More

    ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!

    ನವದೆಹಲಿ: ‘ನೀವು ಇಂದು ಕೆಲಸಕ್ಕೆ ತಡವಾಗಿ ಬಂದಿದ್ದೀರಿ, ನಾಳೆಯಿಂದ ಸರಿಯಾದ ಸಮಯಕ್ಕೇ ಬರಬೇಕು’ ಎಂದು ಯಾವುದಾದರೂ ಕಂಪನಿಯಲ್ಲಿ ಎಚ್ಚರಿಕೆ ನೀಡಿದರೆ ಅದು ಹೊಸದೇನಲ್ಲ. ಆದರೆ ಇಲ್ಲೊಂದು ಕಂಪನಿ ತುಂಬಾ ವಿಚಿತ್ರ ಎನ್ನುವಂತಿದೆ.

    ಏಕೆಂದರೆ ಈ ಕಂಪನಿ ತಡವಾಗಿ ಮನೆಗೆ ಹೋಗದಂತೆ ಎಚ್ಚರಿಕೆ ನೀಡುತ್ತಿದೆ. ಅರ್ಥಾತ್, ಕೆಲಸದ ಅವಧಿ ಮುಗಿಯಲು ಇನ್ನೇನು ಹತ್ತು ನಿಮಿಷ ಇದೆ ಎನ್ನುವಾಗಲೇ ಉದ್ಯೋಗಿಗಳಿಗೆ ಎಚ್ಚರಿಕೆ ನೀಡುವ ಈ ಕಂಪನಿ, ಕೆಲಸದ ಅವಧಿಗಿಂತ ಹೆಚ್ಚಿನ ಸಮಯ ಕಚೇರಿಯಲ್ಲಿ ಇರದಂತೆ ನೋಡಿಕೊಳ್ಳುತ್ತಿದೆ.

    ಮಾತ್ರವಲ್ಲ, ಈ ಕಂಪನಿ ತನ್ನ ಉದ್ಯೋಗಿಗಳಿಗೆ ಕೆಲಸದ ಅವಧಿಗೆ ಹೊರತಾದ ಸಮಯದಲ್ಲಿ ಇ-ಮೇಲ್​ ಕಳಿಸುವುದಿಲ್ಲ ಹಾಗೂ ಕರೆ ಕೂಡ ಮಾಡುವುದಿಲ್ಲ. ಇದನ್ನೆಲ್ಲ ನಂಬುವುದು ಕಷ್ಟವೆನಿಸಿದರೂ ನಿಜವೇ. ತಮ್ಮ ಕಚೇರಿಯಲ್ಲಿ ಇಂಥ ವಾತಾವರಣ ಇದೆ ಎಂದು ಅಲ್ಲಿನ ಉದ್ಯೋಗಿಯೊಬ್ಬರು ಈ ಮಾಹಿತಿ ಹಂಚಿಕೊಂಡಿದ್ದಾರೆ.

    ಮಧ್ಯಪ್ರದೇಶದ ಸಾಫ್ಟ್​​ಗ್ರಿಡ್ ಕಂಪ್ಯೂಟರ್ಸ್​ ಎಂಬ ಕಂಪನಿಯಲ್ಲಿ ಈ ವಿಶೇಷವಾದ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿನ ಹ್ಯೂಮನ್ ರಿಸೋರ್ಸ್​ ಸ್ಪೆಷಲಿಸ್ಟ್​ ತನ್ವಿ ಖಂಡೇಲ್​ವಾಲ್ ಎಂಬಾಕೆ ಈ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉದ್ಯೋಗಿಗಳ ಕೆಲಸ ಹಾಗೂ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿಕೊಂಡು ಸಂತೋಷ ಹಂಚಿಕೊಂಡಿದ್ದಾರೆ.

    ಕೋವಿಶೀಲ್ಡ್ ಕೊಡಬಾರದಿತ್ತು, ಭಾರತದಲ್ಲಿನ್ನು ವ್ಯಾಕ್ಸಿನ್​ ಅನಗತ್ಯ; ಲಸಿಕೆ ಅಡ್ಡಪರಿಣಾಮಗಳ ಕುರಿತು ದನಿ ಎತ್ತಿದ ಡಾಕ್ಟರ್​

    ತಮ್ಮದೇ ಮೂತ್ರ ಕುಡಿದು ಜೀವ ಉಳಿಸಿಕೊಂಡ ಸಹೋದರರು; ಭೂಕಂಪದ ಅವಶೇಷಗಳಡಿ 1 ವಾರ ಜೀವನ್ಮರಣ ಹೋರಾಟ

    ಕೋವಿಡ್​ ತಡೆಯುವಲ್ಲಿ ಮಾಸ್ಕ್​ ನಿಜಕ್ಕೂ ಪರಿಣಾಮ ಬೀರಿದೆಯಾ?: ಇಲ್ಲಿದೆ ಅಧ್ಯಯನವೊಂದರ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts