More

    ಈ ಭಯಾನಕ ಘಟನೆ ಕೇರಳದಲ್ಲಿ ನಡೆಯಿತಾ? ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಬಹಿರಂಗ!

    ನವದೆಹಲಿ: ನಿರ್ಜನ ಪ್ರದೇಶದಲ್ಲಿ ಯುವಕನೊಬ್ಬ ಯುವತಿಯ ಮೇಲೆ ದೌರ್ಜನ್ಯ ಎಸಗುತ್ತಿರುವ ಮನ ಕದಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಿಂದುಗಳೇ ಅಲ್ಪಸಂಖ್ಯಾತರಾಗಿರುವ ಕೇರಳದಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂದು ಬರೆದು ವೈರಲ್​ ಮಾಡಲಾಗಿದೆ.

    ವಿಡಿಯೋದಲ್ಲಿ ಯುವಕ ಯುವತಿಯನ್ನು ಬೆತ್ತಲೆಗೊಳಿಸಲು ಯತ್ನಿಸುತ್ತಾನೆ ಮತ್ತು ಆಕೆಯ ಸ್ಥಿತಿಯನ್ನು ನೋಡಿ ನಗುತ್ತಾನೆ. ದಯವಿಟ್ಟು ನನ್ನನ್ನು ಬಿಟ್ಟುಬಿಡು ಎಂದು ಯುವತಿ ಕೇಳಿಕೊಂಡರು ಆತ ಬಿಡುವುದೇ ಇಲ್ಲ. ಈ ವೇಳೆ ಆಕೆಯನ್ನು ರಕ್ಷಿಸಲು ಮತ್ತೊಬ್ಬ ಯುವತಿ ಯತ್ನಿಸುತ್ತಾಳೆ. ಅಲ್ಲದೆ, ವಿಡಿಯೋದಲ್ಲಿ ಇನ್ನಿತರ ಯುವಕರ ಧ್ವನಿಯು ಕೇಳುತ್ತದೆ.

    ಈ ಸುದ್ದಿಯ ಅಸಲಿಯತ್ತು ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ಫ್ಯಾಕ್ಟ್​ಚೆಕ್​ ನಡೆಸಿದ್ದು, ವಿಡಿಯೋ ಅಪಪ್ರಚಾರದ ಭಾಗವಾಗಿದೆ ಎಂದು ತಿಳಿದುಬಂದಿದೆ. ಸದ್ಯ ವೈರಲ್​ ಆಗಿರುವ ವಿಡಿಯೋ 3 ವರ್ಷ ಹಳೆಯದು. ಈ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿತ್ತು. ಯುವತಿಯ ಬಾಯ್​ಫ್ರೆಂಡ್​ ಮತ್ತು ಆತನ ಸ್ನೇಹಿತರಿಂದಲೇ ಈ ಕೃತ್ಯ ನಡೆದಿತ್ತು.

    ಇದನ್ನೂ ಓದಿ: ಸಿಸಿಬಿ ರೇಡ್​ಗೂ ಮುನ್ನ ಮೂರು ದಿನಗಳಿಂದ ನೆರೆಹೊರೆಯವರ ಜತೆ ಸಂಜನಾ ಮೀಟಿಂಗ್​ ನಡೆಸಿದ್ದೇಕೆ?

    ಆದರೆ, ಟ್ವಿಟರ್​ ಬಳಕೆದಾರರೊಬ್ಬರು ಈ ವಿಡಿಯೋವನ್ನು ಪೋಸ್ಟ್​ ಮಾಡಿ ಹಿಂದಿಯಲ್ಲಿ ಅಡಿಬರಹ ಬರೆದುಕೊಂಡಿದ್ದು, ಅದರ ಸಾರ ಹೀಗಿದೆ. ಕೇರಳದಲ್ಲಿ ಹುಡುಗಿಯ ಮೇಲೆ ದೌರ್ಜನ್ಯ ಮಾಡುತ್ತಿರುವ ದೃಶ್ಯ ಇದೇ ಮೊದಲೇನಲ್ಲ. ಹಿಂದುಗಳೇ ಅಲ್ಪಸಂಖ್ಯಾತರಾಗಿರುವ ಕೇರಳದಲ್ಲಿ ಇಂತಹ ಘಟನೆಗಳು ಸರ್ವೇ ಸಾಮಾನ್ಯವಾಗಿವೆ ಎಂದು ಬರೆದುಕೊಂಡಿದ್ದು, ವೈರಲ್​ ಮಾಡಿದ್ದಾರೆ.

    ಆದರೆ, ತದನಂತರದಲ್ಲಿ ಟ್ವಿಟರ್​ ಬಳಕೆದಾರ ವಿಡಿಯೋ ಡಿಲೀಟ್​ ಮಾಡಿದ್ದರೂ ವಿಡಿಯೋ ಮಾತ್ರ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ. ಅಲ್ಲದೆ, ಸುಪ್ರೀಂಕೋರ್ಟ್​ ವಕೀಲ ಮತ್ತು ಬಿಜೆಪಿ ವಕ್ತಾರ ಗೌರವ್​ ಭಾಟಿಯಾ ಸಹ ರೀಟ್ವೀಟ್​ ಮಾಡಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ರಾಷ್ಟ್ರೀಯ ಮಹಿಳಾ ರಕ್ಷಣಾ ಆಯೋಗವನ್ನು ಕೇಳಿದ್ದಾರೆ.

    ಈ ಭಯಾನಕ ಘಟನೆ ಕೇರಳದಲ್ಲಿ ನಡೆಯಿತಾ? ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಬಹಿರಂಗ!

    ಇನ್​ವಿಡ್​ (ವಿಡಿಯೋ ವೇರಿಫಿಕೇಶನ್​) ವೇದಿಕೆ ಮೂಲಕ ವಿಡಿಯೋ ಕುರಿತು ಹುಡುಕಾಡಿದಾಗ ವೆಬ್​ಸೈಟ್​ ಒಂದರಲ್ಲಿ 2017ರ ಸೆಪ್ಟೆಂಬರ್​ನಲ್ಲಿ ಈ ಸಂಬಂಧ ವರದಿ ಪ್ರಕಟವಾಗಿರುವುದು ಬೆಳಕಿಗೆ ಬಂದಿದೆ. ಘಟನೆ 2017ರ ಆಗಸ್ಟ್​ ತಿಂಗಳಲ್ಲಿ ಆಂಧ್ರದ ಪ್ರಕಾಶಂ ಜಿಲ್ಲೆಯ ಕನಿಗಿರಿ ಪಟ್ಟಣದಲ್ಲಿ ನಡೆದಿತ್ತು.

    ವರದಿಯ ಪ್ರಕಾರ ಘಟನೆ ನಡೆದ ಸಂದರ್ಭದಲ್ಲಿ ಯುವತಿಗೆ 19 ವರ್ಷ ವಯಸ್ಸಾಗಿತ್ತು. ಆಕೆ ವಿದ್ಯಾರ್ಥಿನಿಯಾಗಿದ್ದು, ಬಾಯ್​ಫ್ರೆಂಡ್​ ಸಾಯ್​ನಿಂದಲೇ 2017ರ ಆಗಸ್ಟ್ 29ರಂದು ಲೈಂಗಿಕ ದೌರ್ಜನ್ಯ ನಡೆದಿತ್ತು.​ ಸಾಯ್​ ಸ್ನೇಹಿತರಾದ ಕಾರ್ತಿಕ್ ಮತ್ತು ಪವನ್​ ದೌರ್ಜನ್ಯವನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದರು. ಮೂವರನ್ನು ಘಟನೆ ನಡೆದ ಒಂದು ತಿಂಗಳ ಬಳಿಕ ಬಂಧಿಸಲಾಗಿತ್ತು.

    ಇದನ್ನೂ ಓದಿ: ಸ್ಯಾಂಡಲ್​ವುಡ್​ನಲ್ಲಿ ಸಂಜನಾ ಗಲ್ರಾನಿ ಆದ್ರೆ, ಮನೆಯಲ್ಲೇ ಬೇರೆ… ಕಾರ್​ ನಂಬರ್​ ರಿಜಿಸ್ಟ್ರೇಷನ್​ನಿಂದ ಬಹಿರಂಗ!

    ಸಂತ್ರಸ್ತ ಯುವತಿಯು ಸೇಹಿತೆ ಜತೆ ಬಾಯ್​ಫ್ರೆಂಡ್​ ಸಾಯ್​ ಭೇಟಿ ಮಾಡಲು ಹೋದಾಗ ಘಟನೆ ನಡೆದಿತ್ತು. ಸಾಯ್​ಗೂ ಮೊದಲೇ ಆಕೆಗೆ ಕಾರ್ತಿಕ್​ ಜತೆ ಸಂಬಂಧ ಇತ್ತು ಎನ್ನಲಾಗಿದೆ. ಸಾಯ್​ ದೌರ್ಜನ್ಯ ಮಾಡುವುದನ್ನು ವಿಡಿಯೋ ಮಾಡುತ್ತಿದ್ದ ಕಾರ್ತಿಕ್​ ತನ್ನೊಂದಿಗಿನ ಸಂಬಂಧ ಕಡಿದುಕೊಂಡ ದ್ವೇಷಕ್ಕೆ ಸಾಯ್​ಗೆ ಪ್ರೋತ್ಸಾಹ ನೀಡುತ್ತಿದ್ದ.

    ಕೇರಳದಲ್ಲಿ ಹಿಂದುಗಳು ಅಲ್ಪಸಂಖ್ಯಾತರೇ?
    2011ರ ಜನಗಣತಿ ಪ್ರಕಾರ ಕೇರಳದಲ್ಲಿ ಹಿಂದುಗಳ ಸಂಖ್ಯೆ ಶೇ. 54.7 ರಷ್ಟಿದೆ. ಉಳಿದಂತೆ ಮುಸ್ಲಿಮರು ( ಶೇ. 26.5) ಮತ್ತು ಕ್ರಿಶ್ಚಿಯನ್ನರು ಶೇ.18.3 ರಷ್ಟಿದ್ದಾರೆ. ಹೀಗಾಗಿ ಕೇರಳದಲ್ಲಿ ಹಿಂದುಗಳು ಅಲ್ಪಸಂಖ್ಯಾತರು ಎಂಬುದು ಸುಳ್ಳು. ಇನ್ನು ವಿಡಿಯೋ ಕುರಿತು ಹೇಳುವುದಾದರೆ ವೈರಲ್​ ವಿಡಿಯೋಗೂ ಕೇರಳಕ್ಕೂ ಸಂಬಂಧವೇ ಇಲ್ಲ. ಈ ಇಲ್ಲ ನಿಜಾಂಶ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. (ಏಜೆನ್ಸೀಸ್​)

    ಲಡಾಖ್​ ಗಡಿಯಲ್ಲಿ ಗುಂಡಿನ ಸದ್ದು- 45 ವರ್ಷಗಳ ನಂತರ ಫೈರಿಂಗ್​! ಕದನದ ಮುನ್ಸೂಚನೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts