More

  ವಾಸವಿ ಮಾತಾ ಜಯಂತಿ ಸಂಭ್ರಮ

  ಬೀದರ್: ನಗರದಲ್ಲಿ ವಾಸವಿ ಕನ್ಯಕಾ ಪರಮೇಶ್ವರಿ ಜಯಂತಿಯನ್ನು ಶ್ರದ್ಧೆ, ಭಕ್ತಿಯೊಂದಿಗೆ ಆಚರಿಸಲಾಯಿತು. ಅಲಂಕೃತ ಸಾರೋಟಿನಲ್ಲಿ ವಾಸವಿ ಮಾತಾ ಭಾವಚಿತ್ರ ಇರಿಸಿ ಭವ್ಯ ಶೋಭಾಯಾತ್ರೆ ನಡೆಸಲಾಯಿತು.
  ಚೌಬಾರ ಹತ್ತಿರದ ಶ್ರೀ ಪಾಂಡುರಂಗ (ವಾಸವಿ) ಮಂದಿರದಿಂದ ಶುರುವಾದ ಮೆರವಣಿಗೆ ಚೌಬಾರ, ವಿನಾಯಕ ವೃತ್ತ, ಕ್ರಾಂತಿ ಗಣೇಶ, ಡಾ.ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತದ ಮೂಲಕ ಮತ್ತೆ ಪಾಂಡುರಂಗ ಮಂದಿರಕ್ಕೆ ತೆರಳಿ ಕೊನೆಗೊಂಡಿತು.
  ಸಮಾಜದ ಮುಖಂಡರು ಸೇರಿ ನೂರಾರು ಜನ ಪಾಲ್ಗೊಂಡಿದ್ದರು. ಮಹಿಳೆಯರು ಕುಂಭ-ಕಳಸ ಹೊತ್ತು ಮೆರವಣಿಗೆಗೆ ಕಳೆ ತಂದುಕೊಟ್ಟರು. ಕೋಲಾಟ, ಭಜನೆ ಗಮನ ಸೆಳೆಯಿತು. ಡಿಜೆ ಸೌಂಡ್ನಲ್ಲಿ ಮೊಳಗಿದ ಭಕ್ತಿ ಗೀತೆಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು. ನಂತರ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
  ಆರ್ಯ ವೈಶ್ಯ ಸಂಘದ ಅಧ್ಯಕ್ಷ ಡಿ.ವಿ. ಸಿಂದೋಲ್, ಉಪಾಧ್ಯಕ್ಷ ದಿಗಂಬರ ಪೋಲಾ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೋಲಾ, ಕಾರ್ಯದರ್ಶಿಗಳಾದ ಚಂದ್ರಶೇಖರ ಗಾದಾ, ವೆಂಕಟೇಶ ಗಾದಾ, ಖಜಾಂಚಿ ಸುನೀಲ ವಂಗೆಪಲ್ಲಿ ಇತರರಿದ್ದರು. ಇದಕ್ಕೂ ಮುನ್ನ ಬೆಳಗ್ಗೆ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ ಜರುಗಿದವು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts