More

    4 ಗಂಟೆ ಕಳೆಯುವಷ್ಟರಲ್ಲಿ ಆ ರೈತನಾದ ಕೋಟ್ಯಧಿಪತಿ – ಯಾವ ಜಾಕ್​ಪಾಟ್​ ಹೊಡೀತು?

    ಚಂಡೀಗಢ: ಲಾಟರಿ ಕೆಲವರಿಗೆ ಅದೃಷ್ಟ ತಂದರೆ, ಹಲವರಿಗೆ ನಿರಾಸೆ ಉಂಟುಮಾಡುತ್ತದೆ. ಅದೃಷ್ಟವಂತರ ಸಾಲಿಗೆ ಪಂಜಾಬ್‌ನ ಹೋಶಿಯಾರ್‌ಪುರದ ರೈತ ಶೀತಲ್ ಸಿಂಗ್ ಸೇರುತ್ತಾರೆ. ಈ ರೈತ ಖರೀದಿಸಿದ್ದ ಲಾಟರಿಯಿಂದ ಬರೋಬ್ಬರಿ 2.5 ಕೋಟಿ ರೂ.ಜಾಕ್ ಪಾಟ್ ಹೊಡೆದಿದ್ದು, ಈ ಹಣವನ್ನು ಕುಟುಂಬದವರೊಂದಿಗೆ ಸಮಾಲೋಚಿಸಿ ಖರ್ಚು ಮಾಡಲು ಮುಂದಾಗಿರುವುದಾಗಿ ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ನೋಟು ಅಮಾನ್ಯೀಕರಣಕ್ಕೆ 7 ವರ್ಷ: ನೋಟು ರದ್ದತಿಯ ಸಪ್ತ ವರ್ಷಗಳ ಪಯಣ ಹೇಗಿತ್ತು?
    ಅನೇಕ ಜನ ತಮ್ಮ ದುಡಿಮೆಯ ಹಣ ಲಾಟರಿ ಖರೀದಿಗೆ ಬಳಸುತ್ತಾರೆ. ಇನ್ನು ಕೆಲವರು ಇದನ್ನೇ ಗೀಳಾಗಿಸಿಕೊಂಡು ಲಾಟರಿ ಟಿಕೆಟ್‌ ಖರೀದಿಗೆ ಮನೆ, ಆಸ್ತಿ ಸೇರಿದಂತೆ ಸರ್ವಸ್ವವನ್ನೂ ಕಳೆದುಕೊಳ್ಳುತ್ತಾರೆ. ಯಾರೋ ಲಕ್ಷಕ್ಕೊಬ್ಬರು ಅದೃಷ್ಟವಂತರಾಗುತ್ತಾರೆ. ಅಂತಹವರಲ್ಲಿ ರೈತ ಶೀತಲ್ ಸಿಂಗ್ ಒಬ್ಬರು.

    ಶೀತಲ್ ಸಿಂಗ್ ಗೆ ಇಬ್ಬರು ಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿದೆ. ಅವರು ತಮ್ಮ ಕುಟುಂಬದ ಸದಸ್ಯರೊಬ್ಬರಿಗೆ ಔಷಧಿ ಖರೀದಿಸಲು ಫಾರ್ಮಸಿಗೆ ಹೋಗಿದ್ದರು. ಆಗ ಅಂಗಡಿಗೆ ಹೋಗಿ ಲಾಟರಿ ಟಿಕೆಟ್ ಖರೀದಿಸಿದರು. ಆ ಬಳಿಕ ಔಷಧಿ ಖರೀದಿಸಿ ಮನೆಗೆ ಮರಳಿದ್ದರು.

    ಇದಾದ ನಾಲ್ಕು ಗಂಟೆ ನಂತರ, ಲಾಟರಿ ಅಂಗಡಿ ಮಾಲೀಕರಿಂದ ಫೋನ್ ಕರೆ ಬಂದಿತ್ತು. ನೀವು 2.5 ಕೋಟಿ ರೂ.ಲಾಟರಿ ಗೆದ್ದಿದ್ದೀರಿ ಎಂದು ತಿಳಿಸಿದ್ದರು. ಇದನ್ನು ಕೇಳಿ ಸಿಂಗ್​ ಸ್ವಲ್ಪಹೊತ್ತು ದಂಗಾಗಿ ಹೋದರು. ಬಳಿಕ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸಂತಸ ಹಂಚಿಕೊಂಡರು.

    ಕಳೆದ 15 ವರ್ಷದಿಂದ ಲಾಟರಿ ಟಿಕೆಟ್​ ಮಾರಾಟದ ವ್ಯಾಪಾರ ಮಾಡುತ್ತಿದ್ದು, ಮೂರನೇ ಬಾರಿಗೆ ಗ್ರಾಹಕರು ಕೋಟಿಗಟ್ಟಲೆ ಗೆದ್ದಿದ್ದಾರೆ ಎಂದು ಲಾಟರಿ ಅಂಗಡಿಯ ಮಾಲೀಕರು ತಿಳಿಸಿದ್ದಾರೆ.

    ಪ್ಲಾಸ್ಟಿಕ್​ಗೆ ಪರ್ಯಾಯ ಸಸ್ಯಜನ್ಯ ಪಿಎಲ್​ಎ ಚೀಲ: ಪರಿಸರಸ್ನೇಹಿ ಕ್ಯಾರಿಬ್ಯಾಗ್; ಡಿಆರ್​ಡಿಒದಿಂದ ಅಭಿವೃದ್ಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts