More

    ರೈಲ್ವೆ ನಿಲ್ದಾಣದ ಮೇಲೇ ಫೈವ್​ ಸ್ಟಾರ್ ಹೋಟೆಲ್! ವಿನೂತನ ನಿರ್ಮಾಣಕ್ಕೆ ದೇಶದ ಮೆಚ್ಚುಗೆ

    ಗಾಂಧಿನಗರ: ರೈಲ್ವೆ ನಿಲ್ದಾಣಗಳೆಂದರೆ ನಿಮ್ಮ ಕಲ್ಪನೆಗೆ ಬರುವುದು ರೈಲು ಹಳಿಗಳು, ಫ್ಲೈ ಓವರ್​ಗಳು, ಟಿಕೆಟ್ ಸೆಂಟರ್​, ಇತ್ಯಾದಿಯಷ್ಟೇ. ಆದರೆ ಈ ರೈಲ್ವೆ ನಿಲ್ದಾಣವನ್ನು ನೀವು ನೋಡಿದರೆ, ನಿಮಗೆ ರೈಲ್ವೆ ನಿಲ್ದಾಣದ ಮೇಲಿರುವ ಕಲ್ಪನೆಯೇ ಬದಲಾಗಲಿದೆ. ಏಕೆಂದರೆ ಈ ರೈಲ್ವೆ ನಿಲ್ದಾಣದ ಮೇಲಿರುವುದು ಫೈವ್ ಸ್ಟಾರ್ ಹೋಟೆಲ್!

    ಹೌದು! ಪ್ರಧಾನಿ ಮೋದಿಯವರು ದೇಶದ ರೈಲ್ವೆ ನಿಲ್ದಾಣಗಳನ್ನು ಆಧುನಿಕಗೊಳಿಸುವ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಅದನ್ನು ಗುಜರಾತ್​ನ ಗಾಂಧಿನಗರ ರೈಲ್ವೆ ನಿಲ್ದಾಣ ಮಾಡಿ ತೋರಿಸಿದೆ. ನೋಡಲು ನಮ್ಮ ಬೆಂಗಳೂರಿನ ಮೆಟ್ರೋ ನಿಲ್ದಾಣದಂತೆಯೇ ಕಾಣುವ ಗಾಂಧಿನಗರ ರೈಲ್ವೆ ನಿಲ್ದಾಣದ ಮೇಲೆ ಫೈವ್ ಸ್ಟಾರ್ ಹೋಟೆಲ್​ ಒಂದನ್ನು ನಿರ್ಮಿಸಲಾಗಿದೆ. ಅದಕ್ಕೆ ರೈಲ್ವೆ ನಿಲ್ದಾಣದ ಒಳಗಿನಿಂದಲೇ ಹೋಗುವುದಕ್ಕೂ ಅವಕಾಶ ಮಾಡಿಕೊಡಲಾಗಿದೆ.

    ಆ ಫೈವ್​ ಸ್ಟಾರ್ ಹೋಟೆಲ್​ನಲ್ಲಿ ಪ್ರಾರ್ಥನಾ ಕೋಣೆ, ಗ್ರಂಥಾಲಯ, ಊಟದ ಹಾಲ್ ಸೇರಿ ಅನೇಕ ರೀತಿಯ ವ್ಯವಸ್ಥೆಗಳಿವೆ. ಇನ್ನೂ ವಿಶೇಷವೆಂದರೆ ಆ ಹೋಟೆಲ್​ನಲ್ಲಿ ಬರೋಬ್ಬರಿ 300 ರೂಂಗಳಿವೆಯಂತೆ. ಹಾಗೆಯೇ ಪೂರ್ತಿ ಗಾಂಧಿನಗರದಲ್ಲಿ ಅತ್ಯಂತ ಎತ್ತರದ ಬಿಲ್ಡಿಂಗ್ ಅದಾಗಿದೆಯಂತೆ. ಆ ಹೋಟೆಲ್​ನಲ್ಲಿ ಮೇಲಿನಿಂದ ನೋಡಿದರೆ ಪೂರ್ತಿ ಗಾಂಧಿನಗರವೇ ಕಾಣುತ್ತದೆಯಂತೆ.

    ಕೇವಲ ಹೋಟೆಲ್ ಮಾತ್ರವಲ್ಲದೆ ಆ ರೈಲ್ವೆ ನಿಲ್ದಾಣ ಕೂಡ ಅನೇಕ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ನಿಲ್ದಾಣದ ಬಹುತೇಕ ಭಾಗಗಳಲ್ಲಿ ದೇಶದ ಸಾಂಸ್ಕೃತಿಕತೆ, ವೈಭವವನ್ನು ಸಾರುವ ಚಿತ್ರಗಳನ್ನು ಬಿಡಿಸಲಾಗಿದೆ. ಅಯೋಧ್ಯೆಯ ರಾಮ ಮಂದಿರದ ಚಿತ್ರವನ್ನೂ ಬಿಡಿಸಲಾಗಿದ್ದು, ಪ್ರಯಾಣಿಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. (ಏಜೆನ್ಸೀಸ್)

    ಇತಿಹಾಸದಲ್ಲೇ ಇಂತಹ ಭ್ರಷ್ಟ ಸರ್ಕಾರ ಕಂಡಿಲ್ಲ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆರೋಪ

    ಮತ್ತೆ ಏರಿತು ಸೋಂಕು! ರಾಜ್ಯದಲ್ಲಿಂದು ಪತ್ತೆಯಾದ ಕರೊನಾ ಸೋಂಕಿತರ ಸಂಖ್ಯೆ ಎಷ್ಟು?

    ಕರೊನಾ ಲಸಿಕೆಯ ಎರಡೂ ಡೋಸ್ ಆಯ್ತು, ಇನ್ನೂ ಮಾಸ್ಕ್ ಹಾಕಿಕೊಳ್ಳಬೇಕಾ? ನಿಮ್ಮೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts