಡೆಸುವುದಾಗಿ ಘೋಷಿಸಿದ್ದಾರೆ. ಇಲ್ಲಿ 12ನೇ ತರಗತಿಯನ್ನು ಹೈಸ್ಕೂಲ್​ ಲೀವಿಂಗ್​ ಸರ್ಟಿಫಿಕೆಟ್​ (ಎಚ್​ಎಸ್​ಎಸ್​ಎಲ್​ಸಿ) ಎಂದು ಕರೆಯಲಾಗುತ್ತದೆ.

    ದೇಶಾದ್ಯಂತ ಲಾಕ್​ಡೌನ್​ ಘೋಷಣೆ ಹಿನ್ನೆಲೆಯಲ್ಲಿ ಎಚ್​ಎಸ್​ಎಸ್​ಎಲ್​ಸಿಯ ಮೂರು ವಿಷಯಗಳ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಪ್ರಸ್ತುತ 84 ಕೇಂದ್ರಗಳಲ್ಲಿ ಏಪ್ರಿಲ್​ 22ರಿಂದ 24ರವರೆಗೆ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಲಾಲ್​ಚಂದ್ಮಾ ರಾಲ್ಟೆ ತಿಳಿಸಿದ್ದಾರೆ.

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಮಕ್ಕಳ ಪಾಠ-ಪ್ರವಚನಗಳಿಗೆ ತೊಂದರೆಯಾಗದಂತೆ ಆನ್​ಲೈನ್​ನಲ್ಲಿ ಪಾಠ ಮಾಡಲಾಗುತ್ತಿದೆ. ಈಗಾಗಲೇ ದೂರದರ್ಶನದ ಮೂಲಕ ಪ್ರತಿದಿನ ಮಧ್ಯಾಹ್ನ 3ರಿಂದ 5 ಗಂಟೆವರೆಗೆ ಪಾಠಗಳನ್ನು ಪ್ರಸಾರ ಮಾಡಲಾಗುತ್ತಿದೆ.
    ಪಾಠಗಳನ್ನು ಪ್ರಸಾರ ಮಾಡಲು ಸ್ಥಳೀಯ ಕೇಬಲ್​ ವಾಹಿನಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದಲ್ಲದೇ. 9ನೇ ತರಗತಿ ಮಕ್ಕಳಿಗೆ ಮುಂದಿನ ವಾರದಿಂದ ಟ್ಯೂಷನ್​ ಕೂಡ ಶುರು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಮಿಜೋರಾಂನಲ್ಲಿ ಮಾರ್ಚ್​ 25ರಂದು ವ್ಯಕ್ತಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಅವರು ಮೃತಪಟ್ಟಿದ್ದರು. ಇದಾದ ಬಳಿಕ ಇಲ್ಲಿಯವರೆಗೂ ಒಂದೂ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿಲ್ಲ. ಈಶಾನ್ಯದ ಏಳು ರಾಜ್ಯಗಳಲ್ಲಿ ಈವರೆಗೆ 11 ಪ್ರಕರಣಗಳಷ್ಟೇ ಕಂಡು ಬಂದಿವೆ. ಹೀಗಾಗಿ ಈ ರಾಜ್ಯಗಳು ಶೈಕ್ಷಣಿಕ ಚಟುವಟಿಕೆಗಳು ಪುನಾರಂಭಕ್ಕೆ ಸಜ್ಜಾಗಿವೆ.

    100ಕ್ಕೂ ಹೆಚ್ಚು ದೇಶಗಳಲ್ಲಿ ಕರೊನಾ ವಿರುದ್ಧ ಬಳಕೆಯಾಗುತ್ತಿರುವ ಮಾತ್ರೆ ಭಾರತದಲ್ಲೇಕೆ ಬೇಡ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts