ತವರಿಗೆ ಹೋದ ವಧುವಿಗಾಗಿ ಇತ್ತ ವರ ಕಾಯುತ್ತಿದ್ದರೆ, ಅತ್ತ ಆಕೆ ಲವರ್​ ಜತೆ ಎಸ್ಕೇಪ್​!

marraige
Published on

ಛತ್ತರಪುರ್ (ಮಧ್ಯಪ್ರದೇಶ): ಮದುವೆಯಾಗುವವರೆಗೂ ಸುಮ್ಮನಿದ್ದು ನಂತರ ಪತಿಗೆ ಕೈಕೊಟ್ಟ ಯುವತಿಯೊಬ್ಬಳು ಪ್ರಿಯಕರನ ಜತೆ ಓಡಿಹೋಗಿರುವ ಘಟನೆ ಮಧ್ಯಪ್ರದೇಶದ ಛತ್ತರಪುರ್​ನಲ್ಲಿ ನಡೆದಿದೆ. ಓಡಿಹೋಗಿರುವುದು ಮಾತ್ರವಲ್ಲದೇ ಸುಮಾರು ಐದು ಲಕ್ಷ ರೂಪಾಯಿ ಬೆಲೆ ಬಾಳು ಒಡವೆ ಮತ್ತು ಹಣವನ್ನೂ ತೆಗೆದುಕೊಂಡು ಪರಾರಿಯಾಗಿದ್ದಾಳೆ!

ತವರು ಮನೆಗೆ ಹೋಗಿ ಬರುವುದಾಗಿ ಹೇಳಿದಾಕೆಗಾಗಿ ಪತಿ ಕಾಯುತ್ತ ಕುಳಿತಿದ್ದಾನೆ. ಎಷ್ಟು ದಿನವಾದರೂ ಬರದಾಗ ವಿಷಯ ಬೆಳಕಿಗೆ ಬಂದಿದೆ. ಅಷ್ಟೊತ್ತಿಗಾಗಲೇ ಈ ಯುವತಿ ಪರಾರಿಯಾಗಿದ್ದು, ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೀಗೆ ಪರಾರಿಯಾಗಿರುವ ಯುವತಿಯ ಹೆಸರು ಮೂರ್ತಿ ರೆಕ್ವಾರ್​. 20 ವರ್ಷದ ಈ ಯುವತಿಯ ಮದುವೆ ಕಳೆದ ಡಿಸೆಂಬರ್​ನಲ್ಲಿ ರಾಹುಲ್​ ಎಂಬ ಯುವಕನ ಜತೆ ಆಗಿತ್ತು. ಮದುವೆಯಾಗುವವರೆಗೂ ತನ್ನ ಪ್ರೇಮದ ವಿಷಯವನ್ನು ಬಚ್ಚಿಟ್ಟಿದ್ದಳೋ ಅಥವಾ ಮನೆಯವರು ಒತ್ತಾಯದಿಂದ ಈ ಮದುವೆ ಮಾಡಿದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ ಮದುವೆಯನ್ನು ಶಾಸ್ತ್ರೋಕ್ತವಾಗಿ ಮಾಡಿಕೊಂಡಿದ್ದಾಳೆ ಯುವತಿ.

ನಂತರ ಸಂಪ್ರದಾಯದಂತೆ ಮದುಮಗಳನ್ನು ಮದುವೆಯಾದ 18ನೇ ದಿನಕ್ಕೆ ತವರಿಗೆ ಕಳಿಸಬೇಕು. ಮೊದಲೇ ಪ್ಲ್ಯಾನ್​ ಮಾಡಿಕೊಂಡು ಇಟ್ಟುಕೊಂಡಿದ್ದ ಮೂರ್ತಿ ರೆಕ್ವಾರ್​, ತವರು ಮನೆಗೆ ಹೋಗಿದ್ದಾರೆ. ಅಲ್ಲಿಂದ ವಾಪಸ್ ಗಂಡನ ಮನೆಗೆ ವಾಪಸ್ ತೆರಳುವುದಾಗಿ ಹೇಳಿ ಹೊರಟಿದ್ದಾಳೆ.

ಇತ್ತ ಹೊಸ ಪತ್ನಿಗಾಗಿ ಕಾದುಕುಳಿತಿದ್ದ ರಾಹುಲ್​ ಆಕೆಗಾಗಿ ಕಾದು ಕಾದು ಸುಸ್ತಾಗಿದ್ದಾನೆ. ನಂತರ ನೇರವಾಗಿ ಪತ್ನಿಗೆ ತವರಿಗೆ ಹೋಗಿದ್ದಾನೆ. ಪತಿಯ ಮನೆಗೆ ಹೋದಾಕೆ ಅಲ್ಲಿಯೂ ಹೋಗದುದ್ದನ್ನು ಕಂಡು ಎರಡೂ ಕುಟುಂಬದವರಿಗೆ ದಿಗಿಲಾಗಿದೆ.

ಕೇಸ್​ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ತನಿಖೆ ಕೈಗೊಂಡ ಪೊಲೀಸರಿಗೆ ಯುವತಿ ಅದೇ ಗ್ರಾಮದ ಭಜ್ಜು ಯಾದವ್ ಎಂಬ ಪ್ರಿಯಕರನ ಜತೆ ಹೋಗಿರುವುದು ತಿಳಿದಿದೆ. ಹೋಗುವಾಗ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 20 ಸಾವಿರ ರೂ. ನಗದು ತೆಗೆದುಕೊಂಡು ಹೋಗಿರುವುದು ತಿಳಿದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net