More

    ಗಂಡನ ಹಿಂಸೆಯಿಂದಾಗಿ ತವರು ಸೇರಿ ವಿವಾಹಿತನ ಪ್ರೇಮಪಾಶಕ್ಕೆ ಸಿಲುಕಿಬಿಟ್ಟಿದ್ದೇನೆ: ಪ್ಲೀಸ್​ ಪರಿಹಾರ ಹೇಳಿ

    ಗಂಡನ ಹಿಂಸೆಯಿಂದಾಗಿ ತವರು ಸೇರಿ ವಿವಾಹಿತನ ಪ್ರೇಮಪಾಶಕ್ಕೆ ಸಿಲುಕಿಬಿಟ್ಟಿದ್ದೇನೆ: ಪ್ಲೀಸ್​ ಪರಿಹಾರ ಹೇಳಿನಾನು ಮೂವತ್ತು ವರ್ಷದ ಗೃಹಿಣಿ. ಐದು ವರ್ಷಗಳ ಹಿಂದೆ ಮದುವೆಯಾಗಿ ಮೂರೇ ತಿಂಗಳಲ್ಲಿ ಗಂಡನ ಕಾಟ ತಾಳಲಾರದೆ ಬಿಟ್ಟು ಬಂದೆ. ನಾನು ಟೈಲರಿಂಗ್ ಕಲಿತದ್ದರಿಂದ ತೌರಿನವರಿಗೆ ಭಾರವಾಗದೆ ಬಟ್ಟೆಗಳನ್ನು ಹೊಲಿದುಕೊಂಡು ನನ್ನ ಮಟ್ಟಿಗೆ ನಾನು ಸುಖವಾದ ಜೀವನವನ್ನೇ ಮಾಡುತ್ತಿದ್ದೇನೆ.

    ಗಂಡನ ಜತೆಗಿನ ಆ ಅನುಭವ ಎಷ್ಟು ಕೆಟ್ಟದಾಗಿತ್ತೆಂದರೆ ಇನ್ನು ಮೇಲೆ ಯಾವ ಗಂಡಸನ್ನೂ ನಂಬಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದೆ. ಆದರೆ ಯಾವುದೋ ಕೆಟ್ಟ ಘಳಿಗೆಯಲ್ಲಿ ಮತ್ತೊಬ್ಬ ಪುರುಷ ನನ್ನ ಬದುಕಲ್ಲಿ ಪ್ರವೇಶಿಸಿದ. ಆತನಿಗೆ ಮದುವೆಯಾಗಿ ಮಕ್ಕಳೂ ಇದ್ದಾರೆ.

    ಆದರೂ ನನ್ನೆಲ್ಲ ಕಥೆಯನ್ನು ಕೇಳಿ ಅನುಕಂಪ ತೋರಿಸಿದ. ನನಗೆ ದಿನಕ್ಕೆ ನೂರು ಸಲ ಫೋನ್​ ಮಾಡುತ್ತ ಭರವಸೆಯನ್ನು ತುಂಬುತ್ತಿದ್ದ. ನನಗೂ ಬದುಕಿಗೆ ಒಂದು ಆಸರೆ ಬೇಕಾಗಿತ್ತಲ್ಲ. ಅದಕ್ಕೆ ಅವನನ್ನು ನಂಬಿದೆ. ಪ್ರೀತಿಸಿದೆ. ಅವನು ನಮ್ಮ ವಿಚಾರ ತನ್ನ ಹೆಂಡತಿಗೆ ಹೇಳಿರುವುದಾಗಿಯೂ ಅವಳು ಈ ನಮ್ಮ ಸಂಬಂಧವನ್ನು ಒಪ್ಪಿರುವುದಾಗಿಯೂ ತಿಳಿಸಿದ. ಅವನು ಹಾಗೆ ಹೇಳಿದ್ದನ್ನು ನಾನು ರೆಕಾರ್ಡ್ ಮಾಡಿಟ್ಟಿದ್ದೇನೆ. ನಂತರ ಅವನು ಯಾವುದೋ ಸಾಲ ತೀರಿಸಲು 70 ಸಾವಿರ ರೂಪಾಯಿ ಕೇಳಿದ. ನಾನು ಕೊಡಲಿಲ್ಲ.

    ಅದರಿಂದ ಕೋಪಗೊಂಡು ನನ್ನನ್ನು ಮಾತನಾಡಿಸುವುದನ್ನೇ ಬಿಟ್ಟಿದ್ದೇನೆ. ನನಗೆ ತುಂಬ ದುಃಖವಾಗುತ್ತದೆ ಮೇಡಂ. ನಾನವನನ್ನು ಎಷ್ಟೊಂದು ಪ್ರೀತಿಸಿದೆ. ನನ್ನ ಮುಂದಿನ ಬದುಕಿಗೆ ಆಧಾರವಾಗುತ್ತಾನೆ ಎಂದು ನಂಬಿದೆ. ಈಗಂತೂ ದೂರವಾಗಿಯೇಬಿಟ್ಟಿದ್ದಾನೆ. ನನಗೀಗ ಹಗಲು ನೆಮ್ಮದಿಯಿಲ್ಲ, ರಾತ್ರಿ ನಿದ್ರೆಯಿಲ್ಲ. ಏನು ಮಾಡಲಿ ತಿಳಿಯುತ್ತಿಲ್ಲ.

    ಉತ್ತರ:ನಿಮ್ಮ ಪತ್ರ ಓದಿ ನಿಜಕ್ಕೂ ಮನಸ್ಸು ಭಾರವಾಯಿತು. ಹದಿಹರೆಯದ ಹುಡುಗಿಯರು ಮುಗ್ಧರಾಗಿ ಗಂಡಿನ ಮಾತುಗಳಿಗೆ ಮರುಳಾಗುತ್ತಾರೆ. ಆದರೆ ನೀವು ಇಷ್ಟೆಲ್ಲ ಜೀವನದಲ್ಲಿ ಕಹಿ ಅನುಭವವನ್ನು ಪಡೆದು, ಮದುವೆಯಾಗಿ ಹೆಂಡತಿಯೊಡನೆ ಬಾಳ್ವೆ ನಡೆಸುತ್ತಿರುವ ಮನುಷ್ಯನ ಮಾತಿಗೆ ಮರುಳಾಗಿದ್ದಿರಲ್ಲ? ಏನೆನ್ನಲಿ? ಆದರೂ ನೀವು ಜಾಣೆ.

    ಆತ ನಿಮ್ಮ ದೇಹವನ್ನು ಮತ್ತು ಹಣವನ್ನು ಬಳಸದಂತೆ ಜಾಗೃತರಾಗಿದ್ದೀರಿ. ಅದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ. ನಾನು ಈ ಕಾಲಂ ಮೂಲಕ ಪದೇಪದೆ ಒಂದು ಎಚ್ಚರವನ್ನು ಮಹಿಳೆಯರಿಗೆ ಕೊಡುತ್ತಲೇ ಇರುತ್ತೇನೆ. `ಮದುವೆಯಾಗಿ ಹೆಂಡತಿ ಮತ್ತು ಮಕ್ಕಳ ಜತೆ ಜೀವನ ಮಾಡುತ್ತಿರುವ ಗಂಡಸು ನಿಮ್ಮ ಬದುಕಿನೊಳಗೆ ಪ್ರವೇಶಿಸಲು ಪ್ರಯತ್ನಿಸಿದರೆ, ಅದಕ್ಕೆ ಅನುವು ಮಾಡಿಕೊಡಬೇಡಿ’ ಎಂದು. ಆದರೂ ಅಸಹಾಯಕತೆಯೋ, ಏಕಾಂಗಿತನವೋ ಬಹಳ ಮಹಿಳೆಯರು ಹೀಗೆ ಮರುಳಾಗಿ ನಂತರ ಪರಿತಪಿಸುತ್ತಾರೆ. ನೀವು ಸಹ ಅದೇ ತಪ್ಪನ್ನು ಮಾಡಲುಹೋಗಿ ಸ್ವಲ್ಪದರಲ್ಲಿಯೇ ಬಚಾವಾಗಿದ್ದೀರಿ.

    ನಿಮಗೀಗ ಆತ ದೂರಾದನೆಂಬ ನೋವು ಮಾತ್ರವಿದೆ. ಅದನ್ನು ಸಹಿಸುವುದು ಕಷ್ಟ ಎಂಬುದು ನನಗೆ ಅರ್ಥವಾಗುತ್ತದೆ. ಆದರೆ ಒಮ್ಮೆ ಯೋಚಿಸಿ, ಆತ ನಿಮ್ಮೊಡನೆ ದೇಹಸಂಪರ್ಕವನ್ನು ಬೆಳೆಸಿ, ನೀವೊಂದು ಮಗುವಿನ ತಾಯಿಯಾಗುವ ಸ್ಥಿತಿಗೆ ತಂದಿತ್ತು, ನಿಮ್ಮ ಹಣವನ್ನು ಪಡೆದು ಪರಾರಿಯಾಗಿದ್ದರೆ, ನೀವು ಎಷ್ಟೊಂದು ನೋವನ್ನು ಅನುಭವಿಸಬೇಕಾಗಿತ್ತಲ್ಲವೇ?

    ಇಂಥದ್ದೇನೂ ಆಗಿಲ್ಲವಲ್ಲ? ಖುಷಿಪಡಬಹುದು ಅಲ್ಲವೇ? ನಿಮ್ಮ ವಯಸ್ಸಿಗೆ ಮರುಮದುವೆ ಆಗುವುದು ಅಗತ್ಯವಿದೆ. ಆದರೆ ಸರಿಯಾದವರನ್ನು ಆರಿಸಿ. ಜಗತ್ತಿನಲ್ಲಿ ಇನ್ನು ಒಳ್ಳೆಯ ಪುರುಷರಿದ್ದಾರೆ. ನಿಮಗೂ ಅಂಥವರು ಸಿಗಬಹುದು.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಮೊದಲ ರಾತ್ರಿಯೇ ನೀವು ನನಗೆ ಬೇಡ ಎಂದುಬಿಟ್ಟಳು- ನರಕವಾಗಿರುವ ಬದುಕನ್ನು ಹೇಗೆ ಸಹಿಸಲಿ?

    ಮೂರು ಮಕ್ಕಳ ತಂದೆಯ ಪ್ರೀತಿಗೆ ಬಿದ್ದು ಮದುವೆಯಾಗಲಾರದೇ ತೊಳಲಾಡುತ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿ

    ನಾನು ತುಂಬಾ ಒಳ್ಳೆಯವಳು ಮೇಡಂ… ಆದ್ರೆ ಎಲ್ಲಾ ತಪ್ಪಾಗಿ ಭಾವಿಸ್ತಾರೆ, ಏನ್​ ಮಾಡ್ಲಿ?

    ನಿನ್ನನ್ನೇ ಪ್ರೀತಿಸೋದು ಅಂದೋಳು ಈಗ ಬೇರೆ ಮದ್ವೆಯಾಗಹೊರಟಿದ್ದಾಳೆ- ಸಾಯೋಣ ಎನಿಸ್ತಿದೆ…

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts