More

    ವಿಧಾನಸಭಾ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದ್ರಾ ಮಾಜಿ ಶಾಸಕ? 40 ಕೋಟಿ ಹಣದ ರಹಸ್ಯ ಬಯಲು

    ಹಾವೇರಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮಾಜಿ ಶಾಸಕರೊಬ್ಬರು ಬರೋಬ್ಬರಿ 40 ಕೋಟಿ ರೂಪಾಯಿ ಹಣ ಹಂಚಿಕೆ ಮಾಡಿರುವ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಕೋಟಿ ಕೋಟಿ ಹಣ ವೆಚ್ಚ ಮಾಡಿದ ಆ ಮಾಜಿ ಶಾಸಕ ಯಾರು? ಚುನಾವಣೆ ಸಯಮದಲ್ಲಿ ಇಷ್ಟೊಂದು ಹಣ ಎಲ್ಲಿಂದ ಬಂತು? 40 ಕೋಟಿ ಖರ್ಚು ಮಾಡಿರೋದಾದ್ರು ಯಾರಿಗೆ? ಇಷ್ಟೊಂದು ಹಣದ ವ್ಯವಹಾರ ನಡೆದಿರುವಾಗ ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿತ್ತಾ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ.

    40 ಕೋಟಿ ರೂ. ಹಣ ಹಂಚಿದ್ದರ ಬಗ್ಗೆ ಸ್ವತಃ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಮುಂದೆಯೇ ಮಾಜಿ ಶಾಸಕ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಆ ಮಾಜಿ ಶಾಸಕ ಯಾರೆಂದರೆ, ರಾಣೆಬೇನ್ನೂರಿನ ಬಿಜೆಪಿ ನಾಯಕ ಅರುಣಕುಮಾರ್ ಪೂಜಾರ.

    ಹಾವೇರಿ ಬಿಜೆಪಿ ಕಚೇರಿಯಲ್ಲಿ ಮಾತನಾಡುವಾಗ ಸೋಲಿನ ಕುರಿತು ಅಸಮಾಧಾನ ಹೊರ ಹಾಕಿದ ಅರುಣಕುಮಾರ್ ಪೂಜಾರ, ವಿಧಾನಸಭೆ ಚುನಾವಣೆಯಲ್ಲಿ 40 ಕೋಟಿ ಖರ್ಚು ಮಾಡಿದ್ರು ನಾನು ಸೋತಿದ್ದೇನೆ ಎಂದರು. ಜಿಲ್ಲಾ ಪದಾಧಿಕಾರಿಗಳ ಆಯ್ಕೆ ವಿರುದ್ಧ ಪಕ್ಷದ ಕಾರ್ಯಕರ್ತರು ರೊಚ್ಚಿಗೆದ್ದಿದ್ದ ಸಮಯದಲ್ಲಿ ಅವರನ್ನು ಸಮಾಧಾನ ಪಡಿಸುವ ವೇಳೆ 40 ಕೋಟಿಯ ರಹಸ್ಯವನ್ನು ಮಾಜಿ ಶಾಸಕ ಪೂಜಾರ ಬಿಚ್ಟಿಟ್ಟಿದ್ದಾರೆ.

    40 ಕೋಟಿ ಖರ್ಚು ಮಾಡಿದ್ರು ನಾನು ಸೋತಿದ್ದೇನೆ. ನನ್ನ ಸೋಲಿಗೆ ನಾನೇ ಕಾರಣ ಎಂದು ಅರುಣಕುಮಾರ್​ ಪೂಜಾರ ಹೇಳಿದ್ದಾರೆ. ಆದರೆ, ಈಗ ಮೂಡಿರುವ ಪ್ರಶ್ನೆ ಏನೆಂದರೆ, ಅರುಣಕುಮಾರ್​ ಪೂಜಾರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಾ? 40 ಕೋಟಿ ಹಣದ ಮೂಲವನ್ನು ಪತ್ತೆ ಮಾಡುತ್ತಾ? ಚುನಾವಣೆಗೆ ಇಂತಿಷ್ಟು ಹಣ ಖರ್ಚು ಮಾಡಬೇಕೆಂಬ ನಿಯಮವಿದೆ. ಅದನ್ನು ಮೀರಿ ಹಣ ಖರ್ಚು ಮಾಡಿದ್ದು, ಈ ಪ್ರಕರಣವನ್ನು ಆಯೋಗ ಯಾವ ರೀತಿಯಲ್ಲಿ ಪರಿಗಣಿಸಲಿದೆ ಎಂದು ಕಾದು ನೋಡಬೇಕಿದೆ.

    ಅರುಣಕುಮಾರ್​ ಪೂಜಾರ ವಿರುದ್ಧ ಪ್ರತಿಭಟನೆ
    40 ಕೋಟಿ ಖರ್ಚು ಮಾಡಿ ಸೋತೆ ಎಂಬ ಮಾಜಿ ಶಾಸಕ ಅರುಣಕುಮಾರ್​ ಪೂಜಾರ ಹೇಳಿಕೆ ಹಿನ್ನಲೆಯಲ್ಲಿ ರಾಣೆಬೇನ್ನೂರಿನ ತಹಸೀಲ್ದಾರ ಕಚೇರಿ ಮುಂದೆ ರೈತರು ಮತ್ತು ಕಾಂಗ್ರೆಸ್​ ಮುಖಂಡರು ಪ್ರತಿಭಟನೆ ನಡೆಸಿದರು. ಚುನಾವಣೆ ಆಯೋಗಕ್ಕೆ ಸುಳ್ಳು ದಾಖಲೆ ನೀಡಿದ್ದಾರೆ ಎಂದು ಮಾಜಿ ಶಾಸಕನ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದೆ, ಕೂಡಲೇ ಬಂಧಿಸುವಂತೆ ಹಾಗೂ ಅವರ ಸಮಗ್ರ ಆಸ್ತಿಯ ತನಿಖೆ ಮಾಡುವಂತೆ ತಹಸೀಲ್ದಾರ್​ ಮೂಲಕ ರಾಜ್ಯಪಾಲರಿಗೆ ಮತ್ತು ಚುನಾವಣೆ ಆಯೋಗಕ್ಕೆ ಮನವಿ ಮಾಡಿದರು.

    ಕೊನೆಗೂ ಕೊಟ್ಟ ಮಾತು ಉಳಿಸಿಕೊಂಡ ಡ್ರೋನ್​ ಪ್ರತಾಪ್! ಸಾರ್ಥಕವಾಯಿತು ಎಂದ ನೆಟ್ಟಿಗರು

    ಗೂಗಲ್​ನಲ್ಲಿ ಡ್ರೋನ್​ ಪ್ರತಾಪ್​ ಹೆಸರು ಸರ್ಚ್​ ಮಾಡಿದ್ರೆ ಏನ್​ ಉತ್ತರ ಬರುತ್ತೆ ಗೊತ್ತಾ; ನಿಜಕ್ಕೂ ಆಶ್ಚರ್ಯ ಪಡ್ತೀರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts