More

    ಮಧ್ಯರಾತ್ರಿ ಮನೆಯೊಳಗೆ ನುಗ್ಗಿದ ಕಾರಿನಿಂದ ಗಾಡ ನಿದ್ರೆಯಲ್ಲಿದ್ದ ಕುಟುಂಬದ ಸ್ಥಿತಿ ಏನಾಯ್ತು?

    ಫರಿದಾಬಾದ್​(ಹರಿಯಾಣ): ವೇಗವಾಗಿ ಬಂದ ಕಾರೊಂದು ಮನೆಯೊಂದಕ್ಕೆ ಅಪ್ಪಳಿಸಿರುವ ಘಟನೆ ಶುಕ್ರವಾರ ರಾತ್ರಿ ಫರೀದಾಬಾದ್​ನ 8ನೇ ವಲಯದಲ್ಲಿ ನಡೆದಿದೆ.

    ಕಾರಿಯ ಡಿಕ್ಕಿಯ ರಭಸಕ್ಕೆ ಮನೆಯ ಗೋಡೆ ಕುಸಿದಿದ್ದು, ಮನೆಯ ಸಾಮಾಗ್ರಿಯೆಲ್ಲ ಚೆಲ್ಲಾಪಿಲ್ಲಿಯಾಗಿದೆ. ಅದೃಷ್ಟವಶಾತ್​ ಮನೆಯವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: VIDEO| ಲಾಕ್​ಡೌನ್​ ಉಲ್ಲಂಘಿಸಿದವನಿಗೆ ಡ್ಯಾನ್ಸ್​ ಮಾಡಲು ಹೇಳಿ ಎಡವಟ್ಟು ಮಾಡ್ಕೊಂಡ ಪೊಲೀಸರು!

    ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಹಿಮಾನ್ಶು ಕಥುರಿಯಾ ಮಾತನಾಡಿ, ಶುಕ್ರವಾರ ತಡರಾತ್ರಿ 1:30ರ ಸಮಯದಲ್ಲಿ ಸ್ಪೋಟದ ರೀತಿಯ ಶಬ್ದ ಕೇಳಿ ದಿಢೀರನೆ ಎಚ್ಚರಗೊಂಡೆವು. ಬಳಿಕ ಭಯಭೀತಿಗೊಂಡು ನಮ್ಮ ರಕ್ಷಣೆಗಾಗಿ ಮನೆಯಿಂದ ಹೊರಗೆ ಓಡಿದೆವು. ಮನೆಯ ಒಳಗೆ ಅವಶೇಷಗಳು ಬಿದ್ದಿದ್ದವು. ಇಟ್ಟಿಗೆ, ಸಿಮೆಂಟ್​ ಮತ್ತು ಒಡೆದ ಗಾಜು ಬೆಡ್​ ರೂಮಿಗೂ ಹಾರಿ ಹೋಗಿತ್ತು. ಕಾರು ಏನಾದರೂ ಬೆಡ್​ ರೂಮ್​ನ ಹಿಂದಿನ ಬಾಗಿಲನ್ನು ಡಿಕ್ಕಿ ಹೊಡೆದಿದ್ದರೆ, ನಾವು ಸಾಯುವ ಸಾಧ್ಯತೆ ಇತ್ತು ಎಂದು ತಿಳಿಸಿದ್ದಾರೆ.‘

    ಹಿತ್ತಲಿನಲ್ಲಿರುವ ಗೋಡೆಯನ್ನು ಕಾರು ಗುದ್ದಿಕೊಂಡು ಬಂದಿದೆ. ಇದರಿಂದ ಏರ್​ ಕಂಡೀಷನ್​, ವಾಷಿಂಗ್​ ಮೆಸಿನ್​​ ಮತ್ತು ಎರಡು ಸ್ಕೂಟರ್​ಗೆ ಹಾನಿಯಾಗಿದೆ. ಅಲ್ಲದೆ, ಮನೆಯ ಕಿಟಕಿ ಮತ್ತು ಬಾಗಿಲಗಳು ಸಹ ಮುರಿದಿದೆ ಎಂದು ಹಿಮಾನ್ಶು ಕಥುರಿಯಾ ದೂರಿದ್ದಾರೆ.

    ಟೊಯಾಟಾ ಅಲ್ತಿಸ್​ ಕಾರಿನ ಮಾಲೀಕ ಸಣ್ಣಪುಟ್ಟ ಗಾಯಗಳನ್ನು ಮಾತ್ರ ಹೊಂದಿದ್ದಾರೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಅಲ್ಲಿಗೆ ಬಂದ ಪೊಲೀಸರು ಕಾರಿನ ಮಾಲೀಕನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತ ಕುಟುಂಬದ ಪ್ರಕಾರ ಚಾಲಕ ಪಾನಮತ್ತ ಸ್ಥಿತಿಯಲ್ಲಿದ್ದ ಎಂದಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಕರೆದೊಯ್ದಿದ್ದಾರೆ.

    ಇದನ್ನೂ ಓದಿ: ವಿದ್ಯುತ್ ಬಿಲ್ ನೀಡಲು ತೆರಳಿದ ಮನೆ ಮಾಲೀಕರು ನವ ದಂಪತಿಯ ಸ್ಥಿತಿ ಕಂಡು ಕಂಗಾಲಾಗಿದ್ದೇಕೆ?

    ಕಾರಿನ ಡಿಕ್ಕಿಯ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಸಹ ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. (ಏಜೆನ್ಸೀಸ್​)

    ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts