More

    ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ರಫೇಲ್ ರಣಬೇಟೆಗಾರ​ ವಾಯುಪಡೆಗೆ ಅಧಿಕೃತ ಸೇರ್ಪಡೆ!

    ನವದೆಹಲಿ: ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ಯುದ್ಧ ಚತುರ ರಫೇಲ್​ ರಣಬೇಟೆಗಾರ ಗುರುವಾರ ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿತು.

    ಹರಿಯಾಣ ಅಂಬಾಲಾ ವಾಯುನೆಲೆಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್, ಫ್ರಾನ್ಸ್​ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಹಾಗೂ ಸೇನೆಯ ಹಿರಿಯ ಅಧಿಕಾರಿಗಳು ಭಾಗಿಯಾದರು. ರಫೇಲ್​ ಸೇರ್ಪಡೆಗೂ ಮುನ್ನ ಯುದ್ಧ ವಿಮಾನಗಳಿಗೆ ಸಾಂಪ್ರದಾಯಿಕ ಸರ್ವಧರ್ಮ ಪೂಜೆಯನ್ನು ನೆರವೇರಿಸಲಾಯಿತು. ಬಳಿಕ ರಫೇಲ್​ ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನವನ್ನು ಸಮಾರಂಭದಲ್ಲಿ ಭಾಗಿಯಾಗಿದ್ದ ಗಣ್ಯರು ಕಣ್ತುಂಬಿಕೊಂಡರು.

    ರಾಜನಾಥ್​ ಸಿಂಗ್​ ಅವರು ರಫೇಲ್​ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಯ 17 ಸ್ಕ್ವಾಡ್ರನ್​ ಗೋಲ್ಡನ್​ ಆ್ಯರೋಸ್​ಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸಿದರು. ಈ ಅದ್ಧೂರಿ ಕಾರ್ಯಕ್ರಮಕ್ಕೆ ಫ್ರಾನ್ಸ್​ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಸಾಕ್ಷಿಯಾದರು.

    59 ಸಾವಿರ ಕೋಟಿ ವೆಚ್ಚದಲ್ಲಿ 36 ರಫೇಲ್ ಸಮರ ವಿಮಾನಗಳನ್ನು ಫ್ರಾನ್ಸ್​ನಿಂದ ಭಾರತ ಖರೀದಿಸುತ್ತಿದೆ. ಈ ಪೈಕಿ ಈ ಐದು ರಫೇಲ್ ವಿಮಾನಗಳು ಜುಲೈ 29ರಂದು ಭಾರತಕ್ಕೆ ಆಗಮಿಸಿವೆ. ಫ್ರಾನ್ಸ್​ನ ಡಸ್ಸಾಲ್ಟ್ ಏವಿಯೇಷನ್ ರಫೇಲ್ ವಿಮಾನಗಳನ್ನು ನಿರ್ವಿುಸಿದೆ. 2021ರೊಳಗೆ 36 ವಿಮಾನಗಳೂ ಭಾರತಕ್ಕೆ ಹಸ್ತಾಂತರವಾಗಲಿದೆ. (ಏಜೆನ್ಸೀಸ್​)

    VIDEO| ರಫೇಲ್​ ವಾಯುಪಡೆ ಸೇರ್ಪಡೆಗೆ ಕ್ಷಣಗಣನೆ: ಯುದ್ಧ ವಿಮಾನಗಳಿಗೆ ಸರ್ವಧರ್ಮ ಪೂಜಾರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts