More

  ದಾಖಲೆ ಇಲ್ಲದ 5.17 ಲಕ್ಷ ರೂ. ನಗದು ವಶಕ್ಕೆ

  ಹಾವೇರಿ/ ಗುತ್ತಲ: ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 5,17,540 ರೂ.ಯನ್ನು ಹಾವೇರಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಚನ್ನಪ್ಪ ಎಚ್.ಬಿ. ಹಾಗೂ ಶಿಗ್ಗಾಂವಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮಹ್ಮದ್ ಖಿಜರ್ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.
  ಹಾವೇರಿ ತಾಲೂಕಿನ ರವಿ ಕರೂರ ಶಿರಗುಪ್ಪ ಎಂಬಾತ ಸೋಮವಾರ ತಡರಾತ್ರಿ 2,78,000 ರೂ. ನಗದನ್ನು ಯಾವುದೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದರು. ಗುತ್ತಲ ಬಳಿಯ ಕಂಚಾರಗಟ್ಟಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇದೇ ವೇಳೆ ಆಂಧ್ರಪ್ರದೇಶದ ಬೋದೆಪಾಡು ತಾಲೂಕಿನ ಶ್ರೀನಿವಾಸ ವೆಂಕಟರಾಮುಡು ಎಂಬಾತ 53,040 ರೂ.ಯನ್ನು ಕಾರಿನಲ್ಲಿ ಕೊಂಡ್ಯೊತ್ತಿದ್ದಾಗ ವಶಪಡಿಸಿಕೊಳ್ಳಲಾಗಿದೆ.
  ಈ ಸಂದರ್ಭದಲ್ಲಿ ಗುತ್ತಲ ಹೋಬಳಿಯ ಉಪ ತಹಶೀಲ್ದಾರ, ರಾಜಸ್ವ ನಿರೀಕ್ಷಕರು, ಎಸ್.ಎಸ್.ಟಿ. ತಂಡ ಕಾರ್ಯಾಚರಣೆ ಮಾಡಿ ದಾಖಲೆ ಇಲ್ಲದ ಹಣ ವಶಪಡಿಸಿಕೊಂಡಿದೆ.
  ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಯಾವುದೇ ವ್ಯಕ್ತಿ 50 ಸಾವಿರ ರೂ.ಗಿಂತ ಹೆಚ್ಚು ನಗದನ್ನು ಸೂಕ್ತ ದಾಖಲೆಗಳಿಲ್ಲದೆ ತೆಗೆದುಕೊಂಡು ಹೋಗುವಂತಿಲ್ಲ ಎನ್ನುತ್ತಾರೆ ಅಧಿಕಾರಿಗಳು
  ತಡಸ ಚೆಕ್‌ಪೋಸ್ಟ್‌ನಲ್ಲಿ ನಗದು ವಶ :
  ಶಿಗ್ಗಾಂವಿ ತಾಲೂಕು ತಡಸ ಚೆಕ್‌ಪೋಸ್ಟ್‌ನಲ್ಲಿ ಮಂಗಳವಾರ ದಾಖಲೆ ಇಲ್ಲದೆ ನಗದು ಸಾಗಿಸುತ್ತಿದ್ದ ವ್ಯಕ್ತಿಯಿಂದ ಅಧಿಕಾರಿಗಳು 1,86,500 ರೂ. ವಶಪಡಿಸಿಕೊಂಡಿದ್ದಾರೆ. ರಘುರಾಂ ಶೆಟ್ಟಿ ಎಂಬ ವ್ಯಕ್ತಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುವಾಗ ತಪಾಸಣೆ ವೇಳೆ ಹಣ ಪತ್ತೆಯಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts