

ಉತ್ತರಕನ್ನಡ: ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತದೆ. ಮತ್ತೊಮ್ಮೆ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಜೆಡಿಎಸ್ ನಾಯಕರು ಈಗಾಗಲೇ ಹೇಳಿಕೊಂಡಿದ್ದಾರೆ. ಅಲ್ಲದೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಕೂಡ ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗಬೇಕೆಂದು ಬಯಸಿದ್ದಾರೆ.
ಇದೀಗ ಅಭಿಮಾನಿಯೊಬ್ಬ ಸಮುದ್ರಳಾದಲ್ಲಿ ಫೋಟೋ ಪ್ರದರ್ಶಿಸಿ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗಬೇಕು ಎಂದು ಹೇಳಿದ್ದಾನೆ. ಸ್ಕೂಬಾ ಡೈವಿಂಗ್ ಮಾಡಿರುವ ಯುವಕ ಈ ವೇಳೆ ಎಚ್ಡಿಕೆ ಫೋಟೋ ಪ್ರದರ್ಶಿಸಿ, ಗಮನ ಸೆಳೆದಿದ್ದಾನೆ.
ಎಚ್ಡಿ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂಬ ಕನಸು ಹೊಂದಿರುವ ಯುವಕ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ಸಮೀಪದ ನೇತ್ರಾಣಿ ನಡುಗಡ್ಡೆಯಲ್ಲಿ ಸ್ಕೂಬಾ ಡೈವಿಂಗ್ ಮಾಡಿ, ಫೋಟೋ ಪ್ರದರ್ಶಿಸಿದ್ದಾನೆ. ಸದ್ಯ ಯುವಕ ಸಮುದ್ರ ಆಳಕ್ಕೆ ತೆರಳಿ ಎಚ್ಡಿಕೆ ಮತ್ತೆ ಸಿಎಂ ಆಗಲಿ ಎಂದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.