More

    ಮುನ್ನಾರ್​ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 23ಕ್ಕೆ ಏರಿಕೆ; ಅವಶೇಷದಡಿಯಿಂದ 5 ಶವಗಳು ಹೊರಕ್ಕೆ

    ಇಡುಕ್ಕಿ: ಮುನ್ನಾರ್​ ಭೂಕುಸಿತದಲ್ಲಿ ಮಣ್ಣಿನ ಅವಶೇಷದಡಿ ಸಿಲುಕಿಕೊಂಡಿರಬಹುದಾದವರ ನಿಖರವಾದ ಸಂಖ್ಯೆಯ ಕುರಿತು ಗೊಂದಲ ಮುಂದುವರಿದಿದೆ. ಈ ನಡುವೆ ರಕ್ಷಣಾ ಕಾರ್ಯದಲ್ಲಿ ತೊಡಗಿರುವವರು ಮಣ್ಣಿನ ಅವಶೇಷದಡಿಯಿಂದ ಐದು ಶವಗಳನ್ನು ಹೊರತೆಗೆದಿದ್ದು, ದುರಂತದಲ್ಲಿ ಸತ್ತವರ ಸಂಖ್ಯೆ 23ಕ್ಕೆ ಹೆಚ್ಚಳವಾಗಿದೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್​ಡಿಆರ್​ಎಫ್​), ಡಿಫೆನ್ಸ್​ ಸೆಕ್ಯೂರಿಟಿ ಕೋರ್​ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಪೆಟ್ಟಿಮುಡಿ ತಲುಪಿದ್ದು, ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಬಲ ಬಂದಂತಾಗಿದೆ. ಪೆಟ್ಟಿಮುಡಿ ಬೆಟ್ಟದ ಸುತ್ತಮುತ್ತಲ ಪ್ರದೇಶದಲ್ಲಿ ಹಲವು ಸೇತುವೆಗಳು ಮತ್ತು ರಸ್ತೆಗಳು ಕೊಚ್ಚಿ ಹೋಗಿರುವುದರಿಂದ, ಈ ಪ್ರದೇಶವನ್ನು ತಲುಪುವುದೇ ದುಸ್ತರವಾಗಿದೆ.

    ಟೀ ಎಸ್ಟೇಟ್​ ಕಾರ್ಮಿಕರ ಸಾಲು ಮನೆಗಳ ಮೇಲೆ ಮಣ್ಣು ಕುಸಿದ ಪರಿಣಾಮ ಸಾಕಷ್ಟು ಜನರು ಅವಶೇಷದಡಿ ಸಿಲುಕಿರುವ ಶಂಕೆ ಇದೆ. ಇದೀಗ ಹೆಚ್ಚುವರಿ ಜನರು ರಕ್ಷಣಾ ಕಾರ್ಯಾಚರಣೆಗೆ ಲಭ್ಯರಾಗಿರುವ ಕಾರಣ ಮತ್ತು ಈ ಕಾರ್ಯದಲ್ಲಿ ಸ್ಥಳೀಯ ನಿವಾಸಿಗಳು ಕೂಡ ಕೈಜೋಡಿಸುತ್ತಿರುವ ಪರಿಣಾಮ ಮತ್ತಷ್ಟು ಶವಗಳನ್ನು ಅವಶೇಷದಡಿಯಿಂದ ಮೇಲೆತ್ತಲು ಅನುಕೂಲ ಆಗಬಹುದು ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಎಲ್​ಎಸಿ ಬಳಿ ಚೀನಾದ ಉಪಟಳ: ರೋಬೋಟಿಕ್ಸ್​ ಸೇರಿ ಆಧುನಿಕ ಯುದ್ಧ ತಂತ್ರಗಾರಿಕೆ ಕುರಿತು ಭಾರತದ ಚಿಂತನೆ

    ಸಾಲುಮನೆಗಳಲ್ಲಿ ತಮಿಳುನಾಡಿನಿಂದ ಬಂದಿದ್ದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದರು. ದುರಂತ ಸಂಭವಿಸುವ ಕೆಲವೇ ದಿನಗಳ ಮೊದಲು ಇವರೆಲ್ಲರ ಮನೆಗಳಿಗೆ ಸಂಬಂಧಿಕರು ಕೂಡ ಬಂದಿದ್ದರು. ಹಾಗಾಗಿ, ಅವರು ಕೂಡ ಮಣ್ಣಿನ ಅವಶೇಷದಡಿ ಸಿಲುಕಿರುವ ಶಂಕೆ ಇದೆ. ಇದೀಗ ಅಧಿಕಾರಿಗಳು ಸಿದ್ಧಪಡಿಸಿರುವ ಕಾಣೆಯಾಗಿರುವವರ ಪಟ್ಟಿಯಲ್ಲಿ ಅಂಥವರ ಹೆಸರುಗಳು ಕೂಡ ಕಂಡುಬಂದಿರುವುದು ಈ ಶಂಕೆಗೆ ಕಾರಣವಾಗಿದೆ. ಮುನ್ನಾರ್​ ಪಂಚಾಯ್ತಿ ಸದಸ್ಯ ಅನಂತ್​ ಶಿವನ್​ ಅವರ 21 ಜನರ ಅವಿಭಕ್ತ ಕುಟುಂಬ ಕೂಡ ಮಣ್ಣಿನ ಅವಶೇಷದಡಿ ಸಿಲುಕಿಕೊಂಡಿರುವ ಶಂಕೆ ಇದೆ.

    ಪೆಟ್ಟಿಮುಡಿ ಪ್ರದೇಶದಲ್ಲಿ ಹರಿಯುತ್ತಿರುವ ತೊರೆಯಲ್ಲಿ ಕ್ಷಣಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭೂಕುಸಿತದ ಬಳಿಕ ಕೆಸರಿನಲ್ಲಿ ಜಾರಿಕೊಂಡು ಬಂದಿರುವ ಹಲವು ಶವಗಳು ಈ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸುವವರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಆ ತೊರೆಯ 3 ಕಿ.ಮೀ. ವ್ಯಾಪ್ತಿಯವರೆಗೂ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

    ಟ್ರೋಲ್​ಗೆ ಹೆದರಿದ ಆಲಿಯಾ; ಟ್ವಿಟರ್ ಕಮೆಂಟ್​ ಬಾಕ್ಸ್ ಬ್ಲಾಕ್​ ಮಾಡಿ ‘ಸಡಕ್​ 2’ ಬಿಡುಗಡೆ ದಿನಾಂಕ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts