More

    ಹಸಿದವರಿಗೆ ಅನ್ನ ನೀಡುವುದು ನಿಜವಾದ ಧರ್ಮ – ಶ್ರೀ ಸಿದ್ಧರಾಮಾನಂದ ಸ್ವಾಮೀಜಿ

    ಯಲಬುರ್ಗಾ: ಆಧ್ಯಾತ್ಮಿಕ ಚಿಂತನೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಬುದ್ದಿವಂತಿಕೆಗಿಂತ ಹೃದಯವಂತಿಕೆ ಬೆಳೆಸಿಕೊಂಡರೆ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ತಿಂಥಣಿ ಬ್ರಿಜ್‌ನ ಕನಕಗುರುಪೀಠದ ಶ್ರೀ ಸಿದ್ಧರಾಮಾನಂದ ಸ್ವಾಮೀಜಿ ಹೇಳಿದರು.

    ತಾಲೂಕಿನ ಸಂಗನಹಾಳದಲ್ಲಿ ಶ್ರೀ ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ಶಿಲಾಮಂಟಪ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಸೋಮವಾರ ಮಾತನಾಡಿದರು.

    ಇದನ್ನೂ ಓದಿ: ದಾನ-ಧರ್ಮದ ಮಾರ್ಗ ಶ್ರೇಷ್ಠ

    ಹಸಿದವರಿಗೆ ಅನ್ನ ನಿಡುವುದು ನಿಜವಾದ ಧರ್ಮ. ಹಾಲುಮತ ಸಮುದಾಯ ಪರಿಶುದ್ಧತೆಯ ಸಂಕೇತವಾಗಿದೆ. ಜಾತಿ, ಮಂತ್ರ ನೋಡಿ ದೇವರು ಓಲಿಯುವುದಿಲ್ಲ. ಹಾಲುಮತ ಧರ್ಮ ಪ್ರವಚನ ವಿಶೇಷ ಸಂಸ್ಕೃತಿ ಹೊಂದಿದೆ. ತಾಯಿಯ ಪ್ರೇಮ ಬೀರಲಿಂಗೇಶ್ವರ, ಬಸವಣ್ಣ, ಹಾನಗಲ್ ಶಿವಯೋಗಿ, ಅಂಬೇಡ್ಕರ್ ಅವರಲ್ಲಿತ್ತು. ತಾಯಿ ಎಂಬ ಶಬ್ದವೇ ಪರಿಶುದ್ಧ ಎಂದರು.

    ಹಾಲಕೆರೆ-ಗಂಜಿಹಾಲದ ಶ್ರೀ ಮುಪ್ಪಿನ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಹಾಲುಮತ ಸಮಯದಾಯದ ಮಕ್ಕಳನ್ನು ಶಿಕ್ಷಣಕ್ಕೆ ಹಾಲಕೆರೆಗೆ ಕಳುಹಿಸಿಕೊಡಿ. ನಾವು ಶ್ರೀಮಠದಿಂದಲೇ ಉಚಿತ ಶಿಕ್ಷಣ ಕೊಡಿಸುತ್ತೇವೆ. ಪ್ರಾಮಾಣಿಕ ಭಕ್ತಿ ಹಾಗೂ ನಿಷ್ಟೂರ ನಡೆಗೆ ಹಾಲುಮತ ಸಮುದಾಯ ಪ್ರಸಿದ್ಧವಾಗಿದೆ. ಸರ್ವಧರ್ಮಿಯರು ಸೇರಿಕೊಂಡು ದಾನಿಗಳ ಸಹಕಾರದಿಂದ ಸುಸಜ್ಜಿತ ದೇವಸ್ಥಾನ ನಿರ್ಮಾಣ ಮಾಡಿದ್ದು ಒಳ್ಳೆಯ ಕಾರ್ಯ ಎಂದರು.

    ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸ ಡಾ.ಶಿವರಾಜ ಗುರಿಕಾರ ಮಾತನಾಡಿ, ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಯುವಕರು ದುಶ್ಚಟಗಳಿಂದ ದೂರವಿದ್ದು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.

    ಆರ್‌ಕೆಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಐ.ಎಸ್.ಗಿರಡ್ಡಿ ಮಾತನಾಡಿದರು. ಸೋಮಸಮುದ್ರದ ಶ್ರೀ ಸಿದ್ದಲಿಂಗ ದೇಶಿಕರು, ಬುದಗುಂಪಾದ ಶ್ರೀ ಸಿದ್ದೇಶ್ವರ ದೇವರು, ಶ್ರೀ ವಿಶ್ವೇಶ್ವರ ದೇವರು, ಇಟಗಿ ಷಣ್ಮುಖಪ್ಪಜ್ಜ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

    ಹಾಲುಮತ ಸಮುದಾಯದ ತಾಲೂಕು ಅಧ್ಯಕ್ಷ ವೀರನಗೌಡ ಬಳೂಟಗಿ, ಪ್ರಮುಖರಾದ ಕಳಕಪ್ಪ ಕಂಬಳಿ, ಹನುಮಂತಪ್ಪ ಹನುಮಾಪುರ, ರಾಮಣ್ಣ ಪ್ರಭಣ್ಣನವರ, ರೇವಣಪ್ಪ ಹಿರೇಕುರಬರ, ಷಣ್ಮುಖಪ್ಪ ಯರಂಗಳಿ, ಪ್ರಭು ಹೊಸಂಗಡಿ, ಗವಿಸಿದ್ದಪ್ಪ ಚೋಳಿನ, ಶೇಖರಪ್ಪ ಗುರಾಣಿ, ಅಡಿವೆಪ್ಪ ಲಕ್ಕಲಟ್ಟಿ, ಸಂಗಮೆಶ ಗಡಾದ, ಶಿವಲಿಂಗಪ್ಪ ಕವಲೂರು, ಮಲ್ಲಪ್ಪ ಕಿನ್ನಾಳ, ಸುರೇಶ ಬಡಪ್ಪನವರ, ಶರಣಪ್ಪ ಸೋಂಪುರ, ವಕೀಲ ಹುಚ್ಚೀರಪ್ಪ ಗುರಿಕಾರ, ಮಾಳಪ್ಪ, ಹನುಮಂತಪ್ಪ ಕೊಣ್ಣೂರು, ಭೀಮಪ್ಪ ಇಟಗಿ, ಕಳಕಪ್ಪ ಕುರಿ, ವೀರಣ್ಣ ನಿಂಗೋಜಿ, ಸಿದ್ದಲಿಂಗ ಶಾಸ್ತ್ರಿ ಇತರರಿದ್ದರು.

    ಶಾಸಕ ಭೇಟಿ

    ಶಾಸಕ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಬೀರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಶಾಸಕರಿಗೆ ಕಂಬಳಿ ಹೊದಿಸಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಸನ್ಮಾನಿಸಿದರು. ಗಣ್ಯರಾದ ಬಸವರಾಜ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು, ಕೆರಿಬಸಪ್ಪ ನಿಡಗುಂದಿ, ಶರಣಪ್ಪ ಗಾಂಜಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts