More

    ಸಿಗರೆಟ್​ ಮಾರಾಟ ಲೀಗಲ್​; ಆದ್ರೂ ನಡೆಯುತ್ತೆ ಕಳ್ಳ ಸಾಗಾಣಿಕೆ!

    ಮಿಝೋರಾಮ್: ನಾವು ಚಿನ್ನ, ಹಳೆಯ ಮೂರ್ತಿಗಳು, ಮಾದಕ ವಸ್ತು, ಹೀಗೆ ಅನೇಕ ರೀತಿಯ ವಸ್ತುಗಳ ಕಳ್ಳ ಸಾಗಾಣಿಕೆಯ ಬಗ್ಗೆ ಕೇಳಿದ್ದೇವೆ. ಆದರೆ ಸಿಗರೆಟ್​ನ ಕಳ್ಳ ಸಾಗಾಣಿಕೆ ಬಗ್ಗೆ ಅನೇಕರು ಕೇಳಿರಲಿಕ್ಕಿಲ್ಲ.

    ಮಿಝೋರಾಮ್​ನ ಛಂಫಯ್​ ಎಂಬಲ್ಲಿ ಅಸ್ಸಾಂ ರೈಫಲ್ಸ್​ ಪಡೆ ಸುಮಾರು ಐದು ಕೋಟಿಗೂ ಅಧಿಕ ಮೊತ್ತದ ವಿದೇಶೀ ಸಿಗರೆಟ್​ಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದರು.

    ‘ಅಸ್ಸಾಂ ರೈಫಲ್ಸ್​ನ ಇನ್ಸ್‌ಪೆಕ್ಟರ್ ಜನರಲ್ ನೇತೃತ್ವದಲ್ಲಿ ಸೆರ್ಚಿಪ್ ಬೆಟಾಲಿಯನ್, ಟಿಯು ನದಿಯ ಬಳಿಯ ರುವಾಂಟ್‌ಲಾಂಗ್ ಪ್ರದೇಶದಲ್ಲಿ 5.46 ಕೋಟಿ ರೂಪಾಯಿ ಮೌಲ್ಯದ 420 ವಿದೇಶಿ ಸಿಗರೇಟ್‌ ಪ್ಕ್ಸ್ಯಾಕ್​ ತುಂಬಿದ ಭಾಕ್ಸ್​​ಗಳನ್ನು ವಶಪಡಿಸಿಕೊಂಡಿದೆ’ ಎಂದು ಅಧಿಕೃತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಕಳ್ಳಸಾಗಣೆ ಚಟುವಟಿಕೆಗಳ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಯಶಸ್ಸು ದೊರಕಿದೆ.

    ‘ವಶಪಡಿಸಿಕೊಂಡ ವಸ್ತುಗಳು ಟಿಯು ನದಿ ಬಳಿಯ ರುವಾಂಟ್​ಲಾಂಗ್​ ಪ್ರದೇಶದಲ್ಲಿ ಪತ್ತೆಯಾಗಿವೆ. ಅವುಗಳನ್ನು ಕಸ್ಟಮ್ಸ್​ ಅಧಿಕಾರಿಗಳಿಗೆ ಮುಂದಿನ ವಿಚಾರಣೆಗಾಗಿ ಹಸ್ತಾಂತರಿಸಲಾಗಿದೆ’ ಎಂದು ಅಸ್ಸಾಂ ರೈಫಲ್ಸ್​ನ ಅಧಿಕಾರಿಯೊಬ್ಬರು ತಿಳಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts