More

  ದಲಿತರಿಗಾಗಿ ಶ್ರಮಿಸಿದ ಧೀಮಂತ ನಾಯಕ

  ಮಸ್ಕಿ: ಅಂಬೇಡ್ಕರ್ ವಿಚಾರಧಾರೆಯನ್ನು ಡಿಎಸ್‌ಎಸ್ ಸಂಘಟನೆ ಮೂಲಕ ಶೋಷಿತ ಸಮುದಾಯದ ಜನರಿಗೆ ತಿಳಿಸಿ, ಸಮುದಾಯವನ್ನು ಸಂಘಟಿಸಿದ ಧೀಮಂತ ನಾಯಕ ಪ್ರೊ.ಬಿ.ಕೃಷ್ಣಪ್ಪ. ಅವರು ದೂರದೃಷ್ಟಿ ಉಳ್ಳವರಾಗಿದ್ದರು. ದಲಿತರು ಸೇರಿದಂತೆ ಎಲ್ಲ ವರ್ಗ ಜನರ ಏಳ್ಗೆಗೆ ಶ್ರಮಿಸಿದ್ದಾರೆ. ಸಂಘಟನೆ ಹೋರಾಡಿದರೆ ಶೋಷಣೆಯಿಂದ ಮುಕ್ತವಾಗುತ್ತೇವೆ ಎಂಬ ಕನಸು ಕಂಡಿದ್ದರು ಎಂದು ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ ಹೇಳಿದರು.

  ಪಟ್ಟಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಬಳಿ ಭಾನುವಾರ ಡಿಎಸ್‌ಎಸ್ ಸಂಘಟನೆಯಿಂದ ನಡೆದ ಪ್ರೊ. ಬಿ.ಕೃಷ್ಣಪ್ಪ ಅವರ ಜನ್ಮದಿನ ಆಚರಣೆಯಲ್ಲಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಮೌನೇಶ ಮುರಾರಿ ಮಾತನಾಡಿ, ದಲಿತರ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತ ಬಂದ ಮಹಾನ್ ಚೇತನ ಪ್ರೊ.ಬಿ ಕೃಷ್ಣಪ್ಪ. ದಲಿತರನ್ನು ರಕ್ಷಿಸುವ ಉದ್ದೇಶದಿಂದ ನೌಕರಿಗೆ ರಾಜೀನಾಮೆ ನೀಡಿ ಹೋರಾಡಿದ ಮೇರು ವ್ಯಕ್ತಿಯಾಗಿದ್ದಾರೆ ಎಂದರು.

  ಇದಕ್ಕೂ ಮೊದಲು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಪ್ರೊ.ಬಿ.ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ ಕ್ರಾಂತಿ ಗೀತೆಗಳನ್ನು ಹಾಡಲಾಯಿತು. ಸಾಹಿತಿ ದಾನಪ್ಪ ನಿಲೋಗಲ್ಲ, ಹನುಮಂತಪ್ಪ ವೆಂಕಟಾಪೂರ, ಮಲ್ಲಯ್ಯ ಬುಳ್ಳಾ, ಅಶೋಕ ಮುರಾರಿ, ಕಿರಣ ಮುರಾರಿ, ಕಾಸಿಂ ಮುರಾರಿ, ಬಾಲಸ್ಮಾಮಿ ಜಿನ್ನಾಪೂರ, ಶ್ರೀಕಾಂತ ಮುರಾರಿ, ಜಯಪ್ಪ ಮೆದಕಿನಾಳ, ಬಸವರಾಜ ಡಿ ಉದ್ಬಾಳ, ಮೌನೇಶ ಸುಲ್ತಾನಪುರ, ರಮೇಶ ಉಸ್ಕಿಹಾಳ, ಸಿದ್ದು ಮುರಾರಿ, ರಾಮಣ್ಣ ಉದ್ಬಾಳ, ಜಮದಗ್ನಿ ಗೋನಾಳ ಇತರರಿದ್ದರು.

  See also  ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದ ರೈತರು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts