More

    ನಾನು ಅರ್ಜಿ ಹಾಕಿರಲಿಲ್ಲ, ಸೋತಿದ್ರೆ ಮಂತ್ರಿಯಾಗ್ತಿದ್ದೆಯೇನೋ- ರೇಣುಕಾಚಾರ್ಯ ಕಣ್ಣೀರು

    ಬೆಂಗಳೂರು: ಇತ್ತ ಸಚಿವರ ಪಟ್ಟಿ ಹೊರಬರುತ್ತಲೇ, ತಮ್ಮ ಹೆಸರು ಇಲ್ಲದ್ದನ್ನು ಕಂಡು ಅನೇಕ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೊನೆಯ ಕ್ಷಣದವರೆಗೂ ತಮ್ಮ ಹೆಸರು ಸಚಿವರ ಪಟ್ಟಿಯಲ್ಲಿ ಇರುತ್ತದೆ ಎಂದು ನಂಬಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಳ್ಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ನಿರೀಕ್ಷೆ ಹುಸಿಯಾದುದಕ್ಕೆ ಗದ್ಗರಿತರಾಗಿದ್ದಾರೆ.

    ಪತ್ರಕರ್ತರ ಜತೆ ಮಾತನಾಡಿದ ಅವರು, ನನಗೆ ಈ ಬಾರಿ ಸಂಪುಟದಲ್ಲಿ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಸಚಿವ ಸ್ಥಾನಕ್ಕಾಗಿ ನಾನು ಲಾಬಿ ಮಾಡಿಲ್ಲ, ಅರ್ಜಿಯನ್ನೂ ಹಾಕಿರಲಿಲ್ಲ. ಲಾಬಿ ಮಾಡದೆ ಇದ್ದದ್ದೂ ತಪ್ಪು ಎಂದು ಎನಿಸುತ್ತಿದೆ ಎಂದು ಕಣ್ಣೀರು ಹಾಕಿದ್ದಾರೆ.

    ಇದನ್ನೂ ಓದಿ: ಏಳು ಮಂದಿಗೆ ಒಲಿದ ಸಚಿವ ಸ್ಥಾನ: ನೂತನ ಸಚಿವರ ಹೆಸರು ಪ್ರಕಟಿಸಿದ ಸಿಎಂ ಬಿಎಸ್​ವೈ

    ಅತಿಯಾದ ನಿಷ್ಠೆ ನನಗೆ ಮುಳುವಾಯ್ತು ಎಂದು ಮುಖ್ಯಮಂತ್ರಿಗಳ ಕ್ರಮಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ನನಗೆ ಮಂತ್ರಿಸ್ಥಾನ ನೀಡದಿದ್ದರೂ ಚಿಂತೆಯಿಲ್ಲ. ಆದರೆ ಐದಾರು ಬಾರಿ ಗೆದ್ದಿರುವ ಹಿರಿಯ ಶಾಸಕರಿದ್ದಾರೆ. ಅಂಥವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕಿತ್ತು. ಸೋತವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ನಾನೂ ಚುನಾವಣೆಯಲ್ಲಿ ಸೋತಿದ್ದರೆ ಸಚಿವ ಸ್ಥಾನ ಸಿಗುತ್ತಿತ್ತೇನೋ, ಹೀಗಾದರೆ ಗೆದ್ದವರ ಗತಿಯೇನು ಎಂದು ಪ್ರಶ್ನಿಸಿದರು.

    ಸಂದರ್ಭ ಬಂದಾಗ ಎಲ್ಲಕ್ಕೂ ಉತ್ತರ ಕೊಡುತ್ತೇನೆ ಎಂದರು. ನಾನು ಸಾಮಾನ್ಯ ವ್ಯಕ್ತಿ, ನನಗೆ ಸಾಮರ್ಥ್ಯ ಇಲ್ಲ, ಅಸಮರ್ಥ ನಾನು, ಸಚಿರಾಗಲೂ ಅರ್ಹತೆ ಬೇಕಲ್ಲ ಅದು ನನ್ನಲ್ಲಿ ಇಲ್ಲ ಎಂದು ಹೇಳುವ ಮೂಲಕ ಕಣ್ಣೀರು ಹಾಕಿದರು.

    ಈಗಿನ ಸರ್ಕಾರ ಬೆಂಗಳೂರು ಮತ್ತು ಬೆಳಗಾವಿಗೆ ಸೀಮಿತವಾಗಿದೆ. ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಕಡೆಗಣಿಸುವುದು ಸರಿಯಲ್ಲ. ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಕೆಲವು ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಬೇಕಿತ್ತು ಎಂದರು.

    ಗಂಡನ ಹಿಂಸೆಯಿಂದಾಗಿ ತವರು ಸೇರಿ ವಿವಾಹಿತನ ಪ್ರೇಮಪಾಶಕ್ಕೆ ಸಿಲುಕಿಬಿಟ್ಟಿದ್ದೇನೆ: ಪ್ಲೀಸ್​ ಪರಿಹಾರ ಹೇಳಿ

    ನನ್ನಂತೆ ಹೊಳೆಯಬೇಕೆ? ಹಾಗಿದ್ದರೆ ಹೀಗೆ ಮಾಡಿ ಎಂದಳು ಈ ಸುಂದರಿ: ಓದಿ ‘ವ್ಯಾಕ್’​ ಅನ್ನಬೇಡಿ!

    ಕೆಜಿಎಫ್ 2 ಟೀಸರ್​ ಬಿಡುಗಡೆ ಬೆನ್ನಲ್ಲೇ ಯಶ್​ಗೆ ಬಿಗ್​ ಶಾಕ್​- ನೋಟಿಸ್​ ನೀಡಿದ ಆರೋಗ್ಯ ಇಲಾಖೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts