More

    ಬೇರೆ ದೇಶದಿಂದ ಬಂದು ಟಿಕ್​ಟಾಕ್​ನಲ್ಲಿ ವಿಡಿಯೋ ಮಾಡಿದ್ದಕ್ಕೇ ಜೈಲು!

    ಕುವೈತ್: ಈಜಿಪ್ಟ್​ನಿಂದ ಕುವೈತ್​ಗೆ ಬಂದು ಟಿಕ್​ಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ವ್ಯಕ್ತಿಯನ್ನು ಕುವೈತ್ ಪೊಲೀಸರು ಬಂದಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆತನ ಪರವಾಗಿ ಅಭಿಯಾನಗಳು ಆರಂಭವಾದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಗಿದೆ.

    ಆ ವ್ಯಕ್ತಿ ಕುವೈತ್​ನ ಹವಾಮಾನದ ಬಗ್ಗೆ ಮಾತನಾಡಿದ್ದ. ಅಲ್ಲಿ ತಾಪಮಾನ ಅತಿ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಪೂರ್ತಿ ಪ್ರದೇಶ ಧೂಳಿನಿಂದ ಆವರಿಸಿಕೊಂಡಿದೆ. ಅದರ ಬಗ್ಗೆಯೇ ವಿಡಿಯೋ ಮಾಡಿದ್ದ ಆತ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾನೆ. ಮುಂದಿರುವವರು ಕಾಣದಂತ ಕೆಟ್ಟ ಹವಾಮಾನ ಇಲ್ಲಿದೆ ಎಂದಿದ್ದ ಆತ ಅಲ್ಲಿನ ಆಡಳಿತವನ್ನೂ ಬೈದಿದ್ದ.

    ಆತನ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಆ ಹಿನ್ನೆಲೆಯಲ್ಲಿ ಕುವೈತ್ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆತನನ್ನು ಜನರು ಬೆಂಬಲಿಸಲು ಆರಂಭಿಸಿದ್ದಾರೆ. ಹಲವಾರು ಮಂದಿ ಅಲ್ಲಿನ ಹವಾಮಾನವನ್ನು ಬೈದು ವಿಡಿಯೋ ಮಾಡಿ, ಅರೆಸ್ಟ್ ಆಗಿದ್ದ ವ್ಯಕ್ತಿಗೆ ಬೆಂಬಲ ಸೂಚಿಸಿದ್ದಾರೆ. ನಂತರ ಆತನನ್ನು ಬಿಡುಗಡೆ ಮಾಡಿ ಈಜಿಪ್ಟ್​ಗೆ ಕಳುಹಿಸಿಕೊಟ್ಟಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)

    ಯಮುನಾ ನದಿಗೆ ಹಾರಿದ ಸೋಶಿಯಲ್ ಮೀಡಿಯಾ ಸ್ಟಾರ್! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆತ್ಮಹತ್ಯೆಯ ದೃಶ್ಯ

    11 ವಯಸ್ಸಿಗೇ ಮಗುವಿಗೆ ಜನ್ಮವಿತ್ತ ಬಾಲಕಿ! ಇದು ಹೇಗಾಗಿದ್ದು ಎಂದು ತಲೆ ಕೆಡಿಸಿಕೊಂಡಿರುವ ಕುಟುಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts