More

    ದುಬೈನಲ್ಲಿ 2026ಕ್ಕೆ ಹಾರುವ ಟ್ಯಾಕ್ಸಿ!

    ದುಬೈ: ದುಬೈನಲ್ಲಿ 2026ರ ವೇಳೆಗೆ ಹಾರುವ ಟ್ಯಾಕ್ಸಿಗಳು ಮತ್ತೆ ಸಕ್ರಿಯವಾಗಿರಲಿವೆ ಎಂದು ರಾಜರ ಆಡಳಿತದ ಸರ್ಕಾರ ಘೋಷಿಸಿದೆ. ಈ ಬಾರಿ ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಜ್​ನ ಜಾಬಿ ಏವಿಯೇಷನ್ ತಯಾರಿಸಿದ ಆರು -ರೋಟರ್ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಗಳು ಹಾರಾಟ ನಡೆಸಲಿವೆ ಎಂದು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕೌಮ್ ಹೇಳಿದ್ದಾರೆ.

    ಆ ಬಗ್ಗೆ ಸ್ಪಷ್ಟ ವಿವರಣೆಯೊಂದಿಗೆ ವಿಡಿಯೋವನ್ನು ಸಹ ಬಿಡುಗಡೆ ಮಾಡಲಾಗಿದೆ. ನಗರದ ಪ್ರಮುಖ ಹೆಗ್ಗುರುತು ಸಮೀಪದಲ್ಲಿ ಏರ್ ಟ್ಯಾಕ್ಸಿಗಳಿಗಾಗಿ ನಾಲ್ಕು ವರ್ಟಿಪೋರ್ಟ್ ಗಳನ್ನು ಬುರ್ಜ್ ಖಲೀಫಾ, ದುಬೈ ಮರೀನಾ, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪಾಮ್ ಜುಮೇರಾ ಬಳಿಯ ಡೌನ್​ಟೌನ್​ನಲ್ಲಿ ತೆರೆಯಲಾಗುತ್ತಿದೆ.

    ಸೋಮವಾರ ವಿಶ್ವ ಸರ್ಕಾರದ ಶೃಂಗಸಭೆಯಲ್ಲಿ ಜಾಬಿ ವಿಮಾನವನ್ನು ಅನಾವರಣ ಮಾಡಲಾಗಿದೆ. 241 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಇದು ಗಂಟೆಗೆ 300 ಕಿ.ಮೀ ವೇಗದಲ್ಲಿ ಸಂಚರಿಸುವಂತೆ, ನಾಲ್ವರು ಪ್ರಯಾಣಿಕರು ಮತ್ತು ಪೈಲಟ್​ಗೆ ಅವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts