More

    ‘ನನ್ನ ಮಕ್ಕಳನ್ನ ಈ ವರ್ಷ ಶಾಲೆಗೆ ಕಳುಹಿಸಲ್ಲ’….. ಪಾಲಕರಿಗೆ ಇರುವ ಆಯ್ಕೆಗಳೇನು?

    ಬೆಂಗಳೂರು: ಕಳೆದ ಮೂರು ತಿಂಗಳಿನಿಂದ ನಿಂತೇ ಹೋಗಿದ್ದ ಶೈಕ್ಷಣಿಕ ಚಟುವಟಿಕೆಗಳು ಪುನಾರಂಭವಾಗಿವೆ. ಶಾಲೆ- ಕಾಲೇಜುಗಳಲ್ಲಿ ಎಸ್​ಎಸ್​ಎಲ್​ಸಿ ಹಾಗು ಪಿಯು ಪರೀಕ್ಷೆಗೆ ಸಿದ್ಧತೆ ನಡೆದಿದೆ.

    ಶಾಲೆಗಳ ಪುನರಾರಂಭಕ್ಕೆ ಸರ್ಕಾರ ಉದ್ದೇಶಿತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ, ನಾಲ್ಕರಿಂದ ಏಳನೇ ತರಗತಿಗೆ ಜುಲೈ ಒಂದರಂದು, ಒಂದರಿಂದ ಮೂರನೇ ತರಗತಿಗೆ ಜುಲೈ 15 ಹಾಗೂ ಹೈಸ್ಕೂಲ್​ ತರಗತಿಗಳು ಜುಲೈ 15ಕ್ಕೆ ಶುರುವಾಗಲಿವೆ. ಪೂರ್ವ ಪ್ರಾಥಮಿಕ ತರಗತಿಗಳಿಗೆ ಜುಲೈ 20 ಆರಂಭದ ದಿನಾಂಕವೆಂದು ಪ್ರಸ್ತಾಪಿಸಲಾಗಿದೆ.

    ಆದರೆ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಈಗಲೇ ಶಾಲಾರಂಭಕ್ಕೆ ದಿನಾಂಕ ನೀಡಿರುವುದು ಪಾಲಕರ ಅಸಮಾಧಾನಕ್ಕೂ ಕಾರಣವಾಗಿದೆ. ಶಿಕ್ಷಣಕ್ಕಿಂತ ಮಕ್ಕಳ ಆರೋಗ್ಯ ಮುಖ್ಯ ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ ಎಂದು ಆನ್​ಲೈನ್​ನಲ್ಲಿ ಅಭಿಯಾನ ಸಹಿ ಸಂಗ್ರಹ ನಡೆಯುತ್ತಿದೆ.
    ಇದೆಲ್ಲದರ ನಡುವೆ, ಈ ವರ್ಷ ಮಕ್ಕಳನ್ನು ಶಾಲೆಗೆ ಕಳುಹಿಸೋದಿಲ್ಲ ಎಂದು ಹಠ ಹಿಡಿದು ಕೂತವರು ಇದ್ದಾರೆ. ಹಾಗಿದ್ದರೆ ಇದರಿಂದಾಗುವ ಪರಿಣಾಮಗಳೇನು? ಅದಕ್ಕೆ ಅವಕಾಶವಿದೆಯೇ ಎಂಬುದಕ್ಕೆ ಇಲ್ಲಿದೆ ವಿವರ.

    ಇದನ್ನೂ ಓದಿ; ಕರೊನಾಗೆ ಒಣ ಗಾಳಿಯೇ ಅಸ್ತ್ರ, ಕೋವಿಡ್​ ಕಾಲವಾಗಬಹುದು ಚಳಿಗಾಲ ಎಚ್ಚರ…!

    ಸದ್ಯ ಪೂರ್ವ ಪ್ರಾಥಮಿಕ ಮಕ್ಕಳ ಬಗ್ಗೆ ಹೆಚ್ಚು ನಿಗಾವಹಿಸಲೇಬೇಕು. ನರ್ಸರಿಗಳಲ್ಲಿ ಮಕ್ಕಳು ಆಟೋಟಗಳ ಮೂಲಕವೇ ಕಲಿಯುವುದರಿಂದ ಮನೆಯಲ್ಲೇ ಅವುಗಳನ್ನು ಮಾಡಿಸಬಹುದು. ಇನ್ನು, ಮುಂದಿನ ವರ್ಷ ಮಗುವಿನ ವಯಸ್ಸಿನ ಆಧಾರದ ಮೇಲೆ ಎಲ್​ಕೆಜಿಗೋ ಯುಕೆಜಿಗೋ ಸೇರಿಸಬಹುದು. ನರ್ಸರಿ ಮಕ್ಕಳನ್ನು ಈ ವರ್ಷ ಶಾಲೆಗೆ ಕಳುಹಿಸದಿದ್ದರೆ ಯಾವುದೇ ಚಿಂತೆಯಿಲ್ಲ.

    ಇನ್ನು ಯುಕೆಜಿ ಮುಗಿಸಿರುವ ಮಕ್ಕಳನ್ನು ಒಂದನೇ ತರಗತಿ ಸೇರಿಸದಿದ್ದರೆ ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಷ್ಟದಾಯಕ. ಏಕೆಂದರೆ, ಮಗುವನ್ನು ಮುಂದಿನ ವರ್ಷ ನೇರವಾಗಿ ಎರಡನೇ ತರಗತಿಗೆ ಸೇರಿಸಲು ಕಷ್ಟವಾಗಬಹುದು. ವಯಸ್ಸಿನ ಆಧಾರದಲ್ಲಿ ಖಾಸಗಿ ಶಾಲೆಗಳು ಮಗುವನ್ನು ಸೇರಿಸಿಕೊಳ್ಳಲು ಹಿಂದೇಟು ಹಾಕಬಹುದು. ಆದರೆ, ಮಗುವನ್ನು ಶಾಲೆಯಿಂದ ಹೊರಗುಳಿದ ಮಗುವೆಂದು ಪರಿಗಣಿಸಿ ವಯಸ್ಸಿನ ಆಧಾರದಲ್ಲಿ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿಗೆ ಸೇರಿಸಲು ಅವಕಾಶವಿದೆ.
    2 ಮತ್ತು 3ನೇ ತರಗತಿಯ ಮಕ್ಕಳಿಗೂ ಇದೇ ಅನ್ವಯವಾಗುತ್ತೆ. ಆದರೆ, ನಿಮ್ಮ ಮಗು ಈಗಾಗಲೇ ಕಲಿಯುತ್ತಿರುವ ಶಾಲೆಯ ಆಡಳಿತ ಮಂಡಳಿಯು ಆ್ಯಡ್ಮಿಷನ್​ ಮಾಡಿಸಲು ಒತ್ತಾಯ ಹೇರಬಹುದು. ಮುಂದಿನ ವರ್ಷ ಮುಂದಿನ ತರಗತಿಗೆ ಸೇರಿಸಿಕೊಳ್ಳಲು ಒಪ್ಪದೇ ಇರಬಹುದು.

    ಇದನ್ನೂ ಓದಿ; ವಿಲೀನ ಕಾಲವೂ ಮುಗೀತು… ಶುರುವಾಗಿದೆ ಖಾಸಗೀಕರಣ ಪ್ರಕ್ರಿಯೆ; ಮಾರಾಟಕ್ಕಿವೆ ಮೂರು ಸರ್ಕಾರಿ ಬ್ಯಾಂಕ್​ಗಳು…!

    ಇದರ ಹೊರತಾಗಿ, ಮಕ್ಕಳಿಗೆ ಸಾಂಪ್ರದಾಯಿಕ ಶಿಕ್ಷಣದ ಬದಲು, ಕಲಿಕೆಯೊಂದಿಗೆ ಔಪಚಾರಿಕ ಶಿಕ್ಷಣ ನೀಡುವ ಹಲವು ಶಾಲೆಗಳಿವೆ. ಇಲ್ಲಿ ಮಕ್ಕಳಿಗೆ ಆಸಕ್ತಿರುವ ಕ್ಷೇತ್ರದಲ್ಲಿ ಬೆಳೆಯಲು ಪ್ರೋತ್ಸಾಹಿಸಲಾಗುತ್ತದೆ. ಏಳನೇ ತರಗತಿ, 10ನೇ ತರಗತಿಗೆ ವಿದ್ಯಾರ್ಥಿಯನ್ನು ಖಾಸಗಿ ಅಬ್ಯರ್ಥಿಯಾಗಿ ನೋಂದಣಿ ಮಾಡಲಾಗುತ್ತದೆ. ಇನ್ನುಳಿದ ಯಾವ ತರಗತಿ ಬಗ್ಗೆ ಇಲ್ಲಿ ಚಿಂತೆ ಮಾಡಬೇಕಿಲ್ಲ.

    ಒಂದು ವೇಳೆ ಸರ್ಕಾರವೇ ಪ್ರವೇಶದ ಬಗ್ಗೆ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಿ ನಿಯಮಗಳನ್ನು ರೂಪಿಸಿದ್ದೇ ಆದಲ್ಲಿ, ಯಾವುದು ಅಸಾಧ್ಯವಲ್ಲ. ಇದೇ ತಿಂಗಳು 10ರಿಂದ 12ರವರೆಗೆ ನಿಮ್ಮ ಮಕ್ಕಳ ಶಾಲೆಯಲ್ಲಿ ನಡೆಯಲಿರುವ ಪಾಲಕರ ಸಭೆಗೆ ಹಾಜರಾಗಿ ನಿಮ್ಮ ಅಭಿಪ್ರಾಯಗಳನ್ನು ದಾಖಲಿಸುವುದನ್ನು ಮರೆಯಬೇಡಿ.

    ಕರೊನಾ ದೂರವಿಟ್ಟು ಬೆಂಗಳೂರಿನಿಂದ 2,000 ಕಿ.ಮೀ ಕಾಲ್ನಡಿಗೆಯಲ್ಲಿ ಮನೆ ತಲುಪಿದ, ಹೊಂಚು ಹಾಕಿದ್ದ ವಿಧಿಯನ್ನು ವಂಚಿಸಲಾಗಲಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts