More

    ತನ್ನ ಹುಟ್ಟುಹಬ್ಬಕ್ಕೆ ಅಪರಿಚಿತ ಗ್ರಾಹಕ ಕೇಕ್​ ಆರ್ಡರ್​ ಮಾಡಿದಾಗ… ಚೀನಾದಲ್ಲೊಂದು ಮನಕಲಕುವ ದೃಶ್ಯ

    ಬೀಜಿಂಗ್​: ಹುಟ್ಟುಹಬ್ಬ ಎಂದ ಮೇಲೆ ಸ್ನೇಹಿತರು, ಆಪ್ತರ ಜತೆ ಸೇರಿ ಕೇಕ್​ ಕತ್ತರಿಸಿ, ಅವರಿಗೂ ತಿನ್ನಿಸಿ ತಾನೂ ತಿನ್ನುವುದು ಸಾಮಾನ್ಯ. ಆದರೆ ಕರೊನಾ ಪಿಡುಗಿನ ಸಂದರ್ಭದಲ್ಲಿ ಹಸಿದ ಗ್ರಾಹಕರಿಗೆ ಆಹಾರ ತಲುಪಿಸುವ, ಅನಾರೋಗ್ಯಪೀಡಿತ ಗ್ರಾಹಕರಿಗೆ ಔಷಧಗಳನ್ನು ತಲುಪಿಸುವ ಕಾಯಕದಲ್ಲಿ ನಿಸ್ವಾರ್ಥವಾಗಿ ತೊಡಗಿಕೊಂಡಿರುವವರು ಅನೇಕರು.

    ಚೀನಾದ ವುಹಾನ್​ನಲ್ಲಿ ಒಬ್ಬ ಡೆಲಿವರಿ ಬಾಯ್​ ಕೂಡ ಹೀಗೆಯೇ ತನ್ನ ಹುಟ್ಟುಹಬ್ಬವನ್ನು ಮರೆತು, ಜನರಿಗೆ ಆಹಾರ, ಔಷಧ ತಲುಪಿಸುವ ಕಾಯಕದಲ್ಲಿ ತೊಡಗಿದ್ದ. ಅದು ಯಾವ ಸಂದರ್ಭದಲ್ಲಿ, ಅದು ಯಾವ ಗ್ರಾಹಕರಿಗೆ ಸರಿಯಾದ ಸಮಯದಲ್ಲಿ ಅವರಿಗೆ ಬೇಕಾಗಿದ್ದ ವಸ್ತುವನ್ನು ಈತ ತಲುಪಿಸಿದ್ದನೋ ಗೊತ್ತಿಲ್ಲ. ಆದರೆ, ಆ ವ್ಯಕ್ತಿ ಈತನ ಸಹಾಯವನ್ನು ನೆನಪಿಟ್ಟುಕೊಂಡಿದ್ದ. ಹಾಗೆಯೇ ಈತನ ಹುಟ್ಟಿದ ದಿನವನ್ನು ಗುರುತು ಹಾಕಿಕೊಂಡಿದ್ದ.

    ಸರಿಯಾಗಿ ಆ ಡೆಲಿವರಿ ಬಾಯ್​ನ ಹುಟ್ಟುಹಬ್ಬದ ದಿನದಂದು ತನಗೆ ಪ್ರಿಯವಾದ ಬೇಕರಿಯೊಂದರಲ್ಲಿ ಆ ಹುಡುಗನ ಹೆಸರಿಗೆ ಕೇಕ್​ ಅನ್ನು ಬುಕ್​ ಮಾಡಿ, ಆತ ಬಂದಾಗ ಕೊಡುವಂತೆ ಅಂಗಡಿಯವರಿಗೆ ಸೂಚಿಸಿದ್ದ. ಹಾಗೆಯೇ ಆ ಆರ್ಡರ್​ ಅನ್ನು ಪಿಕ್​ ಮಾಡಲು ಈ ಡೆಲಿವರಿ ಬಾಯ್​ ಅನ್ನೇ ಕಳುಹಿಸುವಂತೆ ಆರ್ಡರ್​ ಪಡೆದುಕೊಂಡ ಕಂಪನಿಯವರಿಗೂ ಮನವಿ ಮಾಡಿಕೊಂಡಿದ್ದ.

    ಅದರಂತೆ ಆರ್ಡರ್​ ಪಿಕ್​ ಮಾಡಲು ಆ ಡೆಲಿವರಿ ಬಾಯ್​ ಬೇಕರಿಗೆ ಹೋದಾಗ, ಈ ಕೇಕ್​ ನಿನಗಾಗಿ ಯಾರೋ ಗ್ರಾಹಕರು ಆರ್ಡರ್​ ಮಾಡಿದ್ದು ಎಂದು ಬೇಕರಿಯವರು ಹೇಳಿದಾಗಲೇ ಆತನಿಗೆ ತನ್ನ ಹುಟ್ಟಿದಹಬ್ಬದ ನೆನಪಾಯಿತು.

    ಆದರೂ ನಂಬದ ಆತ, ಪದೇಪದೆ ಕೇಳಿ ಅದು ತನಗೆ ಯಾರೋ ಆರ್ಡರ್​ ಮಾಡಿದ್ದು ಎಂಬುದನ್ನು ಖಚಿತಪಡಿಸಿಕೊಂಡ. ಬೇಕರಿಯವರು ಹೌದು ಎಂದು ಹೇಳಿದಾಗ, ಆ ಕೇಕ್​ ಅನ್ನು ಪಡೆದ ಆತ ಬೇಕರಿ ಮೆಟ್ಟಿಲ ಮೇಲೆ ಕುಳಿತು ಕೇಕ್​ ಅನ್ನು ತಿನ್ನುತ್ತಾ ಕಣ್ಣೀರು ಸುರಿಸಿದ ದೃಶ್ಯ ಮನಕಲಕುವಂತಿದೆ.

    ರಿಲಯನ್ಸ್​ ಇಂಡಸ್ಟ್ರೀಸ್​ನ ನಿವ್ವಳ ಲಾಭದಲ್ಲಿ ಶೇ.39 ಕುಸಿತ, ಇದಕ್ಕಿದೆ ಬೇರೆಯೇ ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts