ಬೆಂಗಳೂರು: ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಹಾಗೂ ಬಡವರು ಫ್ಲ್ಯಾಟ್ ಖರೀದಿಸಲು ಮುದ್ರಾಂಕ ಶುಲ್ಕ ವಿನಾಯಿತಿ ನೀಡುವ ಕರ್ನಾಟಕ ಮುದ್ರಾಂಕ ಶುಲ್ಕ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರ ದೊರೆಯಿತು. ಬಿಜೆಪಿ ಹಾಗೂ ಜೆಡಿಎಸ್‌ನ ಹಲವು ಸದಸ್ಯರು ನೀಡಿದ ಸಲಹೆಗಳನ್ನು ಪರಿಗಣಿಸದೇ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಯಿತು.
ವಿಧೇಯಕ ಮಂಡಿಸಿದ ಕಂದಾಯ ಸಚಿವ ಆರ್. ಅಶೋಕ್, ಬಡವರು ಅಪಾರ್ಟ್‌ಮೆಂಟ್ ಖರೀದಿ ಮಾಡಲು ಮೊದಲ ನೋಂದಣಿಗೆ ಮಾತ್ರ ಇದು ಅನ್ವಯವಾಗಲಿದೆ. 20 ಲಕ್ಷ ರೂ.ವರೆಗಿನ ಮೌಲ್ಯದ ಫ್ಲ್ಯಾಟ್ ಗಳಿಗೆ ಶೇ.5 ರಿಂದ 2ಕ್ಕೆ ಮತ್ತು 20 ರಿಂದ 35 ಲಕ್ಷ ಮೌಲ್ಯದ ಫ್ಲ್ಯಾಟ್ ಖರೀದಿಗೆ ಶೇ. 5ರಿಂದ ಶೇ. 3ಕ್ಕೆ ಮುದ್ರಾಂಕ ಶುಲ್ಕ ಇಳಿಕೆ ಮಾಡಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಕಸ ನೀಡಿದರೆ 500 ರೂ. ದಂಡ : ಮರುಬಳಕೆ ಬುಟ್ಟಿಯಲ್ಲಿ ಕಸ ನೀಡಿ
ಕೈಗಾರಿಕೆ ಉತ್ತೇಜನಕ್ಕೆ ಮುದ್ರಾಂಕ ಶುಲ್ಕ ಕಡಿಮೆ/ ತೆಗೆದುಹಾಕುವುದು, ವಿನಾಯಿತಿ ಕೊಡುವುದು ಹಾಗೂ ಯಾರು ಬಡವರಿದ್ದಾರೆ ಅವರಿಗೆ 20 ಲಕ್ಷ ರೂ.ಗಳಿಂದ 35 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಫ್ಲ್ಯಾಟ್ ಖರೀದಿಗೆ ಶೇ.5 ರಿಂದ ಶೇ. 3ಕ್ಕೆ ಮುದ್ರಾಂಕ ಶುಲ್ಕ ಕಡಿಮೆ ಮಾಡಿದೆ. ಬಡವರು ಕೂಡ ಫ್ಲ್ಯಾಟ್ ತೆಗೆದುಕೊಳ್ಳಬೇಕೆಂಬುದು ಇದರ ಹಿಂದಿನ ಉದ್ದೇಶ. ನಾವು ಕೈಗಾರಿಕೆ ಇಲಾಖೆಯಿಂದ ಬಂದ ಪ್ರಸ್ತಾವನೆಗಳಿಗೆ ಮಾತ್ರ ಮುದ್ರಾಂಕ ಶುಲ್ಕ ವಿನಾಯಿತಿ ಕೊಡುತ್ತೇವೆ ಎಂದರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..