More

    ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಒಂದೇ ಚಕ್ರದ ಸೈಕಲ್​ಏರಿ ಹೊರಟ ಕೇರಳ ಯುವಕ! ಕಾರಣ ಹೀಗಿದೆ..

    ಪಣಜಿ: ದ್ವಿಚಕ್ರ ಹೊಂದಿದ ಸಾಂಪ್ರದಾಯಿಕ ಸೈಕಲ್‌ನಲ್ಲಿ ನೂರಾರು ಕಿಮೀ ಯಾತ್ರೆ ಕೈಗೊಳ್ಳುವುದನ್ನು ಕಾಣಬಹುದು. ಆದರೆ ಕೇರಳದ ಯುವಕನೊಬ್ಬ ದಕ್ಷಿಣ ಭಾರತದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರ ಕಣಿವೆಯವರೆಗೆ ಒಂದು ಚಕ್ರದ ಸೈಕಲ್‌ನಲ್ಲಿ 6ಸಾವಿರ ಕಿಲೋಮೀಟರ್‌ ಕ್ರಮಿಸುವ ಗುರಿಯೊಂದಿಗೆ ವಿಶಿಷ್ಟ ಮತ್ತು ಧೈರ್ಯಶಾಲಿ ಪ್ರವಾಸವನ್ನು ಕೈಗೊಂಡಿದ್ದಾನೆ.

    ಇದನ್ನೂ ಓದಿ: ಕೇಜ್ರಿವಾಲ್‌ಗೆ ಬಿಗ್ ರಿಲೀಫ್.. ಎಫ್‌ಐಆರ್ ತಿರಸ್ಕರಿಸಿದ ಕೋರ್ಟ್!

    ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು ಒಂದು ಚಕ್ರದ ಸೈಕಲ್​ನಲ್ಲಿ ಸನಿತ್ ಕಣ್ಣೂರಿನ ಅಭಿಷೇಕ್ ಮತ್ತು ತಾಹಿರ್ ಜೊತೆಗೆ ಯಾತ್ರೆ ಕೈಗೊಂಡಿದ್ದಾರೆ.

    ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಸನಿತ್, ಸೈಕಲ್ ನ ಹಿಂಬದಿ ಚಕ್ರದ ಮೇಲೆ ಮಾತ್ರ ಸೈಕ್ಲಿಂಗ್​ ಮಾಡುತ್ತ ತೆರಳುತ್ತಿದ್ದಾನೆ. ಕಳೆದ ಡಿಸೆಂಬರ್ 15 ರಂದು ತನ್ನ ಇಬ್ಬರು ಸ್ನೇಹಿತರೊಂದಿಗೆ ಕನ್ಯಾಕುಮಾರಿಯಲ್ಲಿ ಯಾತ್ರೆ ಪ್ರಾರಂಭಿಸಿದರು.

    ಸೈಕ್ಲಿಸ್ಟ್‌ಗಳು ಪ್ರಸ್ತುತ ಗೋವಾದಲ್ಲಿದ್ದು, ಇದುವರೆಗೆ 2,700 ಕಿಲೋಮೀಟರ್ ಸೈಕಲ್ ತುಳಿದಿದ್ದಾರೆ. ‘ಸೇ ನೋ ಟು ಡ್ರಗ್ಸ್’ ಎಂಬ ಸಂದೇಶದೊಂದಿಗೆ ಸನಿತ್ ಮತ್ತು ಆತನ ಸ್ನೇಹಿತರು ದಾರಿಯುದ್ದಕ್ಕೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

    ತಮ್ಮ ವಿಶೇಷ ಸೈಕ್ಲಿಂಗ್ ಯಾತ್ರೆಯ ಕುರಿತು ಮಾತನಾಡಿದ ಸನಿತ್, ಪ್ರತಿದಿನ ಸರಾಸರಿ 50 ರಿಂದ 60 ಕಿಲೋಮೀಟರ್ ಒಂದೇ ಚಕ್ರದ ಸೈಕಲ್ ಓಡಿಸುತ್ತೇನೆ. ಇಂದಿನ ಯುವಕರಲ್ಲಿ ಸಾಹಸ ಚಟುವಟಿಕೆಗಳು ಕಡಿಮೆಯಾಗುತ್ತಿವೆ, ಅವರು ತಮ್ಮ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ಅಂಟಿಕೊಂಡಿರುವುದು ಕಂಡುಬರುತ್ತದೆ ಎನ್ನುತ್ತಾನೆ.

    ಬದಲಾವಣೆಗಾಗಿ ವ್ಯಸನಕಾರಿ ಸಾಧನಗಳಿಂದ ವಿರಾಮವನ್ನು ಕಂಡುಕೊಳ್ಳಲು ಬಯಸುವ ಯುವಕರಿಗೆ ಸನಿತ್ ಮತ್ತು ಅವರ ಇಬ್ಬರು ಸ್ನೇಹಿತರು ಸ್ಫೂರ್ತಿಯಾಗಿದ್ದಾರೆ.

    ಪಠ್ಯದಿಂದ ಬಾಬ್ರಿ ಧ್ವಂಸ ಉಲ್ಲೇಖ ಕೈಬಿಟ್ಟಿ ಎಸಿಇಆರ್​ಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts