More

    ಆರ್‌ಸಿಬಿ ಬ್ಯಾಟಿಂಗ್ ಸಲಹೆಗಾರರಾಗಿ ಸಂಜಯ್ ಬಂಗಾರ್ ನೇಮಕ

    ಬೆಂಗಳೂರು: ಭಾರತ ತಂಡದ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರನ್ನು ಮುಂಬರುವ 14ನೇ ಆವತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಸಂಜಯ್ ಬಂಗಾರ್ ಈ ಮೊದಲು ಟೀಮ್ ಇಂಡಿಯಾಗೆ ಐದು ವರ್ಷಗಳ ಕಾಲ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 2014ರಲ್ಲಿ ರವಿ ಶಾಸಿ ತಂಡದ ನಿರ್ದೇಶಕರಾಗಿ ನೇಮಕಗೊಂಡ ಮೇಲೆ ಬಂಗಾರ್ ಈ ಹುದ್ದೆಯಲ್ಲಿದ್ದರು. 2019ರ ಏಕದಿನ ವಿಶ್ವಕಪ್ ಟೂರ್ನಿವರೆಗೂ ಬಂಗಾರ್ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿದ್ದರು. ಬಳಿಕ ವಿಕ್ರಮ್ ರಾಥೋಡ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ.

    ಇದನ್ನೂ ಓದಿ: ಮೇ 28ಕ್ಕೆ ಅವತಾರ ಪುರುಷರ ಸಿನಿಮಾ ಬಿಡುಗಡೆ

    ‘ಆರ್‌ಸಿಬಿ ಕುಟುಂಬಕ್ಕೆ ಸಂಜಯ್ ಬಂಗಾರ್ ಸ್ವಾಗತ, ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ಬಂಗಾರ್ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಆರ್‌ಸಿಬಿ ಟ್ವೀಟ್ ಮಾಡಿದೆ. 48 ವರ್ಷದ ಬಂಗಾರ್, 2001 ರಿಂ 2004 ರವರೆಗೆ ರಾಷ್ಟ್ರೀಯ ತಂಡದ ಪರ 12 ಟೆಸ್ಟ್, 15 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇದೀಗ ಐಪಿಎಲ್ ಮೂಲಕ ಮತ್ತೊಮ್ಮೆ ವಿರಾಟ್ ಕೊಹ್ಲಿಯೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.

    ಇದನ್ನೂ ಓದಿ: 300 ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ವಿಕೆಟ್ ಗಳ ಸರದಾರ ಇಶಾಂತ್ ಶರ್ಮ,

    ತಂಡದ ನಿರ್ದೇಶಕ ಮೈಕ್ ಹೆಸ್ಸನ್, ಮುಖ್ಯಕೋಚ್ ಸಿಮೊನ್ ಕಾಟಿಚ್ ಒಳಗೊಂಡ ಸಹಾಯಕ ಸಿಬ್ಬಂದಿ ವರ್ಗ ಕೂಡಿಕೊಳ್ಳಲಿದ್ದಾರೆ. ಬಂಗಾರ್ ಇದಕ್ಕೂ ಮೊದಲು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಮುಖ್ಯಕೋಚ್ ಆಗಿದ್ದರು. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯೂ ಏಪ್ರಿಲ್ 2ನೇ ವಾರದಿಂದ ಆರಂಭಗೊಳ್ಳುವ ಸಾಧ್ಯತೆಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts