More

    ಕೋವಿಡ್​ ತಡೆಯುವಲ್ಲಿ ಮಾಸ್ಕ್​ ನಿಜಕ್ಕೂ ಪರಿಣಾಮ ಬೀರಿದೆಯಾ?: ಇಲ್ಲಿದೆ ಅಧ್ಯಯನವೊಂದರ ಮಾಹಿತಿ

    ನವದೆಹಲಿ: ಕೋವಿಡ್​-19 ಸಾಂಕ್ರಾಮಿಕ ಅತಿಯಾಗಿದ್ದ ಸಂದರ್ಭದಲ್ಲಿ ಮಾಸ್ಕ್​ ಧರಿಸುವುದು, ಸ್ಯಾನಿಟೈಸೇಷನ್​, ಫಿಸಿಕಲ್​ ಡಿಸ್ಟೆನ್ಸ್​ ಸೋಂಕು ಹರಡುವುದನ್ನು ತಡೆಯಲು ಇರುವ ಪ್ರಮುಖ ಮಾರ್ಗ ಎಂದೇ ಹೇಳಲಾಗಿತ್ತು. ಮಾತ್ರವಲ್ಲ, ಆ ಬಳಿಕವೂ ನಂತರದ ಅಲೆಗಳಲ್ಲಿ, ಮತ್ತೆ ಕೋವಿಡ್​ ಹೆಚ್ಚಳ ಎಂಬ ಆತಂಕದ ಸಂದರ್ಭದಲ್ಲೂ ಇದನ್ನು ಪುನರುಚ್ಚರಿಸಲಾಗುತ್ತಿತ್ತು.

    ಆದರೆ ಕೋವಿಡ್ ಸಂದರ್ಭದಲ್ಲಿ ಮಾಸ್ಕ್​ ವಹಿಸಿದ ಪಾತ್ರವೆಷ್ಟು ಎಂಬ ಬಗ್ಗೆ ಅಧ್ಯಯನ ನಡೆದಿದ್ದು, ಆ ಕುರಿತ ಒಂದಷ್ಟು ಮಾಹಿತಿ ಹೊರಬಿದ್ದಿದೆ. ಯುಕೆ ಮೂಲದ ಕಾಖ್ರೇನ್ (Cochrane)​ ಈ ಅಧ್ಯಯನ ನಡೆಸಿದೆ. ಕಾಖ್ರೇನ್​ನ ಅಧ್ಯಯನದ ಅಂಶಗಳನ್ನು ‘ಗೋಲ್ಡ್​ ಸ್ಟ್ಯಾಂಡರ್ಡ್​ ಆಫ್​ ಎವಿಡೆನ್ಸ್​ ಬೇಸ್ಡ್​ ಮೆಡಿಸಿನ್​’ ಎಂದು ಪರಿಗಣಿಸಲಾಗುತ್ತಿದೆ ಎಂದು ಅಲ್ಲಿನ ಆನ್​​ಲೈನ್​ ಮಾಧ್ಯಮವೊಂದು ಬಣ್ಣಿಸಿದೆ.

    ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಯುವಲ್ಲಿ ಮಾಸ್ಕ್​, ವೈಯಕ್ತಿಕ ಅಂತರ ಮುಂತಾದ ಭೌತಿಕ ಕ್ರಮಗಳು ಎಷ್ಟರಮಟ್ಟಿಗೆ ಪರಿಣಾಮ ಬೀರಿವೆ ಎಂಬುದರ ಬಗ್ಗೆ ಕಾಖ್ರೇನ್​ ಅಧ್ಯಯನ ಮಾಡಿದೆ. ಕೋವಿಡ್ ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಬಹುಶಃ ಮಾಸ್ಕ್​ ಏನೂ ಪರಿಣಾಮ ಬೀರಲ್ಲ ಅಥವಾ ಅತಿಕಡಿಮೆ ವ್ಯತ್ಯಾಸ ಉಂಟುಮಾಡುತ್ತದೆ ಎಂಬುದಾಗಿ ಈ ಅಧ್ಯಯನದಲ್ಲಿ ನಿರ್ಣಯಿಸಲಾಗಿದೆ.

    ಮಾತ್ರವಲ್ಲ, ನಿಯಮಿತ ಸೇವೆಯಲ್ಲಿ ಇರುವ ಆರೋಗ್ಯ ಕಾರ್ಯಕರ್ತರಲ್ಲೂ ಮೆಡಿಕಲ್​/ಸರ್ಜಿಕಲ್​ ಇಲ್ಲವೇ ಎನ್​95 ಮಾಸ್ಕ್​​ಗಳ ಬೀರಿದ ಪರಿಣಾಮಗಳ ಬಗ್ಗೆ ಖಚಿತ ವ್ಯತ್ಯಾಸ ತಿಳಿದುಬಂದಿಲ್ಲ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಅದಾಗ್ಯೂ ಮಾಸ್ಕ್​​ ಏನೇನೂ ಪರಿಣಾಮಕಾರಿ ಅಲ್ಲ ಎಂಬುದು ಈ ಅಧ್ಯಯನದ ಅರ್ಥವಲ್ಲ. ಆದರೆ ಇದುವರೆಗಿನ ಅಧ್ಯಯನದ ಪ್ರಕಾರ ಮಾಸ್ಕ್​ ಸೋಂಕು ವ್ಯಾಪಿಸುವುದನ್ನು ತಡೆಯುವುದಿಲ್ಲ ಎಂಬುದಾಗಿದೆ ಎಂದು ಅಧ್ಯಯನ ತಿಳಿಸಿದೆ.

    ಕೋವಿಶೀಲ್ಡ್ ಕೊಡಬಾರದಿತ್ತು, ಭಾರತದಲ್ಲಿನ್ನು ವ್ಯಾಕ್ಸಿನ್​ ಅನಗತ್ಯ; ಲಸಿಕೆ ಅಡ್ಡಪರಿಣಾಮಗಳ ಕುರಿತು ದನಿ ಎತ್ತಿದ ಡಾಕ್ಟರ್​

    ಹಾಡಹಗಲೇ ಶಿಕ್ಷಕಿಯ ಕತ್ತು ಕೊಯ್ದು ಕೊಲೆ!; 12 ವರ್ಷದ ಪುತ್ರಿ ತಬ್ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts