More

    ಕಾಲುವೆ ಅಗೆಯುವಾಗ ಕಾರ್ಮಿಕನಿಗೆ ಒಲಿಯಿತಾ ನಿಧಿ? ವೈರಲ್​ ಸುದ್ದಿ ಹಿಂದಿನ ಸತ್ಯಾಂಶ ಹೀಗಿದೆ…

    ನವದೆಹಲಿ: ಹೊಲಸು ಮಿಶ್ರಿತ ಬದಿಯಲ್ಲಿ ಮುರಿದು ಬಿದ್ದಿರುವ ಕಂಟೈನರ್​ನಲ್ಲಿ ಚಿನ್ನದ ನಾಣ್ಯಗಳಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ವುಲಾರ್​ ಕೆರೆ ಬಳಿ ಕಾಲುವೆಯನ್ನು ಅಗೆಯುವಾಗ ಕಾರ್ಮಿಕನಿಗೆ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ಫೋಟೋ ಕುರಿತು ಹೇಳಲಾಗಿದೆ.

    ಫೇಸ್​ಬುಕ್​ ಬಳಕೆದಾರರೊಬ್ಬರ ಈ ಚಿತ್ರವನ್ನು ಶೇರ್​ ಮಾಡಿಕೊಂಡಿದ್ದು, ಬಾರಾಮುಲ್ಲ ಏರಿಯಾದ ಕಾರ್ಮಿಕನೊಬ್ಬನಿಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಪತ್ತೆಯಾಗಿವೆ. ಫೆ. 13ರ ಶನಿವಾರ ಸುಮಾರು 30 ಕಾರ್ಮಿಕರು ಯೋಜನೆಯೊಂದರ ಅಡಿಯಲ್ಲಿ ವುಲಾರ್​ ಕೆರೆ ಬಳಿ ಕಾಲುವೆ ಅಗೆಯುವಾದ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ನೆಟ್ಟಿಗ ಬರೆದುಕೊಂಡಿದ್ದಾರೆ.

    ಇದನ್ನೂ ಓದಿರಿ: ಈಕೆಗೆ ನೇಣು ಹಾಕಲು ಸಿದ್ಧವಾಗಿದೆ ಮಥುರಾ ಜೈಲು- ಸ್ವಾತಂತ್ರ್ಯಾನಂತರದ ಮೊದಲ ಗಲ್ಲುಶಿಕ್ಷೆಗೊಳಗಾಗುವ ಹೆಣ್ಣೀಕೆ!

    ಕಾಲುವೆ ಅಗೆಯುವಾಗ ಕಾರ್ಮಿಕನಿಗೆ ಒಲಿಯಿತಾ ನಿಧಿ? ವೈರಲ್​ ಸುದ್ದಿ ಹಿಂದಿನ ಸತ್ಯಾಂಶ ಹೀಗಿದೆ...

    ಆದರೆ, ಇಂಡಿಯಾ ಟುಡೆ ಆ್ಯಂಟಿ ಫೇಕ್​ನ್ಯೂಸ್​ ವಾರ್​ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲಾಗಿದ್ದು, ನಾಣ್ಯಗಳಿರುವ ಫೋಟೋ ಭಾರತದಲ್ಲ, ಬದಲಾಗಿ ಇಟಾಲಿಯನ್​ ಪಟ್ಟಣ ಕೊಮೊಗೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ. ಹಳೆಯ ಚಿತ್ರಮಂದಿರದ ನವೀಕರಣಗೊಳಿಸುವಾಗ ಕಾರ್ಮಿಕರಿಗೆ ನಾಣ್ಯಗಳು ಪತ್ತೆಯಾಗಿದ್ದು, ಅವುಗಳು ಹಳೆಯ ಸಾಮ್ರಾಜ್ಯಶಾಹಿ ಯುಗಕ್ಕೆ ಸಂಬಂಧಿಸಿದ್ದಾಗಿವೆ.

    ಆದರೆ, ಸದ್ಯ ಫೇಸ್​ಬುಕ್​ನಲ್ಲಿ ಭಾರತದ್ದಲ್ಲಿ ಪತ್ತೆಯಾಗಿವೆ ಎಂದು ವೈರಲ್​ ಮಾಡಲಾಗಿದೆ. ವೈರಲ್​ ಫೋಟೋವನ್ನು ಗೂಗಲ್​ ರಿವರ್ಸ್​ ಸರ್ಚ್​ ಇಂಜಿನಲ್ಲಿ ಹುಡುಕಿದಾಗ “ದಿ ಐರೀಸ್​ ಸನ್​” ವೆಬ್​ಸೈಟ್​ನಲ್ಲಿ 2018ರ ಸೆಪ್ಟೆಂಬರ್​ 10ರಂದು ನಾಣ್ಯಕ್ಕೆ ಸಂಬಂಧಿಸಿದ ಸುದ್ದಿ ಪತ್ತೆಯಾಗಿದೆ.

    ಇದನ್ನೂ ಓದಿರಿ: ದುಡ್ಡಿನ ದಾಹ- ಯುವತಿಯ ಸುಟ್ಟುಹಾಕಿದ ಪಾಪಿಗಳು: ಕೇಸ್‌ ಮುಚ್ಚಿಹಾಕಲು ಅಡ್ಡ ಬಂತು ಈ ಆಡಿಯೋ ರಿಕಾರ್ಡಿಂಗ್‌!

    ವರದಿಯ ಪ್ರಕಾರ ನಾಣ್ಯಗಳು 1500 ವರ್ಷ ಹಳೆಯದ್ದು ಎನ್ನಲಾಗಿದೆ. ಅವುಗಳನ್ನು ಚಿತಾಭಸ್ಮ ತುಂಬಿಡುವುದರಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಇಟಲಿಯಲ್ಲಿರುವ ಚಿತ್ರಮಂದಿರವನ್ನು ನವೀಕರಣಗೊಳಿಸುವಾಗ ಕಾರ್ಮಿಕರಿಗೆ ನಾಣ್ಯಗಳು ಪತ್ತೆಯಾಗಿವೆ. ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಇಟಾಲಿಯನ್​ ಪ್ರವಾಸೋದ್ಯಮ ಇಲಾಖೆ ಸಹ 2018ರ ಸೆ. 7ರಂದು ಶೇರ್​ ಮಾಡಿಕೊಂಡಿದೆ.

    ಆದರೆ, ನಾಣ್ಯಗಳು ಜಮ್ಮು ಮತ್ತು ಕಾಶ್ಮೀರದಲ್ಲೇ ಪತ್ತೆಯಾದವು ಎಂಬುದನ್ನು ಸಾಬೀತು ಮಾಡುವ ಯಾವುದೇ ವರದಿಯಾಗಲಿ, ದಾಖಲೆಗಳಾಗಲಿ ಪತ್ತೆಯಾಗಲಿಲ್ಲ. ಹೀಗಾಗಿ ಚಿನ್ನದ ನಾಣ್ಯಗಳ ಕುರಿತು ಪ್ರಸ್ತತು ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಇಂಡಿಯಾ ಟುಡೆ ನಡೆಸಿದ ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿದೆ. (ಏಜೆನ್ಸೀಸ್​)

    ಇದನ್ನೂ ಓದಿರಿ: ಪಾಸ್​ಪೋರ್ಟ್- ಬೋರ್ಡಿಂಗ್​ ಪಾಸ್​ ಕೊಟ್ಟು ಮದ್ವೆಗೆ ಆಹ್ವಾನಿಸಿದ ನವಜೋಡಿ! ಸಖತ್​ ವೈರಲ್​ ಆಗ್ತಿದೆ ಈ ಮದ್ವೆ

    ದಿಶಾ ರವಿ ಹಿಂದೂನಾ ಕ್ರಿಶ್ಚಿಯನ್ನಾ? ಆಕೆಯ ಸ್ನೇಹಿತರು ಹೇಳಿದ್ದೇನು?

    ನಗುತ್ತಲೇ ಸೆಲ್ಫಿಗೆ ಪೋಸ್​​ ನೀಡಿ ಗರ್ಭಿಣಿ ಪತ್ನಿಯನ್ನು ಬೆಟ್ಟದಿಂದ ನೂಕಿದ ಪತಿ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

    ರಾಮ ಮಂದಿರ ಹೆಸ್ರಲ್ಲಿ ಯಾರ‍್ಯಾರೋ ಹಣ ಲೂಟಿ ಮಾಡ್ತಾರೆ, ನನ್ನ ಮನೆಗೂ ಬಂದು ಬೆದರಿಕೆ ಹಾಕಿದ್ರು: ಎಚ್​ಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts