More

    ಬಡವರ ಮೇಲೆ ದೌರ್ಜನ್ಯ: ಡೆತ್​ನೋಟ್​ ಬರೆದಿಟ್ಟು ಒಂದೇ ಕುಟುಂಬದ ಐದು ಮಂದಿ ಸಾವಿಗೆ ಶರಣು

    ತುಮಕೂರು: ಒಂದೇ ಕುಟುಂಬದ ಐವರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ.

    ನಗರದ ಸದಾಶಿವನಗರದ ಗರೀಬ್‌ಸಾಬ್‌ (32), ಸುಮಯಾ (30), ಹಜೀರಾ, ಮಹ್ಮದ್‌ ಶುಭಾನ್‌, ಮಹ್ಮದ್‌ ಮುನೀರ್‌ ಮೃತರು. ಮೃತರೆಲ್ಲರುವ ಶಿರಾ ತಾಲೂಕು ಚಿಕ್ಕನಹಳ್ಳಿಯ ನಿವಾಸಿಗಳು ಎನ್ನಲಾಗಿದ್ದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಮಕೂರಿನ ಸದಾಶಿವನಗರದಲ್ಲಿ ವಾಸವಿದ್ದರು.

    ಜೀವನ ನಿರ್ವಹಣೆಗೆ ಕಬಾಬ್‌ ಅಂಗಡಿ ನಡೆಸುತ್ತಿದ್ದ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವುದು ಬಂಧುಗಳಲ್ಲಿ ಆತಂಕಕ್ಕೆ ದೂಡಿದೆ. ಅಕ್ಕಪಕ್ಕದ ಮನೆಯವರು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು, ಇದರಿಂದ ಬೇಸತ್ತು ಕುಟುಂಬದ ಐದೂ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ದೂರಿದ್ದಾರೆ.

    ಕೆಳಗಡೆ ಬಾಡಿಗೆಗೆ ಇದ್ದ ಕಲಂದರ್‌ ಎಂಬುವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅವರೇ ನಮ್ಮ ಸಾವಿಗೆ ಕಾರಣ ಎಂದು ವಿಡಿಯೋ ಚಿತ್ರೀಕರಣ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಆತ್ಮಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು. ನಾವು ಯಾರ ತಂಟೆಗೂ ಹೋಗುತ್ತಿರಲಿಲ್ಲ. ಅಕ್ಕಪಕ್ಕದ ಮನೆಯವರು ದೌರ್ಜನ್ಯ ನೀಡುತ್ತಿದ್ದರು. ಬಡವರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ನಮ್ಮ ಮೃತದೇಹದ ಪರೀಕ್ಷೆ ನಡೆಸಬೇಡಿ ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

    ದೊಡ್ಡಮ್ಮನಿಗೆ ಬರೆದ ಡೆತ್​ನೋಟ್​
    ಮೃತ ಗರೀಬ್ ಸಾಬ್ ತನ್ನ ದೊಡ್ಡಮ್ಮನಿಗೆ ಡೆತ್​ನೋಟ್​ ಬರೆದು ನೋವು ತೋಡಿಕೊಂಡಿದ್ದಾರೆ. ದೊಡ್ಡಮ್ಮನಿಗೆ ನಮಸ್ಕಾರಗಳು. ನಮಗೆ ಸಾಲ ಹೆಚ್ಚಾಗಿದ್ದು, ವ್ಯಾಪಾರದಲ್ಲಿ ಲಾಭ ಇಲ್ಲ. ಕೆಲಸಕ್ಕೆ ಹೋದರೆ ಹಣ ಬರ್ತಿಲ್ಲ. ಹೀಗಾಗಿ ಸಂಸಾರ ಮಾಡೋದು ಕಷ್ಟವಾಗಿದೆ ಮತ್ತು ಊಟ ಮಾಡೋಕು ಕಷ್ಟ ಆಗಿದೆ. ಊರಲ್ಲಿದ್ದಾಗ ಹೆಂಡತಿ ಅಣ್ಣ ಸಾದಿಕ್, ಹೆಂಡತಿಯ ತಂಗಿ ಯಾಸಿನ್ ನಮ್ಮ ಮೇಲೆ ವಿಷ ಕಾರಿದ್ರು. ಅದಕ್ಕೆ ನಾವು ಇಲ್ಲಿಗೆ ಬಂದೆವು. ಇಲ್ಲಿ ಸಾಲ ಕಟ್ಟೋದು ಹೆಚ್ಚಾಗಿದೆ. ಬಾಡಿಗೆ ಮನೆಗೆ ನಲವತ್ತೈದು ಸಾವಿರ ಅಡ್ವಾನ್ಸ್ ಕೊಟ್ಟಿದ್ದೀವಿ. ಮೂರು ತಿಂಗಳ ಬಾಡಿಗೆ ಕೊಡೋದು ಬಾಕಿಯಿದೆ. ಉಳಿದ ಹಣವನ್ನು ನಮ್ಮ ದೊಡ್ಡಮ್ಮನಿಗೆ ವಾಪಾಸ್ ಕೊಡಿ. ಮನೆ ವಸ್ತುಗಳನ್ನು ನೀವು ತಗೋಳಿ. ಹದಿನೈದು ಸಾವಿರ ರೂಪಾಯಿಯನ್ನು ಜರಿನಾ ಆಂಟಿಗೆ ಕೊಡಿ. ನಮ್ಮ ಬೈಕ್​ನ ನಮ್ಮ ಹಿರಿಯಣ್ಣ ಅಜಾಜ್​ಗೆ ಕೊಡಿ. ಅತ್ತಿಗೆ ಪರ್ವೀನ್ ಮತ್ತು ಅಣ್ಣನಿಗೆ ಫೋನ್ ಕೊಡಿ. ದೊಡ್ಡಮ್ಮ ನೀವು ಬೇಕಾದ ವಸ್ತುಗಳನ್ನು ಇಟ್ಟುಕೊಳ್ಳಬಹುದು ಅಥವಾ ಮಾರಿಕೊಳ್ಳಬಹುದು. ತುಂಬಾ ವಿಷಯ ಇದೆ, ಆದರೆ ಇದ್ರಲ್ಲಿ ಬರೆಯೋಕಾಗಲ್ಲ. ಈ ಪತ್ರವನ್ನ ಪೊಲೀಸರಿಗೆ ತೋರಿಸಿ. ಸದಾಶಿವನಗರದ ಮೂರನೇ ಬಿ ಮುಖ್ಯರಸ್ತೆಯಲ್ಲಿರುವ, ನಾವು ವಾಸಿಸುವ ಮನೆಯ ಕೆಳಗಿನವರು ನಮಗೆ ತುಂಬಾ ಕಾಟ ಕೊಟ್ಟಿದ್ದಾರೆ. ನಮಗೆ ಯಾರಾದ್ರೂ ಸಹಾಯ ಮಾಡಿದ್ರೆ ಅವರಿಗೆ ಇಲ್ಲಸಲ್ಲದನ್ನ ಹೇಳ್ತಿದ್ರು. ನಾವು ಅವರು ಹೇಳಿದಂತೆ ಕೇಳಬೇಕಿತ್ತು, ಇಲ್ಲವಾದ್ರೆ ಅವರು ನಮ್ಮ ಜೊತೆ ಜಗಳ ಮಾಡ್ತಿದ್ರು. ಶಬಾನಾ ನಮಗೆ ಏಳು ತಿಂಗಳ ಹಣ ಕೊಟ್ಟಿರಲಿಲ್ಲ. ಹಣ ಕೇಳಿದ್ದಕ್ಕೆ ನಮ್ಮ ಮೇಲೆ ವಿಷ ಕಾರುತ್ತಿದ್ದಳು. ನಮ್ಮ ಸಾವಿಗೆ ನಮ್ಮ ಮನೆಯ ಕೆಳಗಿನ ಖಲಂದರ್, ಅವನ ಮಗಳು ಸಾನಿಯಾ, ಅವನ ಹಿರಿಯ ಮಗ, ಮಹಡಿ ಮನೆಯ ಶಬಾನಾ ಮತ್ತು ಅವಳ ಮಗಳು ಸಾನಿಯಾ ಎಲ್ಲರೂ ಕಾರಣ. ನಮ್ಮ ಸಾವಿಗೆ ಕಾರಣರಾದವರಿಗೆ ಗೃಹ ಮಂತ್ರಿ ಸರ್ ಕಾನೂನು ರೀತಿ ಶಿಕ್ಷೆ ಕೊಡಬೇಕು ಎಂದು ಬೇಡಿಕೊಳ್ತೀನಿ. ಇವರ ಕಾಟಕ್ಕೆ ನಮ್ಮ ಪ್ರಾಣ ಕೊಟ್ಟಿದ್ದೇವೆ. ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಕೈ ಮುಗಿದು ಕೇಳ್ಕೊತ್ತೀವಿ, ನಮ್ಮ ದೇಹವನ್ನ ಪೋಸ್ಟ್ ಮಾರ್ಟಮ್ ಮಾಡಬೇಡಿ. ಇನ್ನೂ ಹಲವು ವಿಷಯಗಳು ಫೋನ್​ನಲ್ಲಿವೆ. ಇಂತಿ ನಿಮ್ಮ ಗರೀಬ್ ಸಾಬ್, ಸುಮಯ್ಯ, ಹಾಜಿರಾ, ಮೊಹಮ್ಮದ್ ಸುಭಾನ್, ಮೊಹಮ್ಮದ್ ಮುನೀರ್ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖಿಸಲಾಗಿದೆ.

    ರಾಜಸ್ಥಾನದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತದಾನ; ಶೇಕಡಾ 74.62ರ ವೋಟಿಂಗ್​ನಿಂದ ಯಾರಿಗೆ ಲಾಭ?

    ಬಿರುಗಾಳಿಗೆ ಹೊಡೆತಕ್ಕೆ ಮುಳುಗಿದ ಹಡಗು; 4 ಭಾರತೀಯರು ಸೇರಿ 13 ಸಿಬ್ಬಂದಿ ನಾಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts