More

    ಈ ಮೂವರು ಐಪಿಎಸ್​ ಅಧಿಕಾರಿಗಳು ಒಡಹುಟ್ಟಿದವರಾ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಹಿರಂಗ!

    ನವದೆಹಲಿ: ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಐಪಿಎಸ್​ ಅಧಿಕಾರಿಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೂವರು ಸಹ ಒಡಹುಟ್ಟಿದವರೆಂದು ಹೇಳಲಾಗಿದೆ.

    ಇಬ್ಬರು ಸಹೋದರರು ಮತ್ತು ಸಹೋದರಿ ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಹುಡುಗಿ ಹೊರೆಯಲ್ಲ ಎಂಬುದನ್ನು ನಾವೆಲ್ಲರು ಅರ್ಥಮಾಡಿಕೊಳ್ಳಬೇಕೆಂದು ಅಡಿಬರಹ ಬರೆದು ಟ್ವಿಟರ್​ ಬಳಕೆದಾರರೊಬ್ಬರು ಫೋಟೋ ಪೋಸ್ಟ್​ ಮಾಡಿದ್ದಾರೆ. ಇದೀಗ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಈ ಮೂವರು ಐಪಿಎಸ್​ ಅಧಿಕಾರಿಗಳು ಒಡಹುಟ್ಟಿದವರಾ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಹಿರಂಗ!

    ಇನ್ನು ಫೋಟೋ ಕುರಿತು ನ್ಯೂಸ್​ ಮೀಟರ್​ ಫ್ಯಾಕ್ಟ್​​ಚೆಕ್​ ನಡೆಸಿದ್ದು, ಗೂಗಲ್​ ರಿವರ್ಸ್​ ಇಮೇಜ್​ ಸರ್ಚ್​ ಇಂಜಿನ್​ನಲ್ಲಿ ಹುಡುಕಾಡಿದಾಗ ಇದೇ ಫೋಟೋ ಐಪಿಎಸ್​ ಪ್ರೊಬೇಷನರ್ ಪೂಜಾ ವಶಿಷ್ಠ ಹೆಸರಿನ ಇನ್​ಸ್ಟಾಗ್ರಾಂ ಖಾತೆ ಪತ್ತೆಯಾಯಿತು. ಪೂಜಾ ಅವರು ಫೋಟೋ ಪೋಸ್ಟ್​ ಮಾಡಿ ತುಷಾರ್​ ಗುಪ್ತ ಮತ್ತು ಶ್ರುತ್​ ಕಿರ್ತಿ ಸೊಮವಂಶಿ ಟ್ಯಾಗ್ ಮಾಡಿದ್ದಾರೆ. ​

    ಇದನ್ನೂ ಓದಿ: ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ರಫೇಲ್ ರಣಬೇಟೆಗಾರ​ ವಾಯುಪಡೆಗೆ ಅಧಿಕೃತ ಸೇರ್ಪಡೆ!

    ತುಷಾರ್​ ಗುಪ್ತ ಸಹ 2020 ಆಗಸ್ಟ್​​ 22ರಂದು ಇದೇ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಪೂಜಾ ಮತ್ತು ಸೊಮವಂಶಿ ಗೆ ಟ್ಯಾಗ್​ ಮಾಡಿದ್ದಾರೆ. ಆದರೆ, ಮೂವರ ಕೊನೆ ಹೆಸರುಗಳು ಬೇರೆ ಆಗಿರುವುದರಿಂದ ಅವರು ಒಡಹುಟ್ಟಿದವರಲ್ಲ ಎಂಬ ಸಣ್ಣ ಸುಳಿವು ದೊರೆಯುತ್ತದೆ.

    ಇದೇ ವೇಳೆ ನ್ಯೂಸ್​ ಮೀಟರ್​ 2018ರಿಂದ ಇಂಡಿಯನ್​ ಪೊಲೀಸ್​ ಸರ್ವೀಸ್​ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ಸಂಗ್ರಹಿಸಿತು. ಇದರ ಪ್ರಕಾರ ಫೋಟೋದಲ್ಲಿರುವ ಮೂವರು ಸಹ ಬೇರೆ ಬೇರೆ ರಾಜ್ಯದವರೆಂದು ತಿಳಿದುಬಂದಿದೆ. ತುಷಾರ್​ ಪಂಜಾಬಿನವರಾದರೆ, ಪೂಜಾ ಹರಿಯಾಣದವರು ಮತ್ತು ಸೊಮವಂಶಿ ಉತ್ತರ ಪ್ರದೇಶದವರು.

    ಹೀಗಾಗಿ ವೈರಲ್​ ಫೋಟೋದಲ್ಲಿ ಹೇಳಿರುವಂತೆ ಮೂವರು ಒಡಹುಟ್ಟಿದವರಲ್ಲ. ಮೂವರು ಬೇರೆ ರಾಜ್ಯದವರಾಗಿದ್ದು, ಒಂದೇ ಬ್ಯಾಚ್​ನ ಐಪಿಎಸ್​ ಅಧಿಕಾರಿಗಳಾಗಿದ್ದಾರೆ. (ಏಜೆನ್ಸೀಸ್​)

    ಈ ಭಯಾನಕ ಘಟನೆ ಕೇರಳದಲ್ಲಿ ನಡೆಯಿತಾ? ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಬಹಿರಂಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts