More

    ಗೋಶಾಲೆಗೆ ಮಾರ್ಟಿನ್ ಧನಸಹಾಯ: ಮೊದಲ ಬಾರಿಗೆ ಪೇಯ್ಡ್​​ ಪ್ರೀಮಿಯರ್ ಮೂಲಕ ಟೀಸರ್ ಬಿಡುಗಡೆ

    ಬೆಂಗಳೂರು: ಧ್ರುವ ಸರ್ಜಾ ನಾಯಕನಾಗಿರುವ, ಎ.ಪಿ. ಅರ್ಜುನ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್. ಇದೇ 23ರಂದು ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಆದರೆ, ಪೇಯ್್ಡ ಪ್ರೀಮಿಯರ್ ಮೂಲಕ ವೀರೇಶ್ ಥಿಯೇಟರ್​ನಲ್ಲಿ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

    ಆನ್​ಲೈನ್ ಮೂಲಕ ಟಿಕೆಟ್ ಮಾರಾಟ ಮಾಡಿ, ಅದರಿಂದ ಬರುವ ಹಣವನ್ನು ಗೋಶಾಲೆಗೆ ನೀಡಲು ಚಿತ್ರತಂಡ ಆಲೋಚಿಸಿದೆ. ಧ್ರುವ ಸರ್ಜಾ, ಮೊದಲ ಬಾರಿಗೆ ಪೇಯ್್ಡ ಪ್ರೀಮಿಯರ್ ಮೂಲಕ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ಥಿಯೇಟರ್​ನಲ್ಲಿ ಟೀಸರ್ ನೋಡಿದರೆ, ಆ ಅನುಭವವೇ ಬೇರೆ. ಒಂದು ಸಾವಿರ ಜನರಿಗೆ ಒಂದು ಶೋ ಅಂತ ಪ್ಲಾ್ಯನ್ ಮಾಡಿದ್ದೇವೆ. ಹೆಚ್ಚು ಜನ ಬಂದರೆ ಹೆಚ್ಚುವರಿ ಶೋಗಳನ್ನು ಆಯೋಜಿಸಲು ರೆಡಿ ಇದ್ದೇವೆ. 23ರಂದು ಟೀಸರ್ ಬಿಡುಗಡೆಯಾದ ಬಳಿಕ ನಾವು ಸಿನಿಮಾ ಬಗ್ಗೆ ಹೆಚ್ಚು ಮಾತನಾಡಲು ವಿಷಯವಿರುತ್ತದೆ, ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

    ನಿರ್ದೇಶಕ ಎ.ಪಿ.ಅರ್ಜುನ್, ವೀರೇಶ್ ಥಿಯೇಟರ್​ನಲ್ಲಿ ಮಾತ್ರ ಟೀಸರ್ ಬಿಡುಗಡೆ ಮಾಡಲಿದ್ದೇವೆ. 100 ರೂ. ಬಾಲ್ಕನಿ, ಸೆಕೆಂಡ್ ಕ್ಲಾಸ್​ಗೆ 80 ರೂ. ಟಿಕೆಟ್ ದರ ನಿಗದಿ ಮಾಡಿದ್ದೇವೆ. ಧ್ರುವ ಸರ್ಜಾ ಕೂಡ ಥಿಯೇಟರ್​ನಲ್ಲಿ ಅಭಿಮಾನಿಗಳ ಜತೆ ಕುಳಿತು ಟೀಸರ್ ನೋಡಲಿದ್ದಾರೆ, ಎಂದರು. ನಿರ್ವಪಕ ಉದಯ್ ಮೆಹ್ತಾ, ಹಣಕ್ಕಾಗಿ ಪೇಯ್್ಡ ಪ್ರೀಮಿಯರ್ ಮಾಡುತ್ತಿಲ್ಲ. ಗೋಶಾಲೆಗೆ ಸಂಪೂರ್ಣ ಹಣ ನೀಡಲಿದ್ದೇವೆ, ಎಂದರು.

    ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!

    ತಮ್ಮದೇ ಮೂತ್ರ ಕುಡಿದು ಜೀವ ಉಳಿಸಿಕೊಂಡ ಸಹೋದರರು; ಭೂಕಂಪದ ಅವಶೇಷಗಳಡಿ 1 ವಾರ ಜೀವನ್ಮರಣ ಹೋರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts