More

    ವಾಟ್ಸ್​ಆ್ಯಪ್​ನಲ್ಲಿ ಬಂದ ಮೆಸೇಜ್​ನಂತೆಯೇ ನಡೆಯುತ್ತಿರುವ ಘಟನೆಗಳು! ಭಯದಿಂದ ವಿದ್ಯುತ್​ ಸಂಪರ್ಕ ಕಡಿದುಕೊಂಡ ಕುಟುಂಬ

    ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಮೊಬೈಲ್​ ಹ್ಯಾಕ್​ ಆಗಿ ಅದರಲ್ಲಿ ಬರುವ ಸಂದೇಶದಂತೆಯೇ ನಮ್ಮ ಸುತ್ತಲೂ ಘಟನೆಗಳು ನಡೆಯುವುದನ್ನು ನಾವು ಸಿನಿಮಾಗಳಲ್ಲಿ ಕಂಡಿದ್ದೇವೆ. ಆದರೆ, ಅಂಥದ್ದೇ ಘಟನೆ ಕೊಲ್ಲಂ ಜಿಲ್ಲೆ ಕೊಟ್ಟರಾಕ್ಕರ ಪಟ್ಟಣದ ಸಮೀಪ ಇರುವ ನೆಲ್ಲಿಕುನ್ನಮ್​ನಲ್ಲಿ ನಡೆಯುತ್ತಿದೆ.

    ವಾಟ್ಸ್​ಆ್ಯಪ್​ನಲ್ಲಿ ಬಂದ ಮಸೇಜ್​ನಂತೆಯೇ ಮನೆಯಲ್ಲಿ ಅನೇಕ ಘಟನೆಗಳು ನಡೆಯುತ್ತಿವೆ. ನೆಲ್ಲಿಕುನ್ನಮ್​ ಗ್ರಾಮದ ನಿವಾಸಿ ಹಾಗೂ ಎಲೆಕ್ಟ್ರಿಷಿಯನ್​ ರಾಜನ್​ ಅವರ ಮನೆ ವಿಚಿತ್ರ ವಿದ್ಯಾಮಾನಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಸೈಬರ್​ ಸೆಲ್​ಗೆ ದೂರು ನೀಡಿದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ರಾಜನ್​ ಕುಟುಂಬ ದೂರಿದೆ.

    ಕಳೆದ ಏಳು ತಿಂಗಳಿಂದಲೂ ರಾಜನ್​ ಮಗಳು ಸಾಜಿತಾ, ತನ್ನ ತಾಯಿ ವಿಲಾಸಿನಿ ಮೊಬೈಲ್​ನಲ್ಲಿ ಆಕೆಯ ಗಮನಕ್ಕೆ ಬಾರದಂತೆ ಮಸೇಜ್​ಗಳನ್ನು ಸ್ವೀಕರಿಸುತ್ತಿದ್ದಾಳೆ. ಅಚ್ಚರಿ ಏನೆಂದರೆ, ಮಸೇಜ್​ ಬಂದ ಕೂಡಲೇ ವಿದ್ಯುತ್​ ಸಾಧನಗಳು ಹಾಗೂ ಸ್ವಿಚ್​ ಬೋರ್ಡ್​ಗಳು ಇದ್ದಕ್ಕಿದ್ದಂತೆ ಸುಡಲು ಆರಂಭಿಸುತ್ತವೆ ಎಂದಿದ್ದಾರೆ. ರಾಜನ್​ ಎಲೆಕ್ಟ್ರಿಷಿಯನ್​ ಆಗಿದ್ದರೂ ಸಹ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಇದೀಗ ಎಲ್ಲ ಸ್ವಿಚ್​ ಬೋರ್ಡ್​ಗಳ ಸಂಪರ್ಕ ಕಡಿತಗೊಳಿಸಿದ್ದಾನೆ.

    ಫ್ಯಾನ್​ ಸ್ವಿಚ್​ ಆಫ್​ ಆಗುತ್ತದೆ ಎಂದು ಮಸೇಜ್​ ಬಂದ ಕೂಡಲೇ ಫ್ಯಾನ್​ ಆಫ್​ ಆಗುತ್ತದೆ. ಟ್ಯಾಂಕರ್​ನಿಂದ ನೀರು ಹೊರ ಸುರಿಯುತ್ತದೆ ಎಂದು ಕೂಡಲೇ ಅದೇ ರೀತಿ ಘಟನೆ ನಡೆಯುತ್ತಿದೆ. ಸೈಬರ್​ ಸೆಲ್​ಗೆ ದೂರು ನೀಡಿದೆವು. ಮೊಬೈಲ್​ ಹ್ಯಾಕ್​ ಆಗಿದೆ ಎಂದು ಹೇಳಿದರು. ಆದರೆ, ಇಷ್ಟೆಲ್ಲ ನಡೆಯುತ್ತಿರುವುದಕ್ಕೆ ಪ್ರಮುಖ ಕಾರಣ ಏನೆಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ರಾಜನ್​ ಕುಟುಂಬ್​ ತಿಳಿಸಿದೆ. ಸದ್ಯ ಪೊಲೀಸ್​ ತನಿಖೆ ಚಾಲ್ತಿಯಲ್ಲಿದೆ. (ಏಜೆನ್ಸೀಸ್​)

    ಇಂಡಿಯನ್​​​ ಆರ್ಮಿಯನ್ನು ಮದುವೆಗೆ ಆಹ್ವಾನಿಸಿದ ಕೇರಳ ಜೋಡಿಯನ್ನು ಸೇನಾ ಶಿಬಿರಕ್ಕೆ ಕರೆಸಿ ಸನ್ಮಾನ!

    ಗಾಳಕ್ಕೆ ಬಿದ್ದ 30 ಕೆಜಿ ತೂಕದ ಅಪರೂಪದ ಗೋಲ್ಡ್​ ಫಿಶ್​! ವಿಶ್ವ ದಾಖಲೆ ಬರೆದ ಮೀನುಗಾರ

    ರಾತ್ರೋರಾತ್ರಿ ಮಸಣದಲ್ಲಿ ಸುಂದರ ಯುವತಿಯ ಫೋಟೊ ಇಟ್ಟು ವಾಮಾಚಾರ! ಕಾರಣ ನಿಗೂಢ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts