More

    ಪ್ರಖ್ಯಾತ ಬೆಲ್ಲಿ ಡಾನ್ಸರ್​ಗೆ ಮೂರು ವರ್ಷ ಜೈಲು ಶಿಕ್ಷೆ, ಆಕೆ ಮಾಡಿದ ತಪ್ಪಾದರೂ ಏನು?

    ನವದೆಹಲಿ: ಬೆಲ್ಲಿ ಡಾನ್ಸರ್​ ಎಂದರೆ ಪ್ರಚೋದನಕಾರಿಯಾಗಿ ನೃತ್ಯ ಮಾಡುವವರು ಎಂದೇ ಅರ್ಥ. ಈಜಿಪ್ಟ್​ನ ಪ್ರಖ್ಯಾತ ಬೆಲ್ಲಿ ಡಾನ್ಸರ್​ ಸಾಮಾ ಎಲ್​ ಮಾಸ್ರಿ ಕೂಡ ಇದನ್ನೇ ಮಾಡುತ್ತಿದ್ದರು. ಆದರೂ ಅವರಿಗೆ ಈಜಿಪ್ಟ್​ ಸರ್ಕಾರ ಮೂರು ವರ್ಷ ಜೈಲುಶಿಕ್ಷೆ ವಿಧಿಸಿದೆ. ಜತೆಗೆ 14 ಲಕ್ಷ ರೂಪಾಯಿ ಜುಲ್ಮಾನೆಯನ್ನೂ ವಿಧಿಸಲಾಗಿದೆ.

    ಎಲ್​ ಮಾಸ್ರಿ ಅವರು ಜನಪ್ರಿಯ ಸಾಮಾಜಿಕ ಜಾಲತಾಣ ಟಿಕ್​ಟಾಕ್​ನಲ್ಲಿ ತುಂಬಾ ಕ್ರಿಯಾಶೀಲರಾಗಿದ್ದರು. ಕಳೆದ ಏಪ್ರಿಲ್​ನಲ್ಲಿ ಅವರು ಟಿಕ್​ಟಾಕ್​ ಮೂಲಕ ತಮ್ಮ ಉದ್ರೇಕಕಾರಿ ಬೆಲ್ಲಿ ಡಾನ್ಸ್​ನ ಪಟ್ಟುಗಳನ್ನು ಪ್ರದರ್ಶಿಸುವ ಜತೆಗೆ ಒಂದಷ್ಟು ಲೈಂಗಿಕ ಪ್ರಚೋದನಾಕಾರಿ ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತಿದ್ದದ್ದು ಪತ್ತೆಯಾಗಿತ್ತು.

    ಇದನ್ನೂ ಓದಿ: ತಮಿಳುನಾಡು ತಂದೆ-ಮಗನ ಲಾಕ್​ ಅಪ್​ ಡೆತ್​: ಮತ್ತೊಂದು ಕಿಚ್ಚು ಹೊತ್ತಿಸಿ, ಸಸ್ಪೆಂಡ್ ಆದ ಪೊಲೀಸ್​ ಪೇದೆ

    ಇದನ್ನು ಗಂಭೀರವಾಗಿ ಪರಿಗಣಿಸಿದ ಈಜಿಪ್ಟ್​ ಸರ್ಕಾರ, ಟಿಕ್​ಟಾಕ್​ ಮೂಲಕ ವ್ಯಬಿಚಾರ ಮತ್ತು ಅನೈತಿಕ ಚಟುವಟಿಕೆಗಳಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅವರನ್ನು ಬಂಧಿಸಿತ್ತು.

    ಪ್ರಕರಣದ ವಿಚಾರಣೆ ವೇಳೆ ಹಾಜರುಪಡಿಸಲಾದ ಎಲ್​ ಮಾಸ್ರಿ ಅವರ ಟಿಕ್​ಟಾಕ್​ ವಿಡಿಯೋ ಮತ್ತು ಚಿತ್ರಗಳನ್ನು ನೋಡಿದ ನ್ಯಾಯಾಲಯ ಕೂಡ ಕೌಟುಂಬಿಕ ಮೌಲ್ಯಗಳು ಮತ್ತು ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅಲ್ಲದೆ, ಕಾನೂನು ಮತ್ತು ಸಂವಿಧಾನದ ನಿರ್ಬಂಧದ ಹೊರತಾಗಿಯೂ ವ್ಯಭಿಚಾರ ಮತ್ತು ಅನೈತಿಕ ಚಟುವಟಿಕೆಗೆ ಪ್ರಚೋದನೆ ನೀಡುವ ವಿಡಿಯೋ ಮತ್ತು ಫೋಟೋಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿತು. ಈ ಹಿನ್ನೆಲೆಯಲ್ಲಿ ಅವರಿಗೆ ಮೂರು ವರ್ಷ ಜೈಲುಶಿಕ್ಷೆ ಹಾಗೂ 14 ಲಕ್ಷ ರೂಪಾಯಿ ಜುಲ್ಮಾನೆ ವಿಧಿಸಿತು.

    VIDEO| ವೈರಲ್​ ಆಗ್ತಿದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ರ್ಯಾಂಪ್​ ವಾಕ್​ ವಿಡಿಯೋ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts