More

    ಪತ್ನಿಗೆ ಜೀವ ಬೆದರಿಕೆ: ತಮಿಳುನಾಡು ಮಾಜಿ ಡಿಜಿಪಿ ಬಂಧನ

    ಚೆನ್ನೈ: ತಮಿಳುನಾಡು ಮಾಜಿ ವಿಶೇಷ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೇಶ್ ದಾಸ್ ಅವರನ್ನು ಇಂದು (ಶುಕ್ರವಾರ) ಕೆಲಂಬಾಕ್ಕಂ ಪೊಲೀಸರು ಬಂಧಿಸಿದ್ದಾರೆ.

    ಇದನ್ನೂ ಓದಿ: ಸ್ವಾತಿ ಮಲಿವಾಲ್ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್​ಗೆ 4 ದಿನಗಳ ನ್ಯಾಯಾಂಗ ಬಂಧನ

    ರಾಜೇಶ್ ದಾಸ್ ಅವರ ಪತ್ನಿ ಇಂಧನ ಕಾರ್ಯದರ್ಶಿ ಬೀಲಾ ವೆಂಕಟೇಶನ್ ಅವರು ಮೇ 18 ರಂದು ನಗರದ ಹೊರವಲಯದಲ್ಲಿರುವ ತೈಯೂರ್ ಗ್ರಾಮದಲ್ಲಿರುವ ತನ್ನ ಮನೆಗೆ ಅತಿಕ್ರಮಣ ಮತ್ತು ಜೀವ ಬೆದರಿಕೆಗಾಗಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಈ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ರಾಜೇಶ್ ದಾಸ್ ಬಂಧನವನ್ನು ದೃಢಪಡಿಸಿದ ತಾಂಬರಂ ಪೊಲೀಸ್ ಕಮಿಷನರೇಟ್‌ನ ಹಿರಿಯ ಅಧಿಕಾರಿಯೊಬ್ಬರು, ಮೇ 20 ರಂದು ಬೀಲಾ ವೆಂಕಟೇಶ್ ಅವರು ದಾಸ್ ಮತ್ತು ಅವರ ವ್ಯಕ್ತಿಗಳು ತಮ್ಮ ನಿವಾಸದ ಆವರಣಕ್ಕೆ ಅತಿಕ್ರಮವಾಗಿ ನುಗ್ಗಿ ಭದ್ರತಾ ಸಿಬ್ಬಂದಿಯನ್ನು ಬೆದರಿಸಿದ್ದಾರೆ ಎಂದು ದೂರನ್ನು ದಾಖಲಿಸಿದ ನಂತರ ಬಂಧನವಾಗಿದೆ ಎಂದು ಹೇಳಿದರು. ದೂರಿನ ಆಧಾರದ ಮೇಲೆ ದಾಸ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಐದು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಶುಕ್ರವಾರ ಪಲ್ಲಿಕರನೈ ಡೆಪ್ಯುಟಿ ಕಮಿಷನರ್ ಗೌತಮ್ ಗೋಯಲ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಮನೆಗೆ ತೆರಳಿ ರಾಜೇಶ್ ದಾಸ್ ಅವರನ್ನು ಬಂಧಿಸಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

    ರಾಜೇಶ್ ದಾಸ್ ಅವರು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳ ಜೈಲು ಶಿಕ್ಷೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ಇತ್ತೀಚೆಗೆ ಮಧ್ಯಂತರ ತಡೆಯನ್ನು ಪಡೆದಿದ್ದರು. ಡಿಸೆಂಬರ್ 2023 ರಲ್ಲಿ, ಅವರ ನಿವೃತ್ತಿಗೆ ಒಂದು ತಿಂಗಳ ಮುಂಚಿತವಾಗಿ, ತಮಿಳುನಾಡು ಸರ್ಕಾರದಿಂದ ದಾಸ್ ಅವರಿಗೆ ಕಡ್ಡಾಯ ನಿವೃತ್ತಿಯೊಂದಿಗೆ ದಂಡ ವಿಧಿಸಲಾಯಿತು.

    ಎಐಎಡಿಎಂಕೆ ಆಡಳಿತದಲ್ಲಿ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದ ದಾಸ್, ಜೂನಿಯರ್ ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದರು. ಪ್ರಕರಣದಲ್ಲಿ ವಿಲ್ಲುಪುರಂನ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿತ್ತು. ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇತ್ತೀಚಿಗೆ ಸುಪ್ರೀಂ ಕೋರ್ಟ್ ಅವರನ್ನು ಬಂಧನದಿಂದ ಮುಕ್ತಗೊಳಿಸಿ ತಾತ್ಕಾಲಿಕ ರಿಲೀಫ್‌ ನೀಡಿತ್ತು.

    ಹುಟ್ಟುವ ಮಗುವಿನ ಲಿಂಗ ತಿಳಿಯಲು ಹೆಂಡತಿಯ ಹೊಟ್ಟೆಯನ್ನೇ ಸೀಳಿದ ಪಾಪಿಗಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts