More

    12 ಸಾವಿರ ರೂ. ಪಡೆದು ಫೋನ್ ಡೆಲಿವರಿ ಮಾಡದ ಫ್ಲಿಪ್​ಕಾರ್ಟ್​, ಕಟ್ಟಿದ ದಂಡ 42 ಸಾವಿರ ರೂ..!

    ಬೆಂಗಳೂರು: ಇಲ್ಲೊಬ್ಬ ಮಹಿಳೆ, ಫ್ಲಿಪ್​ಕಾರ್ಟ್​ನಲ್ಲಿ ಹೊಸ ಫೋನ್​ಅನ್ನು ಆರ್ಡರ್​ ಮಾಡಿದ್ದಳು. ಫೋನ್​ ಬೇಗ ಕೈ ಸೇರಲಿ ಎಂದು ಮುಂಗಡವಾಗಿ ಪೂರ್ತಿ ಹಣವನ್ನು ಕೂಡ ಕಟ್ಟಿದ್ದಳು. ಆದರೆ ಎಷ್ಟೇ ದಿನ ಕಳೆದರೂ, ಫೊನ್​ ಮಾತ್ರ ಬಂದಿಲ್ಲ. ಇದರಿಂದ ಸಿಟ್ಟಾದ ಮಹಿಳೆ, ನ್ಯಾಯಾಲಯದ ಮೆಟ್ಟಿಲೇರಿದ್ದಳು. ಮುಂಗಡವಾಗಿ ಸಂಪೂರ್ಣ ಪಾವತಿ ಮಾಡಿದ ನಂತರವೂ ಗ್ರಾಹಕರಿಗೆ ಮೊಬೈಲ್ ಫೋನ್‌ನ ಡೆಲಿವರಿ ಮಾಡಲು ವಿಫಲವಾದ ಕಾರಣಕ್ಕಾಗಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಫ್ಲಿಪ್​ಕಾರ್ಟ್​ ಮೇಲೆ ದಂಡ ವಿಧಿಸಲಾಗಿದೆ.

    ಗ್ರಾಹಕರ ಆಯೋಗ, ತನ್ನ ಇತ್ತೀಚಿನ ತೀರ್ಪಿನಲ್ಲಿ, ಇ-ಕಾಮರ್ಸ್ ಕಂಪನಿಗೆ 12,499 ರೂ (ಮೊಬೈಲ್ ಫೋನ್‌ನ ಬೆಲೆ) ಶೇಕಡ 12ರಷ್ಟು ವಾರ್ಷಿಕ ಬಡ್ಡಿ, ಮತ್ತು 20,000 ರೂ. ದಂಡ 10,000 ರೂ. ಕಾನೂನು ಪ್ರಕ್ರಿಯೆ ತಲಗುಲಿದ ವೆಚ್ಚವನ್ನು ಗ್ರಾಹಕರಿಗೆ ನೀಡಲು ಅಧ್ಯಕ್ಷೆ ಎಂ.ಶೋಭಾ, ರೇಣುಕಾದೇವಿ ದೇಶಪಾಂಡೆ ಹಾಗೂ ಇತರ ಸದಸ್ಯರು ತೀರ್ಪು ನೀಡಿದ್ದಾರೆ.

    ಬೆಂಗಳೂರಿನ ರಾಜಾಜಿನಗರದ ನಿವಾಸಿ ದಿವ್ಯಶ್ರೀ, 2022 ರ ಜನವರಿ 15 ರಂದು ಫ್ಲಿಪ್​ಕಾರ್ಟ್​ನಿಂದ 12,499 ರೂ. ಮೌಲ್ಯದ ಮೊಬೈಲ್ ಫೋನ್ ಅನ್ನು ಬುಕ್ ಮಾಡಿರುವುದಾಗಿ ಉಲ್ಲೇಖಿಸಿ ಫ್ಲಿಪ್‌ಕಾರ್ಟ್ ವಿರುದ್ಧ ದೂರು ದಾಖಲಿಸಿದ್ದರು. ದೂರಿನಲ್ಲಿ ಫ್ಲಿಪ್​ಕಾರ್ಟ್​ ಪೂರ್ತಿ ಹಣವನ್ನು ಪಡೆದರೂ ಮೊಬೈಲ್ ಡೆಲಿವರಿ ಮಾಡಿಲ್ಲ ಎಂದು ಆರೋಪಿಸಿದ್ದರು. ನ್ಯಾಯಾಲಯವು ಕಂಪನಿಗೆ ನೋಟಿಸ್ ನೀಡಿದ್ದರೂ, ಫ್ಲಿಪ್‌ಕಾರ್ಟ್ ತನ್ನ ಪ್ರತಿನಿಧಿಯನ್ನು ಆಯೋಗಕ್ಕೆ ಕಳುಹಿಸಿರಲಿಲ್ಲ.

    ಬೆಂಗಳೂರಿನಿಂದ ಗ್ರಾಹಕರ ನ್ಯಾಯಾಲಯ, ಫ್ಲಿಪ್‌ಕಾರ್ಟ್ ಸಂಸ್ಥೆ ಸೇವೆಯ ವಿಷಯದಲ್ಲಿ ‘ಸಂಪೂರ್ಣ ನಿರ್ಲಕ್ಷ್ಯ’ ತೋರಿಸಿದ್ದು ಮಾತ್ರವಲ್ಲದೆ ಅನೈತಿಕ ಆಚರಣೆಗಳನ್ನು ಅನುಸರಿಸಿದೆ ಎಂದು ಹೇಳಿದೆ. ಸಮಯಕ್ಕೆ ಸರಿಯಾಗಿ ಫೋನ್ ತಲುಪಿಸದ ಕಾರಣ ಗ್ರಾಹಕರು ಆರ್ಥಿಕ ನಷ್ಟ ಮತ್ತು ಮಾನಸಿಕ ಆಘಾತವನ್ನು ಅನುಭವಿಸಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts