More

    ಸರ್ಕಾರಿ ಜಾಗದ ಸಮೀಕ್ಷೆಗೆ ತೆರಳಿದ ಪಾಲಿಕೆ ಅಧಿಕಾರಿಗಳನ್ನು ನಿಂದಿಸಿದ ಬಿಜೆಪಿ ಜಿಲ್ಲಾ ವಕ್ತಾರ

    ವಿಜಯಪುರ: ಸರ್ಕಾರಿ ಜಾಗದ ಸಮೀಕ್ಷೆ ಮಾಡಲು ಹೋಗಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಬಿಜೆಪಿ ಮುಖಂಡ ಕಿರಿಕ್‌ ಮಾಡಿಕೊಂಡಿದ್ದಾರೆ.

    ಜಿಲ್ಲಾ ವಕ್ತಾರ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಪರಸ್ಪರ ವಾಗ್ವಾದ ನಡೆಸಿ ಜಗಳ ಆಡುವಾಗ ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ. ಇದರಿಂದ ಪಾಲಿಕೆ ಸಿಬ್ಬಂದಿ ಹಾಗೂ ಸುರೇಶ ಬಿರಾದಾರ ಮಧ್ಯೆ ಪರಸ್ಪರ ಗಲಾಟೆ ನಡೆದಿದೆ.

    ಆದದ್ದೇನು?
    ಸುರೇಶ ಬಿರಾದಾರ ಒಡೆತನದ ಶಾಂತಿನಿಕೇತನ ಶಾಲೆ ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದೆ ಎಂದು ಸಾರ್ವಜನಿಕರೊಬ್ಬರು ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಮಹಾನಗರ ಪಾಲಿಕೆಯ ಸಿಬ್ಬಂದಿ ಮಂಗಳವಾರ ಸಮೀಕ್ಷೆ ನಡೆಸಲು ಹೋಗಿದ್ದಾರೆ. ಇದಲ್ಲದೇ ತಡೆಗೋಡೆ ತೆರವಿಗೆ ಪಾಲಿಕೆ ಸಿಬ್ಬಂದಿ ಮುಂದಾಗಿದ್ದರಿಂದ ಸುರೇಶ ಬಿರಾದಾರ ಸಿಟ್ಟಾಗಿದ್ದು, ನೋಟಿಸ್‌ ಕೇಳಿದ್ದಾರೆ. ಆದರೆ, ಅತಿಕ್ರಮಣಕ್ಕೆ ಯಾವುದೇ ನೋಟಿಸ್‌ ನೀಡಲು ಬರಲ್ಲ ಹೀಗಾಗಿ ತೆರವುಗೊಳಿಸಬಹುದು ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದಾಗಿ ಪರಸ್ಪರ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿತ್ತು.

    ಸ್ಥಳದಲ್ಲಿದ್ದ ಎಪಿಎಂಸಿ ಪೊಲೀಸ್​ ಠಾಣಾ ಸಿಬ್ಬಂದಿ ಕೂಡಲೇ ಪರಿಸ್ಥಿತಿ ತಿಳಿಗೊಳಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಸಾರ್ವಜನಿಕರ ದೂರು ಆಧರಿಸಿ ಸಿಬ್ಬಂದಿ ಸರ್ವೆಗೆ ಹೋದಾಗ ಈ ಘಟನೆ ನಡೆದಿದೆ. ಸರ್ಕಾರಿ ಜಾಗ ಅತಿಕ್ರಮಣವಾಗಿದ್ದರೆ ಯಾವುದೇ ನೋಟಿಸ್‌ ನೀಡದೇ ತೆರವು ಮಾಡಬಹುದಾಗಿದೆ. ಅದರೂ ನೋಟಿಸ್‌ ನೀಡಲು ಸಿದ್ಧತೆ ನಡೆದಿದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts