More

    ಊಟವನ್ನು ತ್ಯಜಿಸಿದಾಗ ನಿಮ್ಮ ದೇಹದಲ್ಲಿ ಏನಾಗುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ…

    ತೂಕ ಕಳೆದುಕೊಳ್ಳಲು ಅನೇಕ ಆರೋಗ್ಯಕರ ಮಾರ್ಗ ಅಥವಾ ಆಯ್ಕೆಗಳು ನಮ್ಮ ಮುಂದಿವೆ. ಆದರೆ, ಡಯೆಟ್​ ಮಾಡುವುದು ಅಂದರೆ ಊಟವನ್ನು ತ್ಯಜಿಸುವುದು ತೂಕ ಕಳೆದುಕೊಳ್ಳಲು ಇರುವ ಸುಲಭ ಮತ್ತು ವೇಗದ ಮಾರ್ಗ ಎಂದು ನಂಬಿದ್ದಾರೆ. ಆದರೆ, ಊಟವನ್ನು ತ್ಯಜಿಸುವುದು ನಿಮ್ಮ ದೇಹದ ಮೇಲೆ ದೀರ್ಘ ಕಾಲದ ಗಂಭೀರ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

    ನಾವು ಸೇವಿಸುವ ಆಹಾರವು ದೇಹದ ಪ್ರತಿಯೊಂದು ವ್ಯವಸ್ಥೆ ಮತ್ತು ಅಂಗಗಳಿಗೆ ಶಕ್ತಿಯನ್ನು ನೀಡುತ್ತದೆ. ಆದರೆ, ತೂಕ ಇಳಿಸಿಕೊಳ್ಳಲು ಬಯಸುವ ಅನೇಕರು, ತಾವು ಸೇವಿಸುವ ಆಹಾರ ಪ್ರಮಾಣದಲ್ಲಿ ಗಣನೀಯ ಕಡಿಮೆ ಮಾಡುತ್ತಾರೆ. ಇನ್ನೂ ಕೆಲವರು ಊಟವನ್ನೇ ತ್ಯಜಿಸುತ್ತಾರೆ. ಈ ರೀತಿ ಮಾಡಿದರೆ ನಿಮ್ಮ ದೇಹದಲ್ಲಿ ಏನಾಗುತ್ತದೆ ಗೊತ್ತಾ?

    ಆಹಾರವೇ ಶಕ್ತಿಯ ಮೂಲ
    ನಿಮ್ಮ ಮೆದುಳು ಮತ್ತು ದೇಹಕ್ಕೆ ಬೇಕಾದ ಶಕ್ತಿಯ ಪ್ರಾಥಮಿಕ ಮೂಲವು ನೀವು ಸೇವಿಸುವ ಆಹಾರದಿಂದ ಬರುತ್ತದೆ. ಸಮಯಕ್ಕೆ ಸರಿಯಾಗಿ ಅಥವಾ ನಿಯಮಿತವಾಗಿ ಸೇವಿಸದೇ ಇದ್ದಾಗ ತಕ್ಷಣ ದೇಹಕ್ಕೆ ಶಕ್ತಿಯ ಪೂರೈಕೆ ಕಡಿಮೆಯಾಗುತ್ತದೆ. ನೀವು ಊಟವನ್ನು ಬಿಟ್ಟರೆ ಅಥವಾ ದೀರ್ಘಕಾಲದವರೆಗೆ ಏನನ್ನೂ ತಿನ್ನದಿದ್ದರೆ, ನಿಮ್ಮ ದೇಹದ ಪ್ರತಿಯೊಂದು ಭಾಗದ ಮೇಲೂ ಅದು ಪರಿಣಾಮ ಬೀರುತ್ತದೆ. ಆಹಾರವನ್ನು ತ್ಯಜಿಸುವುದರಿಂದ ಉಂಟಾಗುವ ಅಪಾಯಕಾರಿ ಪರಿಣಾಮಗಳ ಬಗ್ಗೆ ನಾವೀಗ ತಿಳಿಯೋಣ.

    ಮನಸ್ಸಿನ ಮೇಲೆ ಪರಿಣಾಮ
    ದೀರ್ಘಕಾಲದವರೆಗೆ ಆಹಾರ ಸೇವಿಸದಿರುವುದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ರಿಸರ್ಚ್ ಅಂಡ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬೆಳಗಿನ ಉಪಾಹಾರವನ್ನು ತ್ಯಜಿಸುವುದು ಹದಿಹರೆಯದವರಲ್ಲಿ ಒತ್ತಡ ಮತ್ತು ಖಿನ್ನತೆಯ ಅಪಾಯವನ್ನು ಹೆಚ್ಚಿಸುತ್ತದೆ.

    ಒತ್ತಡ ಹಾರ್ಮೋನ್​
    ಹೆಚ್ಚು ಹೊತ್ತು ಆಹಾರವಿಲ್ಲದೆ ಇರುವುದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಗಮನಾರ್ಹವಾಗಿ ಕುಸಿಯಲು ಕಾರಣವಾಗಬಹುದು ಮತ್ತು ನಿಮ್ಮ ದೇಹವು ಕಾರ್ಟಿಸೋಲ್ ಉತ್ಪಾದಿಸಲು ಪ್ರಾರಂಭಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಈ ಕಾರ್ಟಿಸೋಲ್​ ಅನ್ನು ಒತ್ತಡದ ಹಾರ್ಮೋನ್ ಎಂದೂ ಕರೆಯುತ್ತಾರೆ. ಕಾರ್ಟಿಸೋಲ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ ಅದು ಒತ್ತಡವನ್ನು ಸಹ ಉಂಟುಮಾಡುತ್ತದೆ. ಇದು ನಿಮಗೆ ಆತಂಕ, ಚಿತ್ತ, ಕಿರಿಕಿರಿಯನ್ನುಂಟು ಮಾಡುತ್ತದೆ.

    ಜೀರ್ಣಕ್ರಿಯೆ ವ್ಯವಸ್ಥೆಗೆ ಹಾನಿ
    ಆಹಾರವನ್ನು ತಪ್ಪಿಸುವುದು ವಾಕರಿಕೆ ಮತ್ತು ಅತಿಸಾರ ಎರಡಕ್ಕೂ ಕಾರಣವಾಗಬಹುದು. ಅಲ್ಲದೆ, ತೀವ್ರ ಮಲಬದ್ಧತೆ ಉಂಟಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯ ಅಸಮರ್ಪಕ ಕಾರ್ಯ ನಿರ್ವಹಣೆಗೆ ಕಾರಣವಾಗುತ್ತದೆ. ನೀವು ಊಟವನ್ನು ಬಿಟ್ಟುಬಿಟ್ಟರೆ ಅಥವಾ ಅತಿಯಾಗಿ ತಿನ್ನುವ ಅಭ್ಯಾಸವೂ ಕೂಡ ಇದ್ದರೆ, ಅದು ನಿಮ್ಮ ಜೀರ್ಣಕ್ರಿಯೆಯನ್ನು ಇನ್ನಷ್ಟು ಹಾನಿಗೊಳಿಸುತ್ತದೆ.

    ನೀವು ದಿನವಿಡೀ ಸಾಕಷ್ಟು ತಿನ್ನದೇ ಇದ್ದರೆ, ರಕ್ತದಲ್ಲಿ ಕಡಿಮೆ ಸಕ್ಕರೆಯ ಮಟ್ಟದಿಂದಾಗಿ ಆಯಾಸ, ತಲೆತಿರುಗುವಿಕೆ, ದುರ್ಬಲ ಮತ್ತು ಆಲಸ್ಯವನ್ನು ಉಂಟುಮಾಡಬಹುದು. (ಏಜೆನ್ಸೀಸ್​)

    ರೈತರಿಗಾಗಿ ರಾಜ್ಯಾದ್ಯಂತ ಪ್ರವಾಸ; ಸರ್ಕಾರದ ವಿರುದ್ಧ ಯಡಿಯೂರಪ್ಪ ಗುಡುಗು

    ದಕ್ಷಿಣ ಆಫ್ರಿಕಾ ನೆಲದಲ್ಲಿ ಹ್ಯಾಟ್ರಿಕ್​ ವಿಕೆಟ್​ ಕಬಳಿಸಿದ ಮೊದಲ ಭಾರತೀಯ ಎನಿಸಿದ ಕನ್ನಡಿಗ ಪ್ರಸಿದ್ಧ ಕೃಷ್ಣ!

    https://www.vijayavani.net/wp-admin/post.php?post=1890274&action=edit

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts