More

    ಪರೀಕ್ಷೆ ಇಲ್ಲದ ಶೈಕ್ಷಣಿಕ ವರ್ಷವಾಗಲಿ ಇದು: ಶಾಲಾರಂಭಕ್ಕೆ ಶಿಫಾರಸು ಮಾಡಿತು ಮಕ್ಕಳ ಹಕ್ಕುಗಳ ಆಯೋಗ

    ಬೆಂಗಳೂರು: ಶಾಲೆ ಆರಂಭದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿರುವ ಮಧ್ಯೆ ಶಾಲೆ ಆರಂಭಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ಲಭ್ಯವಿರುವ ಸಂಶೋಧನಾ ಮಾಹಿತಿ ಪ್ರಕಾರ ಶಾಲೆಗಳನ್ನು ತೆರೆಯುವುದು ಸಮಸ್ಯೆಯಲ್ಲ. ಏಕೆಂದರೆ, ವಯಸ್ಸಾದವರಿಗೆ ಹಾಗೂ ಬೇರೆ ಕಾಯಿಲೆ ಇತಿಹಾಸ ಹೊಂದಿರುವವರಿಗೆ ಹೋಲಿಸಿದರೆ ಮಕ್ಕಳು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಈ ಅಂಶಗಳ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಆಯೋಗ ನೀಡಿರುವ ಶಿಫಾರಸಿನ ವರದಿಯಲ್ಲಿ ತಿಳಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಶಾಲಾರಂಭ ಸವಾಲಿನ ಕಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆ, ಮಕ್ಕಳ ಅವಶ್ಯಕತೆ, ಶಿಕ್ಷಕರ ಜವಾಬ್ದಾರಿ, ಬಿಸಿಯೂಟ ನಿರ್ವಹಣೆ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ವಿಸõತ ಸಲಹೆಗಳನ್ನು ನೀಡಿದೆ.

    ಇದನ್ನೂ ಓದಿ: ಕುತೂಹಲ ಕೆರಳಿಸಿದ ರಮೇಶ್ ಜಾರಕಿಹೊಳಿ-ದೇವೇಂದ್ರ ಫಡ್ನವೀಸ್ ತುರ್ತು ಭೇಟಿ; ತಿಂಗಳಲ್ಲಿದು 2ನೇ ಬಾರಿ !

    ಶಾಲೆ ಮೊದಲು ಆರಂಭಿಸಿ: ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಪರೀಕ್ಷಾ ರಹಿತ ಕಲಿಕಾ ವರ್ಷವೆಂದು ಘೋಷಿಸಬೇಕೆಂದು ಆಯೋಗ ತಿಳಿಸಿದೆ. ಶಾಲಾವಾರು ಹಾಗೂ ತರಗತಿವಾರು ಕಲಿಕಾ ದಿನಚರಿಯನ್ನು ಡಿಎಸ್​ಇಆರ್​ಟಿ ನಿಗದಿಪಡಿಸಲಿ. 30ಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಸರ್ಕಾರ ಮೊದಲು ಆರಂಭಿಸಲಿ. ಮೊದಲ 15 ದಿನಗಳವರೆಗೆ ಈ ಶಾಲೆಗಳು ಅರ್ಧ ದಿನ ಕಾರ್ಯ ನಿರ್ವಹಿಸಲಿ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕಿರಿಯ ಪ್ರಾಥಮಿಕ ಶಾಲೆಗಳನ್ನು ಕೂಡ ಶೀಘ್ರವಾಗಿ ಆರಂಭಿಸಬೇಕು ಎಂದಿರುವ ಆಯೋಗ, ಹೆಚ್ಚಿನ ಮಕ್ಕಳಿರುವ ಶಾಲೆಗಳನ್ನು ಪಾಳಿ ಪದ್ಧತಿಯಲ್ಲಿ ಆರಂಭಿಸಲಿ. ಶಾಲೆ ತೆರೆದ ಬಳಿಕ ಸಿಗುವ ಅನುಭವ ಹಾಗೂ ಕಲಿಕೆ ಆಧಾರದಲ್ಲಿ ವಿವರವಾದ ಮಾರ್ಗಸೂಚಿಗಳನ್ನು ರೂಪಿಸಬಹುದು ಎಂದು ಸಲಹೆ ನೀಡಿದೆ.

    ಇದನ್ನೂ ಓದಿ: ದೀದಿ ನಾಡಲ್ಲಿ ಭುಗಿಲೆದ್ದ ಘರ್ಷಣೆ; ನಬನ್ನಾ ಚಲೋ ತಡೆದ ಪೊಲೀಸರ ವಿರುದ್ಧ ಬಿಜೆಪಿ ಆಕ್ರೋಶ

    ಪೂರ್ವ ಸಿದ್ಧತೆ ಹೀಗಿರಲಿ
    *ಎಸ್​ಡಿಎಂಸಿ ಜತೆ ಪೂರ್ವಭಾವಿ ಸಭೆ
    * ತರಗತಿ ಹಾಗೂ ಪೀಠೋಪಕರಣಗಳ ಕಡ್ಡಾಯ ಸ್ಯಾನಿಟೈಸೇಷನ್, ಶಾಲಾವರಣದಲ್ಲಿ ಸೋಂಕು ನಿವಾರಣೆಗೊಳಿಸಬೇಕು
    * ನೀರು, ಶೌಚಗೃಹ ಸೇರಿ ಇತರ ಮೂಲಸೌಕರ್ಯಗಳನ್ನು ಒದಗಿಸಬೇಕು ಹಾಗೂ ಅವುಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು
    * ಎಲ್ಲ ಮಕ್ಕಳಿಗೂ ಮಾಸ್ಕ್ ಒದಗಿಸಿ, ವ್ಯಕ್ತಿಗತ ಅಂತ ಕಾಪಾಡಿಕೊಳ್ಳಲಿ.

    ಮಕ್ಕಳ ಅವಶ್ಯಕತೆಗಳು
    * ಬೆಳಗ್ಗೆ ಬಿಸಿಹಾಲು, ಮಧ್ಯಾಹ್ನ ಪೌಷ್ಟಿಕಯುತ ಬಿಸಿಯೂಟ ಪೂರೈಸಿ. ಬಿಸಿನೀರಿನ ವ್ಯವಸ್ಥೆ ಮಾಡಿ.
    *ಉಚಿತ್ ಕೋವಿಡ್ ಎಚ್ಚರಿಕಾ ಸಾಧನಗಳು
    *ರೋಗ ನಿರೋಧಕ ಮಾತ್ರ ಪೂರೈಕೆ
    *ನಿಯಮಿತ ಆರೋಗ್ಯ ತಪಾಸಣೆ ನಡೆಸಲಿ

    ಶಿಕ್ಷಕರ ಜವಾಬ್ದಾರಿಗಳು
    – ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು
    – ಶಾಲೆಗೆ ಬರುವ ಎಲ್ಲ ವ್ಯಕ್ತಿಗಳ ಮಾಹಿತಿ ದಾಖಲಿಸಿ
    – ಬೋಧನೆ ವೇಳೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಿ

    ಬಿಸಿಯೂಟ ನಿರ್ವಹಣೆ
    -ಸಿಬ್ಬಂದಿಯೂ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು
    -ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಿರಬೇಕು
    – ಅಡುಗೆ ಕೋಣೆ ಶ್ವಚ್ಛವಾಗಿರಲಿ
    -ಅಡುಗೆ ಸಾಮಗ್ರಿಯನ್ನು ಸ್ವಚ್ಛವಾಗಿ ತೊಳೆಯಬೇಕು

    ಚುನಾವಣಾ ಪ್ರಚಾರದ ಮೇಲೂ ಕರೋನಾ ಕರಿಛಾಯೆ: ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರ ಸಂಖ್ಯೆ ಕಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts