More

    ಬದುಕಿನಲ್ಲಿ ಜಾನಪದ ಹಾಸುಹೊಕ್ಕು: ಪ್ರೊ. ಬಿ.ಪಿ.ವೀರಭದ್ರಪ್ಪ

    ಹೊಳೆಹೊನ್ನೂರು: ಮಾನವನ ಜೀವನ ಆರಂಭ ಆದಾಗಿನಿಂದ ಅವರ ಬದುಕು, ಸಂಸ್ಕೃತಿಯ ಹೂರಣವಾಗಿ ಜಾನಪದ ಗರಿಗಟ್ಟಿದ್ದು ಬದುಕಿನ ಉದ್ದಕ್ಕೂ ಹಾಸುಹೊಕ್ಕಾಗಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹೇಳಿದರು.

    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಸಾಂಸ್ಕೃತಿಕ ವೇದಿಕೆ, ಕನ್ನಡ ವಿಭಾಗ ಹಾಗೂ ಕನ್ನಡ ಜಾನಪದ ಪರಿಷತ್ ಆಯೋಜಿಸಿದ್ದ ಕನ್ನಡ ಜಾನಪದ ವೈಭವ ಉದ್ಘಾಟಿಸಿ ಮಾತನಾಡಿ, ಇಂದು ನಾವು ಅಭಿವೃದ್ಧಿಯ ಓಟದಲ್ಲಿ ಜಾನಪದ ಸಾರಿದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ನಶಿಸಿ ಹೋಗುತ್ತಿರುವ ಆ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದರು.
    ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಡಾ. ಪಿ.ಭಾರತಿದೇವಿ ಮಾತನಾಡಿ, ನಮ್ಮ ವರ್ತಮಾನದ ಬದುಕನ್ನು ಹಸನುಗೊಳಿಸಬೇಕಾದರೆ ಜಾನಪದದ ಬೇರುಗಳನ್ನು ಅರಿಯುವ ಅಗತ್ಯವಿದೆ ಎಂದರು.
    ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಎಂ.ವೆಂಕಟೇಶ್, ಜನಪದ ಪರಂಪರೆಯ ಮಹತ್ವ ತಿಳಿಸಿ, ಜನಪದ ಹಾಡುಗಳ ಮೂಲಕ ನೆರೆದವರನ್ನು ರಂಜಿಸಿದರು. ಜಿಲ್ಲಾ ಕನ್ನಡ ಜಾನಪದ ಪರಿಷತ್ ಸದಸ್ಯೆ ಕವಿತಾ ಸುಧೀಂದ್ರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಕುರಿತು ತಿಳಿಸಿದರು. ಹೊಳೆನರಸೀಪುರದ ಕಲಾವಿದ ಪಂಪಾಪತಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಜನಪದ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳು ಜನಪದ ನೃತ್ಯ ಹಾಗೂ ಗಾಯನ ನಡೆಸಿಕೊಟ್ಟರು. ಪ್ರಭಾರ ಪ್ರಾಚಾರ್ಯ ಎಂ.ರಾಜಪ್ಪ, ಕನ್ನಡ ಜಾನಪದ ಪರಿಷತ್ ಸದಸ್ಯರಾದ ಪ್ರೊ. ಎನ್.ಕೆ.ಪ್ರಕಾಶ್, ಡಾ. ಡಿ.ವಿ.ಶಿವರುದ್ರಪ್ಪ, ಕಾಲೇಜಿನ ನಿವೃತ್ತ ಅಧೀಕ್ಷಕ ಮಹದೇವ, ಎನ್‌ಎಸ್‌ಎಸ್ ಅಧಿಕಾರಿ ಡಾ. ಎಸ್.ರಾಜುನಾಯ್ಕ, ಡಾ. ಎಚ್.ಎ.ಅಶ್ವಿನಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಚ್.ರುದ್ರಮುನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts