More

    ಬಿಜೆಪಿಗೆ ಸೇರ್ಪಡೆಗೊಂಡ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಎಲ್. ಶಿವರಾಮಕೃಷ್ಣನ್

    ಚೆನ್ನೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಬುಧವಾರ ಬಿಜೆಪಿಗೆ ಸೇರಿದ್ದಾರೆ. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ತಮಿಳುನಾಡಿನ ಉಸ್ತುವಾರಿ ಸಿಟಿ ರವಿ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್. ಮುರುಗನ್ ಉಪಸ್ಥಿತಿಯಲ್ಲಿ 54 ವರ್ಷದ ಮಾಜಿ ಕ್ರಿಕೆಟಿಗ ಎಲ್. ಶಿವರಾಮಕೃಷ್ಣನ್ ಸೇರ್ಪಡೆಗೊಂಡರು. ಮುಂದಿನ ವರ್ಷದ ತಮಿಳುನಾಡು ರಾಜ್ಯ ಚುನಾವಣೆಗೆ ಪೂರ್ವಭಾವಿಯಾಗಿ ಈ ಬೆಳವಣಿಗೆ ಆಗಿದೆ.

    1983ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 17ನೇ ವಯಸ್ಸಿನಲ್ಲೇ ಭಾರತ ತಂಡದ ಪರ ಟೆಸ್ಟ್ ಪದಾರ್ಪಣೆ ಮಾಡಿದ್ದ ಶಿವರಾಮಕೃಷ್ಣನ್ 9 ಟೆಸ್ಟ್‌ಗಳಲ್ಲಿ 26 ವಿಕೆಟ್ ಕಬಳಿಸಿದ್ದರು. ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ 15 ವಿಕೆಟ್ ಕಬಳಿಸಿದ್ದಾರೆ. 1987ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ ಅವರು ಬಳಿಕ ವೀಕ್ಷಕವಿವರಣೆಕಾರರಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ.

    ಇದನ್ನೂ ಓದಿ: ಯುವರಾಜ್ ಸಿಂಗ್ ಕ್ರಿಕೆಟ್‌ಗೆ ಮರಳದಂತೆ ತಡೆಯೊಡ್ಡಿದ ಬಿಸಿಸಿಐ

    1985ರಲ್ಲಿ ಭಾರತ ತಂಡದ ಬೆನ್ಸನ್ ಆಂಡ್ ಹೆಡ್ಜಸ್ ವಿಶ್ವ ಚಾಂಪಿಯನ್‌ಷಿಪ್ ಗೆಲುವಿನಲ್ಲಿ ಶಿವರಾಮಕೃಷ್ಣನ್ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ 20 ವರ್ಷಗಳಿಂದ ವೀಕ್ಷಕವಿವರಣೆ ನೀಡುತ್ತಿರುವ ಅವರು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಐಸಿಸಿ ಕ್ರಿಕೆಟ್ ಸಮಿತಿಯ ಸದಸ್ಯರೂ ಆಗಿದ್ದರು.

    PHOTO | ನವವಿವಾಹಿತ ಚಾಹಲ್‌ಗೆ ದುಬೈನಲ್ಲಿ ಭರ್ಜರಿ ಔತಣ ನೀಡಿದ ಧೋನಿ ದಂಪತಿ

    ಮೆಲ್ಬೋರ್ನ್‌ನಲ್ಲಿ ಜಯದೊಂದಿಗೆ ಹಲವು ದಾಖಲೆಗಳನ್ನು ಬರೆದ ಟೀಮ್ ಇಂಡಿಯಾ

    ವಿರಾಟ್ ಕೊಹ್ಲಿಗೆ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ, ಧೋನಿಗೂ ಐಸಿಸಿ ಗೌರವ

    ರನೌಟ್ ಆದ ಬಳಿಕ ಅಜಿಂಕ್ಯ ರಹಾನೆ ತೋರಿದ ವರ್ತನೆಗೆ ಕ್ರಿಕೆಟ್ ಪ್ರೇಮಿಗಳ ಪ್ರಶಂಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts