More

    ರೀಲ್ ಧೋನಿ ಮತ್ತು ರಿಯಲ್​ ಧೋನಿಯನ್ನು ಅಭಿಮಾನಿಗಳು ಹೇಗೆಲ್ಲ ನೆನಪಿಸಿಕೊಳ್ಳುತ್ತಿದ್ದಾರೆ ನೋಡಿ…

    2020 ನಿಜಕ್ಕೂ ಅಚ್ಚರಿಯ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಕರೊನಾ ಅನ್ನೋ ಮಹಾಮಾರಿ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದರೆ, ಭಾರತೀಯ ಚಿತ್ರರಂಗದ ಘಟಾನುಘಟಿಗಳು ಅಸುನೀಗಿದ್ದಾರೆ. ಅದರಲ್ಲೂ ಬಾಲಿವುಡ್​ ನಟ ಸುಶಾಂತ್​ ಆತ್ಮಹತ್ಯೆಗೆ ಶರಣಾಗಿ ಎರಡು ತಿಂಗಳ ಮೇಲಾಯಿತು. ಅವರ ಸಾವಿನ ತನಿಖೆ ಇನ್ನೂ ಚಾಲ್ತಿಯಲ್ಲಿದೆ. ರೀಲ್​ ಧೋನಿಯನ್ನು ಕಳೆದುಕೊಂಡಿದ್ದ ಅಭಿಮಾನಿಗಳು, ರಿಯಲ್​ ಧೋನಿ ನಿರ್ಧಾರಕ್ಕೂ ಕೊಂಚ ಬೇಸರಿಸಿಕೊಂಡಿದ್ದಾರೆ. ಬ್ಲೂ ಜೆರ್ಸಿಯಲ್ಲಿ ಇನ್ನು ಮುಂದೆ ಧೋನಿ ಕಾಣಿಸುವುದಿಲ್ಲ ಎಂಬುದನ್ನು ಧೋನಿ ಅಧಿಕೃತ ಮಾಡುತ್ತಿದ್ದಂತೆ, ಇಡೀ ಕ್ರಿಕೆಟ್​ ಲೋಕ ಒಂದು ಕ್ಷಣ ಸ್ತಬ್ಧವಾಗಿತ್ತು. ಇತ್ತ ಸೋಷಿಯಲ್​ ಮೀಡಿಯಾದಲ್ಲಿ ಧೋನಿಯ ಸಾಧನೆಯ ನೆನಪುಗಳು ಹರಿದಾಡ ತೊಡಗಿದವು.

    ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಧೋನಿ ಕುರಿತು ಪತ್ನಿ ಸಾಕ್ಷಿಯಿಂದ ಭಾವುಕ ಸಂದೇಶ!

    ಎಂ ಎಸ್​ ಧೋನಿ; ದಿ ಅನ್​ಟೋಲ್ಡ್ ಸ್ಟೋರಿ ಸಿನಿಮಾದ ದೃಶ್ಯವೊಂದನ್ನು ಶೇರ್ ಮಾಡಿಕೊಂಡ ಅಭಿಮಾನಿಯೊಬ್ಬ, ಇನ್ನು ಮುಂದೆ ರೀಲ್​ ಧೋನಿ ಮತ್ತು ರಿಯಲ್​ ಧೋನಿಯನ್ನು ಬ್ಲೂ ಜೆರ್ಸಿಯಲ್ಲಿ ನೋಡಲು ಆಗುವುದಿಲ್ಲ. ಇನ್ನೋರ್ವ ಅಭಿಮಾನಿ, ಜೂನ್​ 14ರಂದು ರೀಲ್​ ಧೋನಿ ಶಾಶ್ವತವಾಗಿ ಗುಡ್​ಬೈ ಹೇಳಿ ಹೊರಟ, ಇದೀಗ ಆಗಸ್ಟ್ 15ಕ್ಕೆ ರಿಯಲ್​ ಧೋನಿ ಅಂತಾರಾಷ್ಟ್ರಿಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ. ಈ ಇಬ್ಬರ ಕಾಲಾವಧಿ ಮಾತ್ರ ಸದಾ ನೆನಪಿನಲ್ಲಿ ಉಳಿಯುವಂಥದ್ದು ಎಂದಿದ್ದಾರೆ. ಹೀಗೆ ಸಾವಿರಾರು ಮಂದಿ ಬಗೆಬಗೆ ರೀತಿಯಲ್ಲಿ ಈ ಇಬ್ಬರು ಧೋನಿಯನ್ನು ನೆನಪು ಮಾಡಿಕೊಂಡಿದ್ದಾರೆ. ಆ ನೆನಪುಗಳು ಝಲಕ್​ ಇಲ್ಲಿದೆ.

    ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಿ ಎಲ್ಲರನ್ನು ಚಕಿತಗೊಳಿಸಿದ ಧೋನಿಯ 5 ದೃಢ ನಿರ್ಧಾರಗಳಿವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts