More

    ಹುಟ್ಟುಹಬ್ಬ ಆಚರಿಸಲು ದೇವಸ್ಥಾನಕ್ಕೆ ಬಂದಿಳಿದ ಒಂದೇ ಕುಟುಂಬದ ಮೂವರು ದಾರುಣ ಸಾವು..!

    ತಿರುಪ್ಪೂರ್(ತಮಿಳುನಾಡು): ಒಂದೇ ಕುಟುಂಬದ ಮೂವರು ಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿ ಸಾವಿಗೀಡಾಗಿರುವ ದುರಂತ ಘಟನೆ ತಿರುಪ್ಪೂರ್​ ಜಿಲ್ಲೆಯ ಪಲ್ಲದಮ್​ ಬಳಿ ಮಂಗಳವಾರ ನಡೆದಿದೆ. ಕಾಲುವೆಯು ಪರಂಬಿಕುಲಂ-ಅಲಿಯಾರ್​ ಯೋಜನೆ (ಪಿಎಪಿ) ಅಡಿ ನಿರ್ಮಿಸಲಾಗಿದೆ.

    ಮೃತರನ್ನು ಸೇತುಪತಿ (23), ಪತ್ನಿ ದೇವಿ (18) ಮತ್ತು ದೇವಿ ಸಹೋದರಿ ಶರಣ್ಯಾ (12) ಎಂದು ಗುರುತಿಸಲಾಗಿದೆ. ಶರಣ್ಯಾಳ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಪಿಎಪಿ ಕಾಲುವೆ ಸಮೀಪವಿದ್ದ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದರು. ಈ ವೇಳೆ ಶರಣ್ಯಾ ಕಾಲುವೆಯಲ್ಲಿ ನೀರು ಮುಳುಗಲು ಬಯಸಿ, ಮನೆಯವರನ್ನು ದಡದಲ್ಲಿ ಕಾಯುವಂತೆ ಹೇಳಿ ಹೋಗಿದ್ದಾಳೆ. ಕಾಲುವೆ ಬಳಿ ಹೋಗುತ್ತಿದ್ದಂತೆ ಶರಣ್ಯಾ ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾಳೆ. ತಕ್ಷಣ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಇದನ್ನು ನೋಡಿದ ದೇವಿ ಮತ್ತು ಸೇತುಪತಿ ಸಹ ನೀರಿಗೆ ಜಿಗಿದಿದ್ದಾರೆ. ಆದರೆ,ಅವರೂ ಸಹ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

    ಇದನ್ನೂ ಓದಿ: ಶಾಲೆಗಳನ್ನು ಆರಂಭಿಸುವ ಕುರಿತು ಚಿಂತನೆ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಬಿಗ್​ ಶಾಕ್..!​

    ಕಣ್ಣೆದುರಲ್ಲೇ ಕುಟುಂಬದ ಸದಸ್ಯರು ನೀರಿನಲ್ಲಿ ಕೊಚ್ಚಿ ಹೋಗುವುದ್ದನ್ನು ನೋಡಿದ ದೇವಿ ಅವರ ತಾಯಿ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿದಾಗ ಮಂಗಳವಾರ ಸಂಜೆವರೆಗೂ ಮೃತದೇಹಗಳು ಪತ್ತೆಯಾಗಲಿಲ್ಲ. ಕಾರ್ಯಚರಣೆ ಮುಂದುವರಿಸಿದ ಬಳಿಕ ಮೃತದೇಹಗಳು ಪತ್ತೆಯಾಗಿವೆ.

    ಈ ಬಗ್ಗೆ ಮಾತನಾಡಿರುವ ಪಲ್ಲದಮ್​ ಉಪ ಪೊಲೀಸ್​ ವರಿಷ್ಠಾಧಿಕಾರಿ ಕೆ.ಚಿ ರಾಮಚಂದ್ರನ್​, ಏಳು ಜನರ ರಕ್ಷಣಾ ತಂಡ ಮೂವರ ದೇಹಗಳನ್ನು ಕಾಲುವೆಯಿಂದ ಹೊರತೆಗೆದಿದೆ. ದೇವಿಯ ಮೃತದೇಹ ಬುಧವಾರ ಪತ್ತೆಯಾಯಿತು, ಸೇತುಪತಿ ಮತ್ತು ಶರಣ್ಯಾ ದೇಹ ಗುರುವಾರ ಸಿಕ್ಕಿವೆ. ಮೂವರ ದೇಹಗಳನ್ನು ಶವಪರೀಕ್ಷೆಗಾಗಿ ತಿರುಪ್ಪೂರ್​ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ.

    ಘಟನೆ ಸಂಬಂಧ ಕಾಮನೈಕನ್ಪಾಲಯಂ ಠಾಣಾ ಪೊಲೀಸರು ಸಿಆರ್​ಪಿಸಿ (ಅಸ್ವಾಭಾವಿಕ ಸಾವು) ಸೆಕ್ಸನ್​ 174ರ ಅಡಿಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಪರೀಕ್ಷೆ ಇಲ್ಲದ ಶೈಕ್ಷಣಿಕ ವರ್ಷವಾಗಲಿ ಇದು: ಶಾಲಾರಂಭಕ್ಕೆ ಶಿಫಾರಸು ಮಾಡಿತು ಮಕ್ಕಳ ಹಕ್ಕುಗಳ ಆಯೋಗ

    ಮಾಜಿ ಕಾನ್​ಸ್ಟೆಬಲ್ ಟಿಕೆಟ್, ಮಾಜಿ ಡಿಜಿಪಿಗೆ ಇಲ್ಲ! : ಬಿಜೆಪಿ, ಜೆಡಿಯು ತೊರೆದ ನಾಯಕರಿಗೆ ಎಲ್​ಜೆಪಿ ಗಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts