More

    ಜಿಮ್​ನಲ್ಲಿ ಗಂಟೆಗಟ್ಟಲೆ ಕಳೆದರೂ ಸಣ್ಣ ಆಗುತ್ತಿಲ್ಲವಾ.. ? ನೀವು ಮಾಡುತ್ತಿರೋ ತಪ್ಪೇನು ಗೊತ್ತಾ…

    ಬೆಂಗಳೂರು: ಜಿಮ್​ನಲ್ಲಿ ಗಂಟೆಗಟ್ಟಲೆ ವ್ಯಾಯಾಮ ಮಾಡುತ್ತಿದ್ದೀರಾ… ದಿನಾ 10 ಕಿಲೋಮೀಟರ್ ಓಡುತ್ತಿದ್ದೀರಾ ಇಲ್ಲ ಸೈಕಲ್ ಮಾಡುತ್ತಿದ್ದೀರಾ….? ಆದರೆ ಅಷ್ಟಕ್ಕೇ ನಿಮ್ಮ ತೂಕ ಇಳಿಯಬೇಕೆಂದಿಲ್ಲ. ಯಾಕೆ ಗೊತ್ತೆ ? ತೂಕದ ವಿಷಯದಲ್ಲಿ ವ್ಯಾಯಾಮಕ್ಕಿಂತ ನೀವು ತಿನ್ನೋ ಆಹಾರಕ್ಕೇ ಮಹತ್ವ ಜಾಸ್ತಿ ಅಂತೆ.

    ಹೌದು! ಸಣ್ಣ ಆಗಲು ವ್ಯಾಯಾಮ ಮಾಡಬೇಕೋ… ಕಡಿಮೆ ತಿನ್ನಬೇಕೋ… ಅಂತ ಯೋಚಿಸ್ತಾ ಇರೋರಿಗೆ ಉತ್ತರ ಕೊಡುವ ಅಧ್ಯಯನ ವರದಿಯೊಂದು ಹೊರಬಿದ್ದಿದೆ. ಅದರ ಪ್ರಕಾರ ತೂಕ ಕಡಿಮೆ ಆಗೋದು ಶೇ.80 ರಷ್ಟು ನಮ್ಮ ಆಹಾರಕ್ರಮದ ಮೇಲೆ ಅವಲಂಬಿಸಿದ್ದರೆ ಶೇ.20 ರಷ್ಟು ಮಾತ್ರ ವ್ಯಾಯಾಮದ ಮೇಲೆ ಅವಲಂಬಿಸಿದೆ.

    ಪ್ರತಿದಿನ ಜಿಮ್ಮಲ್ಲಿ ವರ್ಕೌಟ್ ಮಾಡುವ, ಇಲ್ಲವೇ ಬ್ಯಾಡ್ಮಿಂಟನ್, ಸೈಕಲಿಂಗ್ ಮಾಡುವ ಎಷ್ಟೋ ಸ್ನೇಹಿತರು ನಿಮಗಿರಬಹುದು. ಅವರ ಫಿಟ್​ನೆಸ್​ ಮಟ್ಟ ಚೆನ್ನಾಗಿದ್ದರೂ ಅವರ ತೂಕ ನಿಯಂತ್ರಣಕ್ಕೆ ಬರುತ್ತೆ ಅನ್ನೋದರ ಬಗ್ಗೆ ಗ್ಯಾರಂಟಿ ಇಲ್ಲ. ಯಾಕಂದ್ರೆ ನಾವು ಕ್ಯಾಲರಿ ಬರ್ನ್ ಮಾಡುವ ಪ್ರಮಾಣಕ್ಕಿಂತ ದೇಹಕ್ಕೆ ಹೊಸದಾಗಿ ಎಷ್ಟು ಕ್ಯಾಲರಿ ಸೇರಿಸುತ್ತೇವೆ ಅನ್ನೋದರ ಬಗ್ಗೆ ಎಚ್ಚರಿಕೆ ವಹಿಸಬೇಕು ಅಂತಾರೆ ವಿಜ್ಞಾನಿಗಳು.

    ಹೊಟ್ಟೆ ಬಿರಿಯಾ ತಿಂದು ಗಂಟೆಗಟ್ಟಲೆ ಕಸರತ್ತು ಮಾಡಿದರೆ ಪ್ರಯೋಜನವಿಲ್ಲ. ಆರೋಗ್ಯದಾಯಕ ಆಹಾರವನ್ನು ಸಮಯಕ್ಕೆ ಸರಿಯಾಗಿ ತಿನ್ನಬೇಕು. ದಿನದ ಒಟ್ಟು ಕ್ಯಾಲರಿ ಇನ್ಟೇಕ್​ಅನ್ನು ಕಡಿಮೆ ಮಾಡಬೇಕು. ಅದಕ್ಕಾಗಿ ಪ್ರೋಟೀನ್​ ಹೆಚ್ಚಿರುವ ಪದಾರ್ಥಗಳನ್ನು ಹೆಚ್ಚು ತಿನ್ನಿ. ಕಾರ್ಬೋಹೈಡ್ರೇಟ್​ಯುಕ್ತ ಆಹಾರವನ್ನು ಕಡಿಮೆ ತಿನ್ನಿ. “ಒಂದ್ಹೊತ್ತು ಉಂಡವ ಯೋಗಿ, ಎರಡುಹೊತ್ತು ಉಂಡವ ಭೋಗಿ. ಮೂರುಹೊತ್ತು ಉಂಡವ ರೋಗಿ” ಅನ್ನೋ ಮಾತಿನಂತೆ ಬೇಕಾದ್ದಕ್ಕಿಂತ ಒಂದು ತುತ್ತು ಕಡಿಮೆ ತಿಂದರೆ ಒಳ್ಳೆಯದು. ಹಿತಮಿತವಾಗಿ ತಿನ್ನುವವರು ವ್ಯಾಯಾಮ ಮಾಡದೆಯೂ ತಮ್ಮ ತೂಕವನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು.

    ಹಾಗಂತ ವರ್ಕೌಟ್ ಮಾಡುವುದನ್ನು ಬಿಡಬೇಡಿ. ಏಕೆಂದರೆ ವ್ಯಾಯಾಮದಿಂದ ದೇಹದ ಮೆಟಾಬಾಲಿಸಂ ಉತ್ತಮಗೊಂಡು ಹೆಚ್ಚು ಕ್ಯಾಲರಿ ಬರ್ನ್ ಮಾಡಬಹುದು ಅಂತಲೂ ಅದೇ ವಿಜ್ಞಾನಿಗಳು ಹೇಳಿದ್ದಾರೆ. ಅಲ್ಲದೆ, ನಿಯಮಿತ ದೈಹಿಕ ಚಟುವಟಿಕೆಯಿಂದ ನಮ್ಮ ದೇಹದ ಶಕ್ತಿ ಹೆಚ್ಚುತ್ತದೆ, ಹೃದಯ ಚೆನ್ನಾಗಿರುತ್ತೆ. ಮನಸ್ಸು ಚುರುಕಾಗಿ ಉಲ್ಲಾಸಮಯ ಜೀವನ ನಡೆಸಬಹುದು.

    ವ್ಯಾಯಾಮ ಎಂದಾಕ್ಷಣ ಜಿಮ್ಮಿಗೇ ಹೋಗಬೇಕೆಂದಿಲ್ಲ. ನಿತ್ಯ ವಾಕಿಂಗ್ ಅಥವಾ ರನ್ನಿಂಗ್ ಮಾಡುವುದು ಯೋಗಾಭ್ಯಾಸ ಮಾಡುವುದು ಕೂಡ ಪರಿಣಾಮಕಾರಿ. ಯಾವ ದೈಹಿಕ ಚಟುವಟಿಕೆ ಎನ್ನುವುದಕ್ಕಿಂತ ಹೆಚ್ಚು ನಿಯಮಿತವಾಗಿ ಮಾಡುವುದರ ಮೇಲೆ ನಿಮ್ಮ ಗಮನ ಇರಲಿ.
    ಆದ್ದರಿಂದ ಹೊಸ ವರ್ಷಕ್ಕೆ ತೂಕ ಇಳಿಸಬೇಕೆಂಬ ನಿರ್ಧಾರ ಮಾಡಿದ್ದರೆ… ಜಿಮ್ ಸದಸ್ಯತ್ವ ಪಡೆಯೋದಕ್ಕೆ ಅಥವಾ ರನ್ನಿಂಗ್ ಶೂ ಕೊಳ್ಳೋದಕ್ಕೆ ಮುಂಚೆ ನಿಮ್ಮ ಊಟದ ಮೆನು ಕಡೆ ಗಮನ ಕೊಡಿ. ಹಿತಮಿತವಾಗಿ ತಿನ್ನಿ, ಅದರೊಂದಿಗೆ 30 ಕನಿಷ್ಠ 30 ರಿಂದ 40 ನಿಮಿಷ ವ್ಯಾಯಾಮ ಮಾಡಿ. ನಿಮ್ಮ ಆರೋಗ್ಯ ಹೆಚ್ಚುವುದರೊಂದಿಗೆ ನಿಮ್ಮ ತೂಕ ಕೂಡ ಹತೋಟಿಗೆ ಬರುತ್ತೆ. ​

    VIDEO: ಬೆಲ್ಲಿ ಡಾನ್ಸ್​ ಹರಿಬಿಟ್ಟು ಅಭಿಮಾನಿಗಳ ಹುಚ್ಚೆಬ್ಬಿಸಿದ ನಟಿ ಜಾಹ್ನವಿ ಕಪೂರ್​

    ತವರಿಗೆ ಹೋದ ವಧುವಿಗಾಗಿ ಇತ್ತ ವರ ಕಾಯುತ್ತಿದ್ದರೆ, ಅತ್ತ ಆಕೆ ಲವರ್​ ಜತೆ ಎಸ್ಕೇಪ್​!

    ಹಕ್ಕಿಜ್ವರದ ಭೀತಿಯಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ: ಶುರುವಾಗಿದೆ ಟೆನ್ಷನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts