More

    ಯುದ್ಧ ಸಾಮಗ್ರಿಗಳ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿ

    ಪಿರಿಯಾಪಟ್ಟಣ: ಕಾರ್ಗಿಲ್ ಯುದ್ಧದ ನಂತರ ಭಾರತೀಯ ಸೇನೆಯ ಯೋಚನಾ ಲಹರಿ ಮತ್ತು ದಿಕ್ಕು ಬದಲಾಗಿದೆ ಎಂದು ಭಾರತೀಯ ವಾಯುಸೇನೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ವಾಸುಕಿ ತಿಳಿಸಿದರು.


    ಪಟ್ಟಣದ ಡಿಪಿಬಿಎಸ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಲಯನ್ಸ್ ಕ್ಲಬ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಸಮಾರಂಭದಲ್ಲಿ ಮಾತನಾಡಿದರು.


    ಕಾರ್ಗಿಲ್ ಯುದ್ಧದಿಂದ ಅನೇಕ ಯೋಧರನ್ನು ಕಳೆದುಕೊಂಡೆವು. ಆದರೆ, ಇಂದು ನೆರೆಯ ದೇಶವಾದ ಚೀನಾ ಭಾರತೀಯ ಸೇನೆಯನ್ನು ಕಂಡು ಹೆದರುವಂತಾಗಿದೆ. ನಮ್ಮ ಸೈನಿಕರ ಸಾಹಸ ದೇಶದ ರಕ್ಷಣೆಗೆ ಹೆಚ್ಚಿನ ಬಲತಂದಂತಾಗಿದೆ ಎಂದರು.


    ದೇಶ ಯುದ್ಧ ಸಾಮಗ್ರಿಗಳ ಉತ್ಪಾದನೆಯಲ್ಲಿ ಸ್ವಾಲಂಬಿಯಾಗುತ್ತಿರುವುದು ಹೆಮ್ಮೆಯ ಸಂಗತಿ. ಹಿಂದೆ ರಷ್ಯಾವನ್ನು ಅವಲಂಬಿಸಿತ್ತು. ಈಗ ಸ್ಥಳೀಯವಾಗಿಯೇ ಯುದ್ಧ ಸಾಮಗ್ರಿಗಳನ್ನು ಉತ್ಪಾದಿಸುತ್ತಿರುವುದು ಸಂತೋಷದ ವಿಚಾರ. ಮಾಜಿ ಹಾಗೂ ಹಾಲಿ ಸೈನಿಕರ ಕುಟುಂಬಗಳಿಗೆ ಸ್ಥಳೀಯ ಆಡಳಿತಗಳು ಸೂಕ್ತ ರಕ್ಷಣೆ ಕೊಡಬೇಕು. ಯೋಧರಿಗೆ ಸಮರ್ಪಕ ಗೌರವ, ಅವರ ಕುಟುಂಬದ ರಕ್ಷಣೆಗೆ ಸರ್ಕಾರಗಳು ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.


    ಲಯನ್ಸ್ ಸಂಸ್ಥೆ ಅಧ್ಯಕ್ಷ ಪಿ.ಕೆ.ಮಂಜುನಾಥ್ ಸಿಂಗ್ ಮಾತನಾಡಿದರು. ಪುರಸಭಾ ಸದಸ್ಯರಾದ ಪಿ.ಸಿ.ಕೃಷ್ಣ, ನಿರಂಜನ್, ಪ್ರಕಾಶ್ ಸಿಂಗ್, ಪ್ರೌಢಶಾಲೆಯ ಉಪ ಪ್ರಾಂಶುಪಾಲ ಅಶೋಕ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನವೀನ್ ಕುಮಾರ್, ಮಾಜಿ ಸೈನಿಕರಾದ ಲೋಕೇಶ್, ಕೆ.ಪಿ.ಗಣೇಶ್, ಸಿ.ರಾಮಶೆಟ್ಟಿ, ಲಯನ್ಸ್ ಸಂಸ್ಥೆಯ ವಲಯ ಸಂಚಾಲಕ ಕೆ.ಎ.ಮಹಾದೇವಪ್ಪ, ಖಜಾಂಚಿ ಲವಕುಮಾರ್, ಸಹ ಕಾರ್ಯದರ್ಶಿ ಜೆ.ಗಿರೀಶ್, ಸದಸ್ಯರಾದ ಆನಂದ್, ಕುಮಾರ, ಸುಬ್ರಮಣಿ, ವಕೀಲ ಹರೀಶ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts