More

    ಕ್ವಾರಂಟೈನ್ ತಪ್ಪಿಸಿಕೊಳ್ಳಲು ನಕಲಿ ವಿಳಾಸ: 54 ಸಾವಿರ ವಿಳಾಸ ಪತ್ತೆಗೆ ಮುಂದಾದ ಸರ್ಕಾರ 

    ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ಲಾಕ್​ಡೌನ್​ನಿಂದ ಹೊರ ರಾಜ್ಯದಲ್ಲೇ ಲಾಕ್ ಆಗಿರುವ ಸಾವಿರಾರು ಮಂದಿ ಕರ್ನಾಟಕಕ್ಕೆ ಮರಳಲು ಹರಸಾಹಸ ಪಡುತ್ತಿದ್ದಾರೆ. ಅನ್ಯರಾಜ್ಯದಿಂದ ಬರುವವರಿಗೆ ಪಾಸ್ ವಿತರಿಸಲು ಸರ್ಕಾರ ಕ್ರಮಕೈಗೊಂಡಿದೆ. ಈ ನಡುವೆ, ಹೊರ ರಾಜ್ಯದಿಂದ ಬರುವವರು 14 ದಿನ ಕ್ವಾರಂಟೈನ್​ಗೆ ಒಳಗಾಗಬೇಕೆಂಬ ಷರತ್ತಿನಿಂದ ತಪ್ಪಿಸಿಕೊಳ್ಳಲು ನಕಲಿ ವಿಳಾಸ ಕೊಡುತ್ತಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಯಾರೆಲ್ಲ ರಾಜ್ಯ ಪ್ರವೇಶಿಸಲು ಅಪೇಕ್ಷಿಸಿ ಕೋರಿಕೆ ಸಲ್ಲಿಸಿದ್ದಾರೋ ಅವರೆಲ್ಲರ ವಿಳಾಸವನ್ನು ಹುಡುಕುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ.

    ಈವರೆಗೆ ಆನ್​ಲೈನ್ ಮೂಲಕ 56,622 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರ ಪೈಕಿ 4,068 ಮಂದಿಗೆ ರಾಜ್ಯ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ 479 ಮಂದಿ ಕೋರಿಕೆಯನ್ನು ಸರ್ಕಾರ ಸ್ಪಷ್ಟವಾಗಿ ತಿರಸ್ಕರಿಸಿದೆ. 45,326 ಅರ್ಜಿಗಳು ಜಿಲ್ಲಾಧಿಕಾರಿಗಳ ಹಂತದಲ್ಲೇ ಪರಿಶೀಲನೆಯಲ್ಲಿದೆ.

    ಪಾಸ್ ಪಡೆದುಕೊಳ್ಳಲು ಸರ್ಕಾರ ಸೇವಾಸಿಂಧು ಆಲ್​ಲೈನ್ ವ್ಯವಸ್ಥೆ ಮಾಡಿದೆ. ಕೋರಿಕೆ ಸಲ್ಲಿಸುವಾಗ ಹೆಸರು, ಮೊಬೈಲ್ ಮತ್ತು ಆಧಾರ್ ಸಂಖ್ಯೆ, ರಾಜ್ಯದಲ್ಲಿರುವ ಮನೆ ವಿಳಾಸ ನಮೂದಿಸುವುದು ಕಡ್ಡಾಯ. ಅನುಮಾನದ ಮೇಲೆ ಕೆಲ ಅರ್ಜಿದಾರರ ವಿಳಾಸ ಪರಿಶೀಲಿಸಿದಾಗ, ನಕಲಿ ಎಂಬುದು ಗೊತ್ತಾಯಿತು. ತಕ್ಷಣವೇ ಜಾಗೃತಗೊಂಡ ಅಧಿಕಾರಿಗಳು, ಎಲ್ಲ ಅರ್ಜಿದಾರರ ಮನೆ ವಿಳಾಸ ತಪಾಸಣೆ ನಡೆಸಿ ಸಂಬಂಧಪಟ್ಟ ಜಿಲ್ಲಾಧಿಕಾರಿ ಅನುಮತಿ ನೀಡಿದರಷ್ಟೇ ಪಾಸ್ ವಿತರಿಸಲು ನಿರ್ಧರಿಸಿದರು. ಹೀಗಾಗಿ ಜಿಲ್ಲಾಡಳಿತಗಳು ಪೊಲೀಸರು ಮತ್ತು ಸ್ಥಳೀಯ ಆಡಳಿತದ ಸಹಾಯದಿಂದ ರಾಜ್ಯ ಪ್ರವೇಶಿಸಲು ಅಪೇಕ್ಷಿಸುವವರ ಮನೆ ತಪಾಸಣೆ ಕಾರ್ಯ ಆರಂಭಿಸಿದೆ.

    ಇದನ್ನೂ ಓದಿ VIDEO: ಲಾಕ್​ಡೌನ್ ನಂತರ ಮುಂದೇನು?: ಆರೆಸ್ಸೆಸ್​ ನೀತಿ ನಿಲುವು ಹೀಗಿದೆ ನೋಡಿ…

    25 ಸಾವಿರ ಅಪೇಕ್ಷಿತರು

    ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬರೋಬ್ಬರಿ 25 ಸಾವಿರ ಮಂದಿ ಬರಲು ಆಪೇಕ್ಷಿಸಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ಒಮ್ಮೆಲೆ ಬರುವವರನ್ನು ಆರೋಗ್ಯ ತಪಾಸಣೆಗೊಳಪಡಿಸುವುದು ಮತ್ತು ಕ್ವಾರಂಟೈನ್ ಮಾಡುವುದು ಹೇಗೆಂಬ ತಲೆನೋವು ಸರ್ಕಾರಕ್ಕೆ ಶುರುವಾಗಿದೆ. ಇದಕ್ಕಾಗಿ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಆರೋಗ್ಯ ಸೇತು ಆಪ್, ಕ್ವಾರಂಟೈನ್ ವಾಚ್, ಆಪ್ತಮಿತ್ರ ಡೌನ್​ಲೋಡ್ ಮಾಡಿಸಿ, ಪ್ರತಿನಿತ್ಯ ನಿಗಾ ಇಡಲು ದೊಡ್ಡ ಸಂಖ್ಯೆಯಲ್ಲಿ ಸಿಬ್ಬಂದಿ ಬೇಕಾಗುತ್ತದೆ. ಹೀಗಾಗಿ ಸರ್ಕಾರ ಕೊಂಚ ಎಚ್ಚರಿಕೆ ವಹಿಸಿ ಹೊರ ರಾಜ್ಯದವರ ಪ್ರವೇಶಕ್ಕೆ ಅನುಮತಿ ನೀಡಲು ತಡಮಾಡಿತು.

    ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ

    ಬೆಂಗಳೂರು: ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ಬರುವವರು ಸೇವಾಸಿಂಧು ಆಪ್​ನಲ್ಲಿ ನೋಂದಾ ಯಿಸಿಕೊಂಡಿರಬೇಕು ಹಾಗೂ ಎರಡು ರಾಜ್ಯದಿಂದ ಪರವಾನಗಿ ಪಡೆದಿರಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು, ಎಡಿಜಿಪಿಗಳು ಹಾಗೂ ಎಲ್ಲ ವಲಯದ ಐಜಿಪಿಗಳೊಂದಿಗೆ ಬುಧವಾರ ವಿಡಿಯೋ ಸಂವಾದ ನಡೆಸಿದ ಬೊಮ್ಮಾಯಿ, ಯಾವುದೇ ಪರವಾನಗಿ ಇಲ್ಲದಿರುವ ಹಾಗೂ ಅನಧಿಕೃತ ವ್ಯಕ್ತಿಗಳಿಂದ ಪಾಸ್ ಪಡೆದು ಬಂದವರನ್ನು ರಾಜ್ಯದೊಳಗೆ ಬಿಡದೆ ನಿಷೇಧಿಸಬೇಕು ಎಂದರು.

    ಎಸ್​ಒಪಿ ರೆಡಿ

    ಹೊರ ರಾಜ್ಯಗಳಿಂದ ರಾಜ್ಯ ಪ್ರವೇಶಿಸುವವರು ಯಾವ ಕ್ರಮ ಅನುಸರಿಸಬೇಕೆಂಬ ಬಗ್ಗೆ ರಾಜ್ಯ ಸರ್ಕಾರ ಸಾಮಾನ್ಯ ಮಾದರಿ ಪದ್ಧತಿಯನ್ನು ತಯಾರು ಮಾಡಿದೆ. ಸೇವಾಸಿಂಧು ಮೂಲಕ ನೋಂದಣಿ ಮಾಡಿಕೊಂಡು ಪಾಸ್ ಪಡೆದವರಿಗಷ್ಟೇ ಪ್ರವೇಶ ರಾಜ್ಯದ ಗಡಿಯಲ್ಲಿ ಪಾಸ್ ಪರಿಶೀಲನೆ, ಅಲ್ಲೇ ಆರೋಗ್ಯ ತಪಾಸಣೆ ಚುನಾವಣೆ ಮಸ್ಟರಿಂಗ್, ಡಿ ಮಸ್ಟರಿಂಗ್ ರೀತಿ ಸರ್ಕಾರಿ ತಂಡ ಕಾರ್ಯನಿರ್ವಹಣೆ ಜಿಲ್ಲಾ ಗಡಿಗಳಲ್ಲಿ ಸಾಕಷ್ಟು ಆರೋಗ್ಯ ಪರಿಶೀಲನೆ ಕೌಂಟರ್ ಓಪನ್ ಸೋಂಕಿತರಿದ್ದರೆ ಆಸ್ಪತ್ರೆಗೆ, ಶಂಕಿತರಿದ್ದರೆ ಸಮೀಪದ ಕ್ವಾರಂಟೈನ್ ಕೇಂದ್ರಕ್ಕೆ ರವಾನೆ ಎಲ್ಲರಿಗೂ ಕೈ ಮೇಲೆ ಸ್ಟಾಂಪ್ ಗ್ರಾಮೀಣ ಭಾಗದವರಾದರೆ, ಸಮೀಪದ ಶಾಲೆಯಲ್ಲಿ ಕ್ವಾರಂಟೈನ್ ವ್ಯವಸ್ಥೆ ನಗರ ಪ್ರದೇಶದವರಾದರೆ, ಮನೆಯಲ್ಲೇ ಕ್ವಾರಂಟೈನ್ 12ನೇ ದಿನ ಎಲ್ಲರಿಗೂ ಕೋವಿಡ್ ಟೆಸ್ಟ್ ಕಡ್ಡಾಯ

    ಚೆಲಿಯಾ ಮುಸ್ಲಿಮರ ಹೋಟೆಲ್‌, ರೆಸ್ಟೋರಂಟ್​ಗಳಿಗೆ ಹಿಂದು ಹೆಸರುಗಳೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts