More

    ಪೇಪರ್​ನಲ್ಲಿ ಪ್ಯಾಕ್​ ಮಾಡಿದ ಬಜ್ಜಿ, ಬೋಂಡಾಗಳನ್ನು ತಿನ್ನುತ್ತೀರಾ? ಇದು ಆರೋಗ್ಯಕ್ಕೆ ತುಂಬಾ ಡೇಂಜರ್​!

    ಅನೇಕ ಜನರು ರಸ್ತೆ ಬದಿಯ ಅಂಗಡಿಗಳಲ್ಲಿ ಗರಿಗರಿಯಾದ ಬಜ್ಜಿ ಮತ್ತು ಬೋಂಡಾಗಳನ್ನು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ಮಳೆಗಾಲ ಬಂತೆಂದರೆ ಬಜ್ಜಿ ಅಂಗಡಿಗಳಲ್ಲಿ ಸಾಕಷ್ಟು ಜನ ಕ್ಯೂನಲ್ಲಿ ನಿಂತು ಖರೀದಿ ಮಾಡುತ್ತಾರೆ. ಸಾಮಾನ್ಯವಾಗಿ ರಸ್ತೆ ಬದಿಯ ಅಂಗಡಿಗಳಲ್ಲಿ ತಿಂಡಿ ಅಥವಾ ಇತರ ಆಹಾರಗಳನ್ನು ಮಾರುವವರು ಅವುಗಳನ್ನು ಪೇಪರ್​ಗಳಲ್ಲಿ ಹಾಕಿಕೊಡುತ್ತಾರೆ. ಅಲ್ಲದೆ, ಪೇಪರ್​ನಲ್ಲಿಯೇ ಪ್ಯಾಕಿಂಗ್ ಮಾಡುತ್ತಾರೆ. ಆದರೆ, ಪೇಪರ್​ನಲ್ಲಿ ಪ್ಯಾಕ್ ಮಾಡಿದ ಬಿಸಿ ಬಿಸಿ ಬಜ್ಜಿ, ಬೋಂಡಾ ಮುಂತಾದ ತಿನಿಸುಗಳನ್ನು ತಿನ್ನುವುದು ತುಂಬಾ ಅಪಾಯಕಾರಿ. ಇದನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಬಹಿರಂಗಪಡಿಸಿದೆ.

    ಮನೆಗಳಲ್ಲಿಯೂ ಕೆಲವು ಮಹಿಳೆಯರು ಎಣ್ಣೆಯಲ್ಲಿ ಕರಿದ ತಿಂಡಿ, ತಿನಿಸುಗಳನ್ನು ಪೇಪರ್​ ಮೇಲೆ ಇಡುತ್ತಾರೆ. ಏಕೆಂದರೆ, ಎಣ್ಣೆ ಹೀರಿಕೊಳ್ಳಲಿ ಎಂದು. ಆದರೆ, ಇದು ತುಂಬಾ ಅಪಾಯಕಾರಿ. ಬಿಸಿಯಾದ ಆಹಾರ ಅಥವಾ ತಣ್ಣಗಾದ ಆಹಾರವನ್ನು ಪೇಪರ್​ಗಳಲ್ಲಿ ಸುತ್ತಿಟ್ಟು ತಿನ್ನುವುದು ತುಂಬಾ ಅಪಾಯಕಾರಿ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಎಚ್ಚರಿಸಿದೆ.

    ಪೇಪರ್​ಗಳಲ್ಲಿ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ತಿನ್ನುವುದು ಅನಾರೋಗ್ಯವನ್ನು ಖರೀದಿಸಿದಂತೆ ಎಂದು FSSAI ಬಹಿರಂಗಪಡಿಸಿದೆ. ಪೇಪರ್‌ಗಳಲ್ಲಿ ಬಳಸುವ ಪ್ರಿಂಟಿಂಗ್ ಇಂಕ್ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ ಮತ್ತು ಅವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ದೇಶಾದ್ಯಂತ ಆಹಾರ ಮಾರಾಟಗಾರರು ಪದಾರ್ಥಗಳನ್ನು ಪ್ಯಾಕಿಂಗ್ ಮಾಡಲು ಪೇಪರ್​ಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಇಂತಹ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಎಫ್‌ಎಸ್‌ಎಸ್‌ಎಐ ವರ್ತಕರಿಗೆ ಸೂಚಿಸಿದೆ.

    ಯಾವುದೇ ಸಂದರ್ಭದಲ್ಲೂ ಆಹಾರ ಪ್ಯಾಕ್ ಮಾಡಲು ಪೇಪರ್​ಗಳನ್ನು ಬಳಸಬಾರದು ಎಂದು ಎಚ್ಚರಿಸಿದೆ. ಪೇಪರ್​ಗಳ ಮುದ್ರಣಕ್ಕೆ ಬಳಸುವ ಶಾಯಿ ದೇಹಕ್ಕೆ ಹೋದರೆ ಹೆಚ್ಚು ಅಪಾಯಕಾರಿ ಮತ್ತು ಆಹಾರದೊಂದಿಗೆ ಬೆರೆತರೆ ಆಹಾರವನ್ನು ಕಲುಷಿತಗೊಳಿಸುತ್ತದೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪ್ರಿಂಟಿಂಗ್ ಇಂಕ್​ನಲ್ಲಿ ಸೀಸ, ಹೆವಿ ಲೋಹಗಳು ಹಾಗೂ ಹಲವು ರಾಸಾಯನಿಕಗಳು ಆಹಾರದ ಜೊತೆಗೆ ದೇಹಕ್ಕೆ ಹೋದರೆ ತುಂಬಾ ಅಪಾಯಕಾರಿ ಎಂಬ ಅಂಶ ಬಹಿರಂಗವಾಗಿದೆ. ಈ ಇಂಕ್​ನಲ್ಲಿರುವ ರಾಸಾಯನಿಕವು ಆಹಾರದಲ್ಲಿ ಸುಲಭವಾಗಿ ಹೀರಲ್ಪಡುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಇದು ತಕ್ಷಣದಲ್ಲಿ ಪರಿಣಾಮ ಬೀರದಿದ್ದರೂ ಭವಿಷ್ಯದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.

    ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಕಾರ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಅಥವಾ ಪ್ಯಾಕಿಂಗ್ ಮಾಡಲು ಪತ್ರಿಕೆಗಳು ಅಥವಾ ಇತರ ಮುದ್ರಣ ಕಾಗದಗಳನ್ನು ಬಳಸದಂತೆ ಎಚ್ಚರಿಸಿದೆ. (ಏಜೆನ್ಸೀಸ್​)

    ಮಗಳಿಂದಲೇ ಬಯಲಾಯ್ತು ನಟಿ ಲಕ್ಷ್ಮೀಗಿದ್ದ ಅಫೇರ್! ದಾಂಪತ್ಯ ದ್ರೋಹದ ಗುಟ್ಟು ಬಿಚ್ಚಿಟ್ಟ ಮಾಜಿ ಗಂಡ

    ಊಟಕ್ಕೂ ಮುನ್ನ ವಿಶಾಲ್​ ಹವ್ಯಾಸ ವೈರಲ್​! ಟ್ರೋಲ್​ಗಳಿಗೆ ಖಡಕ್​ ತಿರುಗೇಟು ಕೊಟ್ಟ​ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts