More

    ಗಾಳಕ್ಕೆ ಬಿದ್ದ 30 ಕೆಜಿ ತೂಕದ ಅಪರೂಪದ ಗೋಲ್ಡ್​ ಫಿಶ್​! ವಿಶ್ವ ದಾಖಲೆ ಬರೆದ ಮೀನುಗಾರ

    ನ್ಯೂಯಾರ್ಕ್​: ವಿಶ್ವದ ಅತಿ ದೊಡ್ಡ ಹಾಗೂ ಅಪರೂಪದ ಗೋಲ್ಡ್​ ಫಿಶ್​ ಹಿಡಿಯುವ ಮೂಲಕ ಬ್ರಿಟೀಷ್​ ಮೀನುಗಾರನೊಬ್ಬ ಎಲ್ಲರನ್ನೂ ಚಕಿತಗೊಳಿಸಿದ್ದಾನೆ. ಕಿತ್ತಳೆ ಬಣ್ಣದ ಈ ದೈತ್ಯ ಮೀನಿಗೆ ಕ್ಯಾರೆಟ್​ ಎಂಬ ಅಡ್ಡ ಹೆಸರಿದೆ. ಸುಮಾರು 30.5 ಕೆಜಿ ತೂಕವಿದ್ದು, ಈ ಹಿಂದೆ ವಿಶ್ವದ ಅತಿದೊಡ್ಡ ಗೋಲ್ಡ್​ ಫಿಶ್​ ಎನಿಸಿಕೊಂಡಿದ್ದ 13.6 ಕೆಜಿ ತೂಕದ ಮೀನಿಗಿಂತಲೂ ಒಂದು ಪಟ್ಟು ಹೆಚ್ಚಿದೆ.

    13.6 ಕೆಜಿ ತೂಕದ ಗೋಲ್ಡ್​ ಫಿಶ್​ ಅನ್ನು 2019ರಲ್ಲಿ ಅಮೆರಿಕದ ಮಿನೆಸೊಟಾದಲ್ಲಿ ಜಾಸನ್​ ಫುಗತೆ ಎಂಬುವರು ಸೆರೆಹಿಡಿದಿದ್ದರು. ಇದೀಗ 42 ವರ್ಷದ ಆ್ಯಂಡೆ ಹ್ಯಾಕೆಟ್​ ಎಂಬುವರು 30.5 ಕೆಜಿ ತೂಕದ ಮೀನನ್ನು ಹಿಡಿದಿದ್ದಾರೆ. ವಿಶ್ವದ ಪ್ರಮುಖ ಕಾರ್ಪ್ ಮೀನುಗಾರಿಕೆಗಳಲ್ಲಿ ಒಂದಾದ ಫ್ರಾನ್ಸ್‌ನ ಶಾಂಪೇನ್‌ನಲ್ಲಿರುವ ಬ್ಲೂವಾಟರ್ ಲೇಕ್ಸ್‌ನಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಈ ಮೀನು ಬಲೆಗೆ ಬಿದ್ದಿದೆ. ಈ ಮೀನು ಚರ್ಮದ ಕಾರ್ಪ್ ಮತ್ತು ಕೋಯಿ ಕಾರ್ಪ್​ನ ಹೈಬ್ರಿಡ್ ಜಾತಿಯ ಮೀನಾಗಿದೆ. ಇದು ಸಾಂಪ್ರದಾಯಿಕವಾಗಿ ಕಿತ್ತಳೆ ಬಣ್ಣದ್ದಾಗಿದೆ.

    ಕ್ಯಾರೆಟ್ ಇರುವುದು ನನಗೆ ಯಾವಾಗಲೂ ತಿಳಿದಿತ್ತು ಆದರೆ, ನಾನು ಅದನ್ನು ಹಿಡಿಯುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ ಎಂದು ಹ್ಯಾಕೆಟ್ ತನ್ನ ಮೀನುಗಾರಿಕೆ ವಿಜಯದ ಸಂತಸವನ್ನು ಹಂಚಿಕೊಂಡಿದ್ದಾರೆ.

    ಮೀನನ್ನು ಬೆನ್ನಟ್ಟಿ ಹಿಡಿಯಲು ಹ್ಯಾಕೆಟ್​ಗೆ ಸುಮಾರು 25 ನಿಮಿಷ ಸಮಯ ತೆಗೆದುಕೊಂಡಿತಂತೆ. ಅದು ನನ್ನು ಗಾಳಕ್ಕೆ ಸಿಲುಕಿ, ಅದರ ಸಮೇತವೇ ಮೇಲಕ್ಕೆ ಮತ್ತು ಕೆಳಕ್ಕೆ ಹೋದಾಗ ಅದು ದೊಡ್ಡ ಮೀನು ಎಂದು ನನಗೆ ತಿಳಿದಿತ್ತು. ಸ್ವಲ್ಪ ಸಮಯದ ಬಳಿಕ ಅದು ಮೇಲಕ್ಕೆ ಬಂದಿತು. ಕಿತ್ತಳೆ ಬಣ್ಣದ್ದಾಗಿರುವುದನ್ನು ನಾನು ನೋಡಿದೆ. ಅದು ಅದ್ಭುತವಾಗಿದೆ ಮತ್ತು ಅದು ಸಿಕ್ಕಿರುವುದು ನನ್ನ ಅದೃಷ್ಟವೇ ಸರಿ ಎಂದು ಹ್ಯಾಕೆಟ್ ನ್ಯೂಯಾರ್ಕ್ ಪೋಸ್ಟ್‌ಗೆ ತಿಳಿಸಿದ್ದಾರೆ.

    ಇದೇ ಸಮಯದಲ್ಲಿ ಕ್ಯಾರೆಟ್​ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬ್ಲೂವಾಟರ್ ಲೇಕ್ಸ್ ಎಂಬ ಫೇಸ್‌ಬುಕ್ ಪುಟವು ನಗುತ್ತಿರುವ ಮೀನುಗಾರನು ತನ್ನ ಕೈಯಲ್ಲಿ ದೈತ್ಯಾಕಾರದ ಗೋಲ್ಡ್​ ಫಿಶ್​ ಹಿಡಿದಿರುವ ಮೂರು ಚಿತ್ರಗಳನ್ನು ಹಂಚಿಕೊಂಡಿದೆ. ಫೋಟೋ ನೋಡಿದ ಅನೇಕ ನೆಟ್ಟಿಗರು ಮೀನುಗಾರನಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.

    ಮೀನಿನೊಂದಿಗೆ ಛಾಯಾಚಿತ್ರಗಳಿಗೆ ಪೋಸ್ ನೀಡಿದ ನಂತರ ಹ್ಯಾಕೆಟ್ ಅದನ್ನು ಸರೋವರದಲ್ಲಿ ಸುರಕ್ಷಿತವಾಗಿ ಬಿಡುಗಡೆ ಮಾಡಿದರು ಮತ್ತು ನಂತರ ಒಂದು ಕಪ್ ಚಹಾದೊಂದಿಗೆ ಅದನ್ನು ಆಚರಿಸಿದ್ದಾರೆ. (ಏಜೆನ್ಸೀಸ್​)

    ನೆಪಕ್ಕಷ್ಟೇ ಮಾಡೆಲಿಂಗ್​! ಕೇರಳದಲ್ಲಿ ನಡೆಯುತ್ತಿರೋ ಕರಾಳ ದಂಧೆ ಬಯಲು, ಈ ಡಿಂಪಲ್​ ಸಾಮಾನ್ಯದವಳಲ್ಲ

    ವಿದ್ಯಾರ್ಥಿನಿಯರ ಅರೆನಗ್ನ ವಿಡಿಯೋ ಚಿತ್ರೀಕರಿಸುತ್ತಿದ್ದ ಸಹ ವಿದ್ಯಾರ್ಥಿ ಅರೆಸ್ಟ್​: ಮೊಬೈಲ್​ನಲ್ಲಿತ್ತು 1200ಕ್ಕೂ ಹೆಚ್ಚು ವಿಡಿಯೋ

    ನಿರ್ಮಾಪಕನ ವಿರುದ್ಧ ರಸ್ತೆಯಲ್ಲೇ ಬೆತ್ತಲೆ ಪ್ರತಿಭಟನೆ ಮಾಡಿದ ನಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts